ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ | Moving Ksrtc Bus Door Open Girls Fell On The Road Caught On Cctv Suc

ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ | Moving Ksrtc Bus Door Open Girls Fell On The Road Caught On Cctv Suc



ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ | Moving Ksrtc Bus Door Open Girls Fell On The Road Caught On Cctv Suc

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ, ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಕ್ಕ-ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಬಸ್​ನಿಂದ ಕೆಳಕ್ಕೆ ಬಿದ್ದಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಇದರ ಭಯಾನಕ ದೃಶ್ಯಗಳು ಸೆರೆಯಾಗಿವೆ. ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯವಾಗಲಿಲ್ಲ. ಹಿಂದಿನಿಂದ ಬೇರೆ ಬಸ್​ ಅಥವಾ ಇನ್ನಾವುದೇ ವಾಹನ ಬರುತ್ತಿದ್ದರೆ ಮಾತ್ರ ಪ್ರಕರಣದ ಭೀಕರತೆ ಊಹಿಸಲೂ ಕಷ್ಟವಾಗಿತ್ತು.

ಘಟನೆ ವಿವರ

ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಗೇರುಕಟ್ಟೆ ಸ್ಟಾಪ್​ನಲ್ಲಿ ಅಕ್ಕ-ತಂಗಿ ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿನ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದೆ. ಈ ವೇಳೆ ಬಾಗಿಲ ಬಳಿಯೇ ನಿಂತಿದ್ದ ಅಕ್ಕ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ತಂಗಿ ಕೂಡ ಬಿದ್ದಿದ್ದಾರೆ. ವೇಗದಲ್ಲಿ ಬಸ್​ ಇದ್ದುದರಿಂದ ಅವರು ಉರುಳಿ ಉರುಳಿ ರಸ್ತೆಯ ಮೇಲೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಸಿಸಿಟಿವಿಯಲ್ಲಿ ಸೆರೆ

ಈ ಇಡೀ ದೃಶ್ಯವು ರಸ್ತೆಯ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಕ್ಕ- ತಂಗಿ ಬೀಳುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ನೆರವಿಗೆ ಬಂದಿದ್ದರಿಂದ ಇನ್ನಷ್ಟು ಅನಾಹುತ ತಪ್ಪಿದೆ. ತಂಗಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹೋಗುತ್ತಿರುವುದಾಗಿ ಹೇಳಲಾಗುತ್ತಿದ್ದು, ಅಕ್ಕ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾಳೆ. ಅಕ್ಕ-ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನ ನಿರ್ವಹಣೆ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಬಸ್​ನ ಬಾಗಿಲಿನ ಬಳಿ ನಿಂತುಕೊಳ್ಳುವವರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ. ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿ ಮಕ್ಕಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *