Transgender Attack: ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ: ಮೂವರು ಆರೋಪಿಗಳು ವಶಕ್ಕೆ | Mysuru Transgender Assault Muslim Youth Attack Amruth Layout Gvd

Transgender Attack: ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ: ಮೂವರು ಆರೋಪಿಗಳು ವಶಕ್ಕೆ | Mysuru Transgender Assault Muslim Youth Attack Amruth Layout Gvd



Transgender Attack: ಮೈಸೂರಿನಲ್ಲಿ ಮಂಗಳಮುಖಿಯರ ಮೇಲೆ ಕ್ರೂರ ಹಲ್ಲೆ: ಮೂವರು ಆರೋಪಿಗಳು ವಶಕ್ಕೆ | Mysuru Transgender Assault Muslim Youth Attack Amruth Layout Gvd

ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ.

ಮೈಸೂರು (ಮಾ.31): ಅವರೆಲ್ಲ ಮಂಗಳ ಮುಖಿಯರು. ಸಮಾಜದ ಮೂಲ ಸ್ಥರದಿಂದ ದೂರ ತಳ್ಳಲ್ಪಟ್ಟಿರುವವರು. ಜೀವನೋಪಾಯಕ್ಕಾಗಿ ಭಿಕ್ಷಾಟನೆ ಸೇರಿ ನಾನಾ ಕಸರತ್ತು ಮಾಡುವವರು. ಅಂತಹ ಅಸಹಾಯಕರನ್ನೇ ಹಣಕ್ಕಾಗಿ ಹಿಂಸಿಸಿ ಮುಖವನ್ನು ಕುಯ್ಯಲಾಗಿದೆ. ಮಂಗಳಮುಖಿಯರ ಮೇಲೆ ಮುಸ್ಲಿಂ ಯುವಕರು ಮಾಡಿದ ಅಟ್ಟಹಾಸ ಸಾಂಸ್ಕೃತಿಕ ನಗರಿ ಮೈಸೂರು ಜನರನ್ನು ಬೆಚ್ಚಿ ಬೀಳಿಸಿದೆ.

ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ಹಲ್ಲೆ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ಚಾಕು, ತಲ್ವಾರ್‌ಗಳಿಂದ ಹಲ್ಲೆ ನಡೆಸಿರುವ ಮುಸ್ಲಿಂ ಯುಕರು, ಓರ್ವ ಮಂಗಳಮುಖಿಯ ಮುಖವನ್ನು ಚಾಕುವಿನಿಂದ ಕುಯ್ದಿದ್ದಾರೆ. ಅಲ್ಲದೆ ಗಲಾಟೆ ಬಿಡಿಸಲು ಬಂದ ಮತ್ತೊಬ್ಬ ಮಂಗಳ ಮುಖಿಗೂ ಹಲ್ಲೆ ಮಾಡಲಾಗಿದೆ.

ಮೈಸೂರಿನ‌ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದ ಹಲ್ಲೆಯಲ್ಲಿ ಪಾರಿ (30), ಆನಮ್ (21) ಎಂಬ ಮಂಗಳಮುಖಿಯರು ಗಾಯಗೊಂಡಿದ್ದಾರೆ. ಅದೇ ಏರಿಯಾದ ತಬ್ರೇಸ್ ಅಲಿಯಾಸ್ ಗುಡಿ ಮತ್ತು ಸಯ್ಯದ್ ಫರ್ದಿನ್ ಎಂಬುವರೇ ತಲ್ವಾರ್‌ನಿಂದ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಘಟನೆ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೆಡಿಕಲ್ ಸ್ಟೋರ್ ಗೆ ಹೋಗಿ ಔಷಧಿ ತೆಗೆದುಕೊಂಡು ಬರುವಾಗ ನನ್ನ ಬಳಿ ಇರುವ ದುಡ್ಡನ್ನು ಕೇಳಿದ ಆರೋಪಿಗಳು ನಿರಾಕರಿಸಿದಾಗ ಹಲ್ಲೆ ಮಾಡಿ ಗಲಾಟೆ ಮಾಡಿದ್ದಾರೆ.

ಮೂವರು ಆರೋಪಿಗಳು ವಶಕ್ಕೆ

ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆಮಾಡಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಪರ್ದೀನ್ ಅಲಿಯಾಸ್ ಪದ್ದು, ದಾದಾಪಿ‌ ಅಲಿಯಾಸ್ ಗುಡಿ, ರಿಯನ ಹಾಗೂ ಇತರರ ಮೇಲೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮೂರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಬದುಕು ನಡೆಸಲು ಭಿಕ್ಷೆ ಬೇಡುವ ಇಂತಹವರ ಬಳಿಯೇ ಹಣ ಕೀಳಲು ಮುಂದಾದ ನೀಚರ ಬಗ್ಗೆ ಅಸಹ್ಯ ಹುಟ್ಟಿರೋದು ಮಾತ್ರ ಸತ್ಯ.



Source link

Leave a Reply

Your email address will not be published. Required fields are marked *