
ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ.
ನಟ ರಿಷಬ್ ಶೆಟ್ಟಿ ಸ್ನೇಹ ಜೀವಿ.. ಮಾತಿನ ಮೇಲೆ ನಿಲ್ಲೋ ವ್ಯಕ್ತಿತ್ವ ರಿಷಬ್ ಶೆಟ್ಟಿಯದ್ದು. ಆದ್ರೆ ಶೆಟ್ರುಗೆ ಅದೇನು ನೋವಾಯ್ತೋ ಏನೋ.. ತನ್ನ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದ ಫ್ರೆಂಡ್ಸ್, ಆತ್ಮೀಯರನ್ನೆಲ್ಲಾ ಅನ್ ಫಾಲೋ ಮಾಡ್ಬಿಟ್ರು. ಆದರೆ ಈ ಡಿವೈನ್ ಸ್ಟಾರ್ಗೆ ಹೊಸ ಸ್ನೇಹಿತನೊಬ್ಬ ಸಿಕ್ಕಿದ್ದಾರೆ. ಅದು ಯಾಕೆ..? ಡಿವೈನ್ ಸ್ಟಾರ್ ಪಟ್ಟಕ್ಕೇರಿರೋ ನಟ ರಿಷಬ್ ಶೆಟ್ಟಿ ಈಗ ಯಾಕೋ ಪತ ಬದಲಿಸಿದ್ದಾರೆ. ಶೆಟ್ರಿಗೆ ಅದ್ಯಾರು ಯಾವ ಬೇಜಾರ್ ಮಾಡಿದ್ರೋ ಗೊತ್ತಿಲ್ಲ.
ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ. ರಿಷಬ್ ಶೆಟ್ಟಿ ಸ್ನೇಹ ಜೀವಿ. ಇವರ ಫ್ರೆಂಡ್ಸ್ ಬಳಗ ದೊಡ್ಡದೆ. ಆದ್ರೆ ಅದು ಶೆಟ್ರು ಗ್ಯಾಂಗ್ ಮಾತ್ರ ಅನ್ನೋದು ಗಮನಿಸಬೇಕು. ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹೀಗೆ ತನ್ನ ಊರಿನ ಸುತ್ತ ಮುತ್ತ ಇದ್ದ ಕರಾವಳಿ ಹುಡುಗರೇ ರಿಷಬ್ಗೆ ತುಂಬಾ ಆತ್ಮೀಯರು.
ಆದ್ರೆ ಅವರೆಲ್ಲಾ ಈಗ ಶೆಟ್ರು ಜೊತೆ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಬಟ್ ರಿಷಬ್ ಗೆ ಹೊಸ ಫ್ರೆಂಡ್ ಒಬ್ರು ಸಿಕ್ಕಿಬಿಟ್ಟಿದ್ದಾರೆ. ಅವ್ರೇ ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ. ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈಗ ಅವರ ಫ್ರೆಂಡ್ಸ್ ಸರ್ಕಲ್ ಭಾರೀ ಸ್ಟ್ರಾಂಗ್ ಆಗಿದೆ. ದೊಡ್ಡದಾಗಿದೆ. ತೆಲುಗು, ತಮಿಳು, ಹಿಂದಿ ಎಲ್ಲ ಇಂಡಸ್ಟ್ರಿಗಳಲ್ಲೂ ರಿಷಬ್ ಫ್ರೆಂಡ್ ಹುಟ್ಟಿಕೊಂಡಿದ್ದಾರೆ.
ವಿಶೇಷವಾಗಿ ತಮಿಳಿನ ವಿಜಯ್ ಸೇತುಪತಿ ಜೊತೆಗಿನ ಸ್ನೇಹ ಈಗ ಟಾಕ್ ಆಫ್ ದಿ ಇಂಡಸ್ಟ್ರಿ ಆಗಿದೆ. ಕಾಂತಾರ ಗೆದ್ದಾಗ ರಿಷಬ್ಗೆ ಪರಭಾಷಾ ಚಿತ್ರರಂಗದ ಹಲವು ಕರೆ ಮಾಡಿ ಶುಭಾಷಯ ಹೇಳಿದ್ರು. ಅವರಲ್ಲಿ ವಿಜಯ್ ಸೇತುಪತಿ ಕೂಡ ಒಬ್ರು. ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್ ವೇದಿಕೆಯೊಂದರಲ್ಲಿ ರಿಷಬ್ ಹಾಗೂ ವಿಜಯ್ ಸೇತುಪತಿ ಮುಖಾಮುಖಿ ಆಗಿದ್ದು, ಇಬ್ಬರ ಸ್ನೇಹದ ಬಗ್ಗೆ ಮಾತನಾಡಿದ್ರು.
ಪ್ಯಾನ್ ಇಂಡಿಯಾ ಫೇಸ್
ವಿಜಯ್ ಸೇತುಪತಿ ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಟಿಸಬೇಕು ಅಂತ ಕೇಳಿದ್ದಾರೆ. ಇದಕ್ಕೆ ರಿಷಬ್ ಖಂಡಿತ ಮಾಡೋಣ ಅಂದಿದ್ದಾರೆ. ಸೋ ಎರಡು ವಿಭಿನ್ನ ಇಂಡಸ್ಟ್ರಿಗಳ ಪವರ್ಫುಲ್ ಪರ್ಫಾರ್ಮರ್ಸ್ ಒಟ್ಟಿಗೆ ಬರುತ್ತಾರೆ ಅನ್ನೋ ನಿರೀಕ್ಷೆ ಈಗಲೇ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಒಟ್ಟಿನಲ್ಲಿ, ರಿಷಬ್ ಶೆಟ್ಟಿ ಈಗ ಕೇವಲ ಕನ್ನಡದ ಸ್ಟಾರ್ ಅಲ್ಲ ಎಲ್ಲಾ ಇಂಡಸ್ಟ್ರಿಗಳನ್ನು ಕನೆಕ್ಟ್ ಮಾಡ್ತಿರೋ ಪ್ಯಾನ್ ಇಂಡಿಯಾ ಫೇಸ್ ಅನ್ನೋದಂತು ನಿಜ.