
ಒಂದು ಚಿತ್ರರಂಗದ (ಚಲನಚಿತ್ರ ಇಂಡಸ್ಟ್ರಿ) ದೊಡ್ಡ ಸ್ಟಾರ್‌ಗಳು ಮತ್ತೊಂದು ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದು ತೀರಾ ಸಾಮಾನ್ಯ. ಹಲವು ಪ್ರಯತ್ನಗಳಿಂದ ಇದು ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹವಾ ಹೆಚ್ಚಾದ ಬಳಿಕ ಈ ಸಂಪ್ರದಾಯ ಇನ್ನೂ ಇದೆ. ಅದರಲ್ಲೂ ಮಲೆಯಾಳಂ ಚಿತ್ರರಂಗದ ಸ್ಟಾರ್ ನಟರನ್ನು ಬೇರೆ ಬೇರೆ ಭಾಷೆಯ ಚಿತ್ರರಂಗದವರು ತುಸು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ಮೋಹನ್ ಲಾಲ್ ಇನ್ನೂ ಹಲವು ನಟರು ಪರ ಭಾಷೆಯ ಸ್ಟಾರ್ ನಟರುಗಳೊಂದಿಗೆ ನಟಿಸಿದ್ದಾರೆ. ಆದರೆ ಇದೀಗ ಮಲಯಾಳಂ ಸ್ಟಾರ್ ನಟರಲ್ಲಿ ಒಬ್ಬರಾದ ಟೊವಿನೊ ಥಾಮಸ್, ಜೂ ಎನ್ ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಆಯ್ಕೆ ಆಗಿದ್ದರು, ಆದರೆ ಸಿನಿಮಾದಿಂದ ಹೊರಬಂದಿದ್ದು, ಟಾಲಿವುಡ್ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ನಿರ್ದೇಶಿಸಿ, ಜೂ ಎನ್ ಟಿಆರ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಕನ್ನಡದ ರುಕ್ಮಿಣಿ ವಸಂತ್ ಈ ಸಿನಿಮಾದ ನಾಯಕಿ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಭಿನ್ನ ರೀತಿಯ ಕಥೆ ಸಿನಿಮಾಕ್ಕಾಗಿ ಹೆಣೆದಿರುವ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು. ಅವರ ಹಿಂದಿನ ಸಿನಿಮಾ ‘ಸಲಾರ್’ನಲ್ಲಿ ಪ್ರಭಾಸ್ ಜೊತೆಗೆ ಮಲೆಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ಸಹ ನೀಲ್ ಹಾಕಿಸಿಕೊಂಡಿದ್ದಾರೆ. ಈ ಬಾರಿ ಜೂ ಎನ್ ಟಿಆರ್ ಸಿನಿಮಾಕ್ಕೆ ಮಲೆಯಾಳನ್ನ ಟೊವಿನೊ ಥಾಮಸ್ ಅವರನ್ನು ಪ್ರಶಾಂತ್ ನೀಲ್ ಕಾಸ್ಟ್ ಮಾಡಿದ್ದರು. ಆದರೆ ಅವರು ಸಿನಿಮಾದಿಂದ ಹೊರಬಂದಿದ್ದಾರೆ.
ಈ ಬಗ್ಗೆ ಟೊವಿನೊ ಥಾಮಸ್, ‘ನಾನು ಜೂ ಟಿಆರ್ ಸಿನಿಮಾದಲ್ಲಿ ನಟಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನಗೆ ತೆಲುಗು ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ಆದರೆ ಈ ಚಿತ್ರರಂಗದ ಪದ್ಧತಿಗಳು ನಮ್ಮ ಮಲೆಯಾಳಂ ಚಿತ್ರರಂಗದಲ್ಲಿ ಬಹಳ ಭಿನ್ನವಾಗಿದೆ. ನಾವು ಒಂದು ಶೆಡ್ಯೂಲ್ ನಲ್ಲಿ ಸಿನಿಮಾ ಮುಗಿಸಿಬಿಡುತ್ತೇವೆ. ಆದರೆ ತೆಲುಗು ಚಿತ್ರರಂಗದವರು ಹಲವು ಶೆಡ್ಯೂಲ್‌ಗಳಲ್ಲಿ ಚಿತ್ರೀಕರಣ ಮಾಡುತ್ತಾರೆ’ ಎಂದು ಹೇಳಿದರು.
ಇದನ್ನೂ ಓದಿ:’ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’
ಮಾತು ಮುಂದುವರೆಸಿ, ‘ನಾನು ಒಮ್ಮೆ ಬೇರೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಒಂದು ಸಿನಿಮಾದಲ್ಲಿ ನಟಿಸುವಾಗ ಬೇರೆ ಸಿನಿಮಾದಲ್ಲಿ ನಟಿಸುವುದಿಲ್ಲ. ಆದರೆ ನಾನು ತೆಲುಗು ಸಿನಿಮಾವನ್ನು ಒಪ್ಪಿಕೊಂಡೆ. ಅಷ್ಟರಲ್ಲಿ ನಾನು ನಾಲ್ಕೈದು ಮಲಯಾಳಂ ಸಿನಿಮಾ ಮುಗಿಸುತ್ತೀನಿ. ನಾನು ತೆಲುಗು ಸಿನಿಮಾದಲ್ಲಿ ನಟಿಸಿದರೆ ನಾನು ಒಪ್ಪಿಕೊಂಡಿರುವ ಮಲಯಾಳಂ ಸಿನಿಮಾಗಳಿಗೆ ಕಷ್ಟವಾಗುತ್ತದೆ. ಆದ್ದರಿಂದ ತೆಲುಗು ಸಿನಿಮಾದಲ್ಲಿ ನಾನು ನಟಿಸಲಿಲ್ಲ’ ಟೊವಿನೊ ಥಾಮಸ್.
ಇದೀಗ ಟೊವಿನೊ ಥಾಮಸ್ ಸಿನಿಮಾದಿಂದ ಹೊರನಡೆದಿರುವ ಕಾರಣ ಪ್ರಶಾಂತ್ ನೀಲ್ ಹೊಸ ನಟರೊಬ್ಬರನ್ನು ಹುಡುಕಬೇಕಾಗಿದೆ. ಆ ಪಾತ್ರ ಕನ್ನಡದ ಯುವ ನಟನಿಗೆ ಸಿಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ