Headlines

ಶ್ರವಣ ದೋಷದಿಂದ ಬಳಲುತ್ತಿರುವ ಗಾಯಕಿ ಅಲ್ಕಾ ಯಾಗ್ನಿಕ್; ಇನ್ಮುಂದೆ ಹಾಡೋದು ಅನುಮಾನ

ಶ್ರವಣ ದೋಷದಿಂದ ಬಳಲುತ್ತಿರುವ ಗಾಯಕಿ ಅಲ್ಕಾ ಯಾಗ್ನಿಕ್; ಇನ್ಮುಂದೆ ಹಾಡೋದು ಅನುಮಾನ


ಶ್ರವಣ ದೋಷದಿಂದ ಬಳಲುತ್ತಿರುವ ಗಾಯಕಿ ಅಲ್ಕಾ ಯಾಗ್ನಿಕ್; ಇನ್ಮುಂದೆ ಹಾಡೋದು ಅನುಮಾನ

ಬಾಲಿವುಡ್ನ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ (ಅಲ್ಕಾ ಯಾಗ್ನಿಕ್) ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷ ತಮಗೆ ಅಪರೂಪದ ಶ್ರವಣ ದೋಷ (ಸಂವೇದನಾ ನರ ನರಗಳ ಶ್ರವಣ ನಷ್ಟ) ಇರುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಆತಂಕದ ವಿಚಾರ ಏನೆಂದರೆ, ಅವರು ಸಮಸ್ಯೆಯಿಂದ ಗುಣಮುಖರಾಗಿಲ್ಲ. ಈ ನೋವಿನ ಸುದ್ದಿಯನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ಇನ್ಮುಂದೆ ಅವರು ಹಾಡುವುದು ಕಷ್ಟ ಎಂಬಂತಾಗಿದೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅಲ್ಕಾ ಯಾಗ್ನಿಕ್ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡಿದ್ದಾರೆ. ‘ನಾನು ಇನ್ನೂ ಆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಪದೇ ಪದೇ ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಆದರೆ ಹಾಡಲು ನನ್ನ ಆರೋಗ್ಯ ಸಹಾಯ ಮಾಡುತ್ತಿಲ್ಲ. ಪ್ರಸ್ತುತ ಯಾವುದಾದರೂ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಕಾ ಯಾಗ್ನಿಕ್ ಅವರು ಹಾಡುವುದು ನಿಲ್ಲಿಸಿ 2 ವರ್ಷ ಆಗಿದೆ. ಅವರ ಧ್ವನಿಯಲ್ಲಿ ಕೊನೆಯದಾಗಿ ಮೂಡಿಬಂದ ಹಾಡು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಂ ಕಾಲ್ಜಾ’. 1980 ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಈಗ 60 ವರ್ಷ ವಯಸ್ಸು. ಇತ್ತೀಚೆಗಷ್ಟೇ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೆಲವು ದಿನಗಳ ಹಿಂದೆ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದರು. ಬೇಡಿಕೆಯ ಉತ್ತುಂಗದಲ್ಲಿ ಇದ್ದಾಗಲೇ ಅವರು ಇಂತಹ ನಿರ್ಧಾರ ತೆಗೆದುಕೊಂಡರು. ಸತತವಾಗಿ ಹಿಟ್ ಹಾಡುಗಳನ್ನು ನೀಡುತ್ತಿದ್ದ ಅರಿಜಿತ್ ಅವರ ಈ ಹಠಾತ್ ನಿರ್ಧಾರ ಸಂಗೀತ ಪ್ರಿಯರಲ್ಲಿ ಬೇಸರ ತಂದಿದೆ. ಈಗ ಅಲ್ಕಾ ಯಾಗ್ನಿಕ್ ಕೂಡ ಹಾಡುವುದನ್ನು ನಿಲ್ಲಿಸಿರುವುದು ಇನ್ನಷ್ಟು ಬೇಸರ ಮೂಡಿಸಿದೆ.

ಇದನ್ನೂ ಓದಿ: ಅಲ್ಕಾ ಯಾಗ್ನಿಕ್ ಕಿವಿ ಕೇಳದಿರಲು ಈ ಸೋಂಕು ಕಾರಣ, ಅದು ಬರದಂತೆ ಈ ರೀತಿ ಎಚ್ಚರಿಕೆ ವಹಿಸಿ

ಅಲ್ಕಾ ಯಾಗ್ನಿಕ್ ಅವರು ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಹಿಂದಿಯೇ ತೆಲುಗು, ತಮಿಳು, ಬೆಂಗಾಲಿ, ಪಂಜಾಬಿ ಮುಂತಾದ ಭಾಷೆಯ ಹಾಡುಗಳನ್ನು ಕೂಡ ಅವರು ಹಾಡಿದ್ದಾರೆ. ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಅನಾರೋಗ್ಯದ ಕಾರಣ ಹಾಡಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *