Sanjay Dutt ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು | Sanjay Dutt Resto Bar Discontinued Controversial Cocktail With Live Fish

Sanjay Dutt ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು | Sanjay Dutt Resto Bar Discontinued Controversial Cocktail With Live Fish



Sanjay Dutt ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು | Sanjay Dutt Resto Bar Discontinued Controversial Cocktail With Live Fish

ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು, ಜೀವಂತ ಬೆಟ್ಟಾ ಮೀನುನ್ನು ಕಾಕ್‌ಟೇಲ್‌ನಲ್ಲಿ ಹಾಕಿ ಕೊಡಲಾಗುತ್ತಿತ್ತು. ಕಾಕ್‌ಟೇಲ್‌ನಲ್ಲಿ ಮೀನು ಹಾಕಿ ನೀಡುವುದೇಕೆ? 

ಮುಂಬೈ (ಮಾ.31) ಧುರಂಧರ್ 2 ಸಿನಿಮಾ ಮೂಲಕ ಭಾರಿ ಸದ್ದು ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಸಂಜಯ್ ದತ್ ಮುಂಬೈನಲ್ಲಿ ರೆಸ್ಟೋ ಬಾರ್ ಆರಂಭಿಸಿದ್ದರು. ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿನ ಕಾಕ್‌ಟೇಲ್ ಭಾರಿ ವಿವಾದ ಸೃಷ್ಟಿಸಿದೆ. ಇಲ್ಲಿ ನೀಡುವ ಕಾಕ್‌ಟೇಲ್‌ನಲ್ಲಿ ಜೀವಂತ ಮೀನು ಹಾಕಿ ನೀಡಲಾಗುತ್ತದೆ. ಇದು ಪ್ರಾಣಿ ಪ್ರೀಯರ ಕಂಗೆಣ್ಣಿಗೆ ಗುರಿಯಾಗಿದೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ರೆಸ್ಟೋ ಬಾರ್ ಜನಪ್ರಿಯ ಕಾಕ್‌ಟೇಲ್ ಸ್ಥಗಿತಗೊಳಿಸಿದೆ.

ಕಾಕ್‌ಟೇಲ್‌ನಲ್ಲಿ ಬೆಟ್ಟಾ ಫಿಶ್

ರೆಸ್ಟೋ ಬಾರ್‌ನಲ್ಲಿ ನೀಡುವ ಕಾಕ್‌ಟೇಲ್ ಡ್ರಿಂಕ್‌ನಲ್ಲಿ ಜೀವಂತ ಬೆಟ್ಟಾ ಮೀನು ಹಾಕಿ ನೀಡಲಾಗುತ್ತದೆ. ಕಾಕ್‌ಟೇಲ್‌ನಲ್ಲಿ ಬೆಟ್ಟಾ ಮೀನು ಹಾಕಿದ ಬಳಿಕ ಅದರ ಮೇಲೆ ಬೆಂಕಿ ಕಿಡಿ ತಾಗಿಸಲಾಗುತ್ತದೆ. ಕಾಕ್‌ಟೇಲ್‌ನಲ್ಲಿನ ಆಲ್ಕೋಹಾಲ್‌ಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಬಳಿಕ ಗ್ರಾಹಕರಿಗೆ ನೀಡಲಾಗುತ್ತದೆ.

ಜನಪ್ರಿಯ ಕಾಕ್‌ಟೇಲ್ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ವಿವಾದ ಆರಂಭಗೊಂಡಿತ್ತು. ಪ್ರಾಣಿ ಪ್ರಿಯರು ಮೀನಿಗೆ ಹಿಂಸೆ ನೀಡುವ ಈ ಕಾಕ್‌ಟೇಲ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ರೆಸ್ಟೋ ಬಾರ್ ಕೂಡ ತನ್ನ ಜನಪ್ರಿಯ ಡ್ರಿಂಕ್ ಕುರಿತು ವಿಡಿಯೋ ಪೋಸ್ಟ್ ಮಾಡಿತ್ತು. ವಿವಾದ ಬೆನ್ನಲ್ಲೇ ಈ ವಿಡಿಯೋ ಡೀಲಿಟ್ ಮಾಡಿದೆ.

ಕಾಕ್‌ಟೇಲ್ ರದ್ದುಗೊಳಿಸಿದ ರೆಸ್ಟೋರೆಂಟ್

ರೆಸ್ಟೋ ಬಾರ್‌ ವಿರುದ್ದ ಆಕ್ರೋಶಗಳು, ಟೀಕೆಗಳು ತೀವ್ರಗೊಳ್ಳುತ್ತಿದ್ದಂತೆ ಸಂಜಯ್ ದತ್ ಮಾಲೀಕತ್ವದ ರೆಸ್ಟೋರೆಂಟ್ ಈ ಕಾಕ್‌ಟೇಲ್ ರದ್ದುಗೊಳಿಸಿದೆ. ಇದೇ ವೇಳೆ ರೆಸ್ಟೋರೆಂಟ್ ಸ್ಪಷ್ಟನೆ ನೀಡಿದೆ. ಇದು ಪ್ರಮೋಶನ್ ವಿಡಿಯೋಗಾಗಿ ಮಾಡಲಾಗಿದೆ. ಇಲ್ಲಿ ಮೀನಿಗೆ ಯಾವುದೇ ರೀತಿಯ ನೋವು ಮಾಡಿಲ್ಲ ಎಂದಿದ್ದಾರೆ. ಆದರೆ ಪ್ರಮೋಶನಲ್ ವಿಡಿಯೋದಲ್ಲಿ ಸ್ವತಃ ಸಂಜಯ್ ದತ್ ಕಾಕ್‌ಟೇಲ್‌ಗೆ ಬೆಂಕಿ ಕಿಡಿ ತಾಕಿಸುವ ವಿಡಿಯೋಗಳು ಕೋಲಾಹಲ ಸೃಷ್ಟಿ ಮಾಡಿತ್ತು.

ಸಾರ್ವಜನಿಕರಿಂದಲೂ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪ್ರಮೋಶನಲ್ ವಿಡಿಯೋಗೆ ಮಾತ್ರ ಈ ರೀತಿ ಮಾಡಿ ಗ್ರಾಹಕರು ಬಂದಾಗ ಬೇರೆ ರೀತಿಯ ಕಾಕ್‌ಟೇಲ್ ನೀಡುವುದು ಎಷ್ಟು ಸರಿ, ಇದು ಜನರಿಗೆ ಮೋಸ ಮಾಡಿದಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *