ಕ್ರಿಶ್ಚಿಯನ್‌ ಸಂಪ್ರದಾಯದಂತೆ ಪ್ರಕಾಶ್‌ ರಾಜ್‌ ತಾಯಿ ಅಂತಿಮ ಸಂಸ್ಕಾರ, ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆದಿದ್ದೆಲ್ಲಿ?

ಕ್ರಿಶ್ಚಿಯನ್‌ ಸಂಪ್ರದಾಯದಂತೆ ಪ್ರಕಾಶ್‌ ರಾಜ್‌ ತಾಯಿ ಅಂತಿಮ ಸಂಸ್ಕಾರ, ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆದಿದ್ದೆಲ್ಲಿ?

ಕ್ರಿಶ್ಚಿಯನ್‌ ಸಂಪ್ರದಾಯದಂತೆ ಪ್ರಕಾಶ್‌ ರಾಜ್‌ ತಾಯಿ ಅಂತಿಮ ಸಂಸ್ಕಾರ, ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆದಿದ್ದೆಲ್ಲಿ?

ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ಹೈದರಾಬಾದ್‌ನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು, ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಆಡುಗೋಡಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (85) ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಾರ್ಚ್ 30ರಂದು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಹೈದರಾಬಾದ್‌ನಲ್ಲಿ ನಿಧನರಾದ ತಾಯಿಯ ಪಾರ್ಥಿವ ಶರೀರವನ್ನು ಪ್ರಕಾಶ್ ರಾಜ್ ಅವರು ಮಾರ್ಚ್ 31ರಂದು ಬೆಳಿಗ್ಗೆ ವಿಶೇಷ ವ್ಯವಸ್ಥೆಯ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಬಂದರು.

ಬೆಂಗಳೂರಿನ ಶಾಂತಿನಗರದಲ್ಲಿರುವ ಸೆಂಟ್ ಮೈಕಲ್ ಚರ್ಚ್‌ನಲ್ಲಿ ಮೃತರ ಅಂತಿಮ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಕುಟುಂಬಸ್ಥರು ಮತ್ತು ಆಪ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ವೇಳೆ ಪ್ರಕಾಶ್‌ ರಾಜ್‌ ಅವರ ಮಗಳು ಸೇಂಟ್‌ ಮೈಕೆಲ್‌ ಚರ್ಚ್‌ನಲ್ಲಿ ತಮ್ಮ ಅಜ್ಜಿಯ ಬಗ್ಗೆ ಮಾತನಾಡಿದರು,

ಅಜ್ಜಿಯ ಅಗಲಿಕೆಯಿಂದ ಪ್ರಕಾಶ್ ರಾಜ್ ಅವರ ಪುತ್ರ ತೀವ್ರವಾಗಿ ಕಣ್ಣೀರು ಹಾಕುತ್ತಿದ್ದಾಗ, ತಾಯಿ ಕಳೆದುಕೊಂಡ ದುಃಖದಲ್ಲಿದ್ದರೂ ಸಹ ಪ್ರಕಾಶ್ ರಾಜ್ ಅವರು ಮಗನ ಪಕ್ಕ ನಿಂತು ಆತನನ್ನು ಸಮಾಧಾನಪಡಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಅಂತಿಮ ವಿಧಿವಿಧಾನಗಳ ನಂತರ ಬೆಂಗಳೂರಿನ ಆಡುಗೋಡಿ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಸಕಲ ಧಾರ್ಮಿಕ ವಿಧಿಗಳೊಂದಿಗೆ ಸ್ವರ್ಣಲತಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಪ್ರಕಾಶ್ ರಾಜ್ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *