Headlines

Kayadu Lohar: ‘ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ’: ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್! | Actress Kayadu Lohar Asks For Time To Learn South Indian Languages Gvd

Kayadu Lohar: ‘ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ’: ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್! | Actress Kayadu Lohar Asks For Time To Learn South Indian Languages Gvd



Kayadu Lohar: ‘ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ’: ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್! | Actress Kayadu Lohar Asks For Time To Learn South Indian Languages Gvd

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, “ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?” ಎಂದು ಕಯಾದುಗೆ ಪ್ರಶ್ನೆ ಕೇಳಿದರು.

ಟೊವಿನೊ ಥಾಮಸ್ ನಟನೆಯ ‘ಪಳ್ಳಿಚಟ್ಟಂಬಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಭಾಷೆ ಕಲಿಯುವ ಬಗ್ಗೆ ಮುಗಿಲ್‌ಪೇಟೆ ಬ್ಯೂಟಿ ಕಯಾದು ಲೋಹರ್ ಮಾತನಾಡಿದ್ದಾರೆ. ತಾನು ದಕ್ಷಿಣ ಭಾರತದವಳಲ್ಲ, ಆದರೂ ಇಲ್ಲಿನ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ, ಸ್ವಲ್ಪ ಸಮಯ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ. ಟೊವಿನೊ ಥಾಮಸ್ ನಾಯಕರಾಗಿ ನಟಿಸಿರುವ ” ಸಿನಿಮಾವನ್ನು ಡಿಜೋ ಜೋಸ್ ಆಂಟನಿ ನಿರ್ದೇಶಿಸಿದ್ದಾರೆ. ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರದಲ್ಲಿ ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಕಯಾದು ಹೇಳಿದ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, “ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?” ಎಂದು ಕಯಾದುಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಕಯಾದು, ತಾನು ದಕ್ಷಿಣ ಭಾರತದವಳಲ್ಲ, ಆದರೆ ಇಲ್ಲಿನ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾನು ಹಲವು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ದಕ್ಷಿಣ ಭಾರತದಿಂದ ಬಂದವಳಲ್ಲ. ಆದರೆ ನನಗೆ ಇಲ್ಲಿನ ಭಾಷೆಗಳೆಂದರೆ ಬಹಳ ಇಷ್ಟ. ಹಾಗಾಗಿ ನಾನು ಭಾಷೆ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನಾವು ಬೇರೆ ಭಾಷೆಯ ಚಿತ್ರರಂಗಕ್ಕೆ ಹೋದಾಗ, ಅಲ್ಲಿನ ಪ್ರೇಕ್ಷಕರಿಗೆ ನಮ್ಮನ್ನು ಹತ್ತಿರವಾಗಿಸುವುದು ಮತ್ತು ಸಂಪರ್ಕಿಸುವುದು ಭಾಷೆಯ ಮೂಲಕವೇ. ನನಗೆ ಸ್ವಲ್ಪ ಸಮಯ ಕೊಡಿ, ನಾನು ತಮಿಳು ಮತ್ತು ಮಲಯಾಳಂ ಎರಡನ್ನೂ ಚೆನ್ನಾಗಿ ಮಾತನಾಡುತ್ತೇನೆ.

ಆದರೆ, ಒಂದೇ ಸಮನೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವಾಗ ಇದು ಸ್ವಲ್ಪ ಕಷ್ಟವಾಗುತ್ತದೆ ಎಂದು ಕಯಾದು ಲೋಹರ್ ಹೇಳಿದರು. ವರ್ಲ್ಡ್ ವೈಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನೌಫಲ್ ಮತ್ತು ಬ್ರಿಜೇಶ್ ಹಾಗೂ ಸಿ ಕ್ಯೂಬ್ ಬ್ರೋಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಚಾಣುಕ್ಯ ಚೈತನ್ಯ ಚರಣ್ ಅವರು ‘ಪಳ್ಳಿಚಟ್ಟಂಬಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 10ರಂದು ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 1950-60ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಹೊಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಈ ಚಿತ್ರದ ‘ಕಾಟ್ಟುಚೆಂಬಕಂ’ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೇಕ್ಸ್ ಬಿಜೋಯ್ ಸಂಗೀತ ಸಂಯೋಜಿಸಿದ್ದು, ಬಾಲಿವುಡ್‌ನ ಹಿಟ್ ಗಾಯಕ ವಿಶಾಲ್ ಮಿಶ್ರಾ ಈ ಹಾಡಿನ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಿದ್ದಾರೆ. ನಿರ್ದೇಶಕ ಡಿಜೋ ಜೋಸ್ ಆಂಟನಿ ಮತ್ತು ಜೇಕ್ಸ್ ಬಿಜೋಯ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಈ ಹಿಂದೆ ‘ಕ್ವೀನ್’, ‘ಜನ ಗಣ ಮನ’, ಮತ್ತು ‘ಮಲಯಾಳಿ ಫ್ರಂ ಇಂಡಿಯಾ’ ಚಿತ್ರಗಳಲ್ಲಿ ಈ ಜೋಡಿ ಟ್ರೆಂಡಿಂಗ್ ಹಾಡುಗಳನ್ನು ನೀಡಿತ್ತು. ಹಾಗಾಗಿ ಪ್ರೇಕ್ಷಕರು ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ವಿಜಯರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆಡಮಂಗಲಂ, ಪ್ರಶಾಂತ್ ಅಲೆಕ್ಸ್ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ.



Source link

Leave a Reply

Your email address will not be published. Required fields are marked *