ಇಂಡಿಗೋಗೆ ಹೊಸ ಬಾಸ್: ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ | William Walsh Named New Indigo Ceo Former British Airways Chief San

ಇಂಡಿಗೋಗೆ ಹೊಸ ಬಾಸ್: ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ | William Walsh Named New Indigo Ceo Former British Airways Chief San



ಇಂಡಿಗೋಗೆ ಹೊಸ ಬಾಸ್: ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ | William Walsh Named New Indigo Ceo Former British Airways Chief San

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ’ (IndiGo), ಜಾಗತಿಕ ವಾಯುಯಾನ ಕ್ಷೇತ್ರದ ದಿಗ್ಗಜ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಸಿಇಒ (CEO) ಆಗಿ ನೇಮಕ ಮಾಡಿದೆ.ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ಆಗಿ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ. 

ನವದೆಹಲಿ (ಮಾ.31): ಭಾರತದ ಮುಂಚೂಣಿ ಬಜೆಟ್ ವಿಮಾನಯಾನ ಸಂಸ್ಥೆ ‘ಇಂಡಿಗೋ’, ಬ್ರಿಟಿಷ್ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಮಂಗಳವಾರ ನೇಮಕ ಮಾಡಿದೆ. ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ಆಗಿ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.

ವಾಯುಯಾನ ಕ್ಷೇತ್ರದಲ್ಲಿ ‘ವಿಲ್ಲಿ’ ಎಂದೇ ಜನಪ್ರಿಯರಾಗಿರುವ ವಿಲಿಯಂ ವಾಲ್ಷ್ ಅವರು ದಶಕಗಳ ಅನುಭವ ಹೊಂದಿರುವ ದಿಗ್ಗಜರು. ಪ್ರಸ್ತುತ ಇವರು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯ (IATA) ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

IATA ನಲ್ಲಿ ಅವರ ಅವಧಿಯು ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 3ರ ಒಳಗಾಗಿ ಅವರು ಇಂಡಿಗೋ ಸಂಸ್ಥೆಯನ್ನು ಸೇರಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಇಂಡಿಗೋ ಸಂಸ್ಥೆಯು ಶೇ. 64ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಭಾರತದ ನಂಬರ್ 1 ಏರ್‌ಲೈನ್ ಎನಿಸಿಕೊಂಡಿದೆ.

ಒಟ್ಟು 440 ವಿಮಾನಗಳನ್ನು ಇಂಡಿಗೋ ಹೊಂದಿದ್ದು, ಪ್ರತಿದಿನ 2200ಕ್ಕೂ ಹೆಚ್ಚು ಹಾರಾಟವನ್ನು ನಡೆಸುತ್ತದೆ. 95 ದೇಶೀಯ ಮತ್ತು 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತಾಣಗಳಿಗೆ ಇಂಡಿಗೋ ವಿಮಾನ ಪ್ರಯಾಣಿಸುತ್ತದೆ.ಚಕಡಿಮೆ ದರ ಮತ್ತು ಸಮಯಪ್ರಜ್ಞೆಗೆ ಹೆಸರಾಗಿರುವ ಇಂಡಿಗೋ, ಭಾರತದ ವಾಯುಯಾನ ಕ್ರಾಂತಿಯ ಶ್ರೇಷ್ಠ ಸಂಸ್ಥೆ ಎನಿಸಿಕೊಂಡಿದೆ.

ನೇಮಕಾತಿಯನ್ನು ಸ್ವಾಗತಿಸಿದ ಇಂಡಿಗೋ ಅಧ್ಯಕ್ಷ ವಿಕ್ರಮ್ ಸಿಂಗ್ ಅವರು, “ವಿಲ್ಲಿ ಇಂಡಿಗೋದ ಚುಕ್ಕಾಣಿ ಹಿಡಿಯುತ್ತಿರುವುದು ನಮಗೆ ಸಂತಸ ತಂದಿದೆ. ಅವರು ಹಲವಾರು ವಿಮಾನಯಾನ ಸಂಸ್ಥೆಗಳಲ್ಲಿ ಅದ್ಭುತ ನಾಯಕತ್ವದ ದಾಖಲೆಯನ್ನು ಹೊಂದಿರುವ ಜಾಗತಿಕ ನಾಯಕ. ದೊಡ್ಡ ಮಟ್ಟದ ಕಾರ್ಯಾಚರಣೆಗಳನ್ನು ನಿರ್ವಹಿಸುವ ಅವರ ಅನುಭವವು, ಸ್ಪರ್ಧಾತ್ಮಕ ವಾತಾವರಣದಲ್ಲಿ ಇಂಡಿಗೋವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ,” ಎಂದಿದ್ದಾರೆ.

ಹೊಸ ಸಿಇಒ ಜವಾಬ್ದಾರಿಗಳೇನು?

ನೂತನ ಸಿಇಒ ಆಗಿ ವಾಲ್ಷ್ ಅವರು ಇಂಡಿಗೋದ ಒಟ್ಟಾರೆ ನಿರ್ವಹಣೆ ಮತ್ತು ಕಾರ್ಯತಂತ್ರದ ದಿಕ್ಕನ್ನು ನಿರ್ಧರಿಸಲಿದ್ದಾರೆ. ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು. ಕಂಪನಿಯ ನೆಟ್‌ವರ್ಕ್ ಮತ್ತು ವಾಣಿಜ್ಯ ಯೋಜನೆಯನ್ನು ವಿಸ್ತರಿಸುವುದು. ಗ್ರಾಹಕರ ಅನುಭವವನ್ನು ಸುಧಾರಿಸುವತ್ತ ಗಮನಹರಿಸುವುದು ಅವರ ಪ್ರಮುಖ ಗುರಿಯಾಗಿರಲಿದೆ.

“ವಾಯುಯಾನ ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ ಮತ್ತು ಈ ಬದಲಾವಣೆಯ ಮುಂಚೂಣಿಯಲ್ಲಿರಲು ಇಂಡಿಗೋ ಸಜ್ಜಾಗಿದೆ. ಸಂಸ್ಥೆಯ ಸಹೋದ್ಯೋಗಿಗಳೊಂದಿಗೆ ಸೇರಿ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಸುಸ್ಥಿರ ಮೌಲ್ಯಗಳನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ,” ಎಂದು ವಿಲಿಯಂ ವಾಲ್ಷ್ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *