
ಬೆಂಗಳೂರು, ಮಾ,31: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ವಿದ್ಯುತ್ ಸರಬರಾಜು ಕಂಪನಿಗಳ (ESCOMs) ನಷ್ಟವನ್ನು ಸರಿದೂಗಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ದರ ಪರಿಷ್ಕರಣೆಗೆ ಹಸಿರು ನಿಶಾನೆ ತೋರಿಸಿದ್ದು, ಏಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ವಿಶೇಷವೆಂದರೆ, ಈ ದರ ಏರಿಕೆಯು 2025-26ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಪ್ರಕಟಿಸಲಾಗಿದೆ. ಅಂದರೆ, ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಬಳಕೆಯಲ್ಲಿರುವ ವಿದ್ಯುತ್‌ಗೆ ಬಳಸುವವರು ಈಗ ಹೆಚ್ಚುವರಿ ಹಣವನ್ನು ಪಡೆದರು. ಈ ಬಾಕಿ ಮೊತ್ತವನ್ನು ಬೆಸ್ಕಾಂ (BESCOM) ಸೇರಿದಂತೆ ಎಲ್ಲಾ ಎಸ್ಕಾಂಗಳು 2026-27ರ ಆರ್ಥಿಕ ವರ್ಷದ ಬಿಲ್‌ಗಳಲ್ಲಿ ವಸೂಲಿ ಮಾಡಲಾಗುವುದು.
ಕೈಗಾರಿಕೆ ಮತ್ತು ಹೋಟೆಲ್, ಸಿನಿಮಾ ಹಾಲ್‌ಗಳ ವಾಣಿಜ್ಯ ಸಂಕೀರ್ಣಗಳಲ್ಲಿ ಗರಿಷ್ಠ ದರ ಏರಿಕೆ ಕಂಡುಬಂದಿದೆ, ಇದು ಉತ್ಪಾದನಾ ವೆಚ್ಚ ಮತ್ತು ಸೇವಾ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿದ್ಯುತ್ ವರದಿಗಳ ಪ್ರಕಾರ. ದಾಖಲೆ ಮಟ್ಟದಲ್ಲಿ ಈ ಭಾರೀ ಕರೆಂಟ್ ಬಳಸಲಾಗಿದೆ ಎಂದು ಹೇಳಿದೆ.
ಇನ್ನು ಬೆಂಗಳೂರಿನಲ್ಲಿ ಹೆಚ್ಚು ವಿದ್ಯುತ್ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ತಿಂಗಳಿನ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಒಂದು ಸಣ್ಣ ರಾಜ್ಯ ಬಳಸುವ ವಿದ್ಯುತ್ ಕೇವಲ ಬೆಂಗಳೂರು ನಗರವೊಂದರಲ್ಲೇ ಬಳಸುತ್ತಿದೆ ಎಂಬ ಅಚ್ಚರಿಯ ವಿಚಾರವೊಂದು ಹೊರಬಂದಿದೆ. ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ.
ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!
ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದ ವಿದ್ಯುತ್ ಬಳಕೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಹೋಟೆಲ್‌ಗಳು ಮತ್ತು ಮನೆಗಳು ಗ್ಯಾಸ್ ಬದಲಿಗೆ ಇಂಡಕ್ಷನ್ ಸ್ಟೌವ್ ಅಥವಾ ಹೀಟರ್‌ಗಳಿಗೆ ಬದಲಾದರೆ, ಗ್ರಿಡ್‌ನಲ್ಲಿ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ ಎಂದು ಹೇಳಲಾಗಿದೆ.
ವರದಿ: ಲಕ್ಷ್ಮೀ ನರಸಿಂಹ ಮೆಟ್ರೋ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ