
ರಾಮನಗರ, ಮಾರ್ಚ್ 31: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಕೊಗ್ಗೆದೊಡ್ಡಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಏಕ ಏಕಿ ಗ್ರಾಮದತ್ತ ಬಂದ ಗಜಪಡೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಆನೆಗಳನ್ನು ಕಂಡು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಿರುಚಿದ್ದು, ಕೂಗಾಟ ಕೇಳಿ ಗಜಪಡೆ ಸ್ಥಳದಿಂದ ಕಾಲ್ಕಿತ್ತಿವೆ. ಇವು ಸಂಗಮ ವನ್ಯಜೀವಿಧಾಮದಿಂದ ಬಂದಿರೋ ಆನೆಗಳು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.