
ಮಾಸ್ಕೋ, ಮಾರ್ಚ್ 31: ಇರಾನ್ ಮೇಲೆ ಅಮೆರಿಕ ಭೂದಾಳಿಗೆ ಅಣಿಯಾಗುತ್ತಿರುವ ಶಂಕೆ ಇದೆ. ಕೆಲ ದಿನಗಳಿಂದ ಅಮೆರಿಕವು ಇರಾನ್ ಸುತ್ತಲೂ ತನ್ನ ಸೈನಿಕರನ್ನು ಸಜ್ಜುಗೊಳಿಸುತ್ತಿದೆ. ಯಾವುದೇ ಕ್ಷಣದಲ್ಲಿ ಅದು ಗ್ರೌಂಡ್ ಇನ್ವೇಶನ್ ಅಥವಾ ಭೂ ದಾಳಿ (ನೆಲದ ಆಕ್ರಮಣ) ಆರಂಭಿಸಬಹುದು ಎನ್ನುವ ವದಂತಿಗಳಿವೆ. ಇರಾನ್ ತಾನು ಈ ದಾಳಿ ಎದುರಿಸಲು ಸಿದ್ಧ ಇರುವುದಾಗಿ ಹೇಳುತ್ತಿದೆ. ಇದೇ ವೇಳೆ, ಇರಾನ್ ಮೇಲೆ ಅಮೆರಿಕವೇನಾದರೂ ಭೂದಾಳಿಗೆ ಇಳಿದರೆ ರಷ್ಯಾ ತನ್ನ ಚೆಚೆನ್ ಹೋರಾಟಗಾರರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದು ಇರಾನ್ನ ಪ್ರೆಸ್ ಟಿವಿ ವಾಹಿನಿಯ ವರದಿಯಲ್ಲಿ ತಿಳಿಸಲಾಗಿದೆ.
ಈ ವರದಿಯ ಪ್ರಕಾರ, ಅಮೆರಿಕದ ತುಕಡಿಗಳು ಇರಾನ್ ನೆಲದ ಮೇಲೆ ಕಾಲಿಟ್ಟರೆ ತಾವು ಅಖಾಡಕ್ಕೆ ಇಳಿಯಲು ಸಿದ್ಧ ಇರುವುದಾಗಿ ಚೆಚನ್ಯಾದ ಮಿಲಿಟರಿ ಘಟಕಗಳು ಹೇಳಿವೆ. ಇದೇನಾದರೂ ನಿಜವೇ ಆದಲ್ಲಿ ಇರಾನ್ ಯುದ್ಧವು ಹೆಚ್ಚು ವ್ಯಾಪಕವಾಗಿ ಪಡೆಯುವ ಅಪಾಯವಿದೆ, ಜಾಗತಿಕ ಆರ್ಥಿಕತೆಗೆ ಧಕ್ಕೆಯಾಗುವುದು.
ಇದನ್ನೂ ಓದಿ: ಅಮೆರಿಕದಿಂದ ತೈಲ ಪಡೆಯಿರಿ, ಇಲ್ಲವೇ ಹಾರ್ಮುಜ್‌ಗೆ ಹೋಗಿ ಪಡೆದುಕೊಳ್ಳಿ: ಬ್ರಿಟನ್ ರಾಷ್ಟ್ರಗಳನ್ನು ಚುಚ್ಚಿದ ಟ್ರಂಪ್
ಯಾರು ಈ ಚೆಚನ್ಯಾ ಹೋರಾಟಗಾರರು?
ಚೆಚನ್ಯಾ ರಿಪಬ್ಲಿಕ್ ಭಾಗವಾಗಿರುವ ಒಂದು ಪ್ರಾಂತ್ಯ. ಇದರ ಮುಖ್ಯಸ್ಥ ರಮಜಾನ್ ಕಡಿರೋವ್. ಈತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆಪ್ತ. ಕಡಿರೋವ್ ಅವರ ಬಳಿ ಪ್ರಬಲ ಮಿಲಿಟರಿ ಪಡೆಯೇ ಇದೆ. ಈ ಪಡೆಯು ರಷ್ಯಾಗಿಂತ ಹೆಚ್ಚಾಗಿ ಕಡಿರೋವ್ಗೆ ನಿಷ್ಠವಾಗಿದೆ.
ಈ ಪಡೆಯ ಹಿಂದಿನ ಕಥೆಯೂ ರೋಚಕವೇ ಇದೆ. 80, 90ರ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಉಕ್ರೇನ್, ಪೋಲ್ಯಾಂಡ್ ಇತ್ಯಾದಿ ಹಲವು ದೇಶಗಳು ಸ್ವತಂತ್ರ ದೇಶಗಳಾಗಿ ಬೇರ್ಪಟ್ಟವು. ಚೆಚನ್ಯಾ ಕೂಡ ಬೇರೆಯಾಗಲು ಯತ್ನಿಸಿತು. ರಷ್ಯಾ ಮತ್ತು ಚೆಚನ್ಯಾ ಮಧ್ಯೆ ಎರಡು ಯುದ್ಧಗಳೇ ನಡೆದವು. ಎರಡನೇ ಯುದ್ಧದ ನಂತರ ರಷ್ಯಾ ಚೆಚನ್ಯಾದ ಪ್ರತ್ಯೇಕತಾವಾದಿಗಳ ಹುಟ್ಟಡಗಿಸಿತು. ರಷ್ಯಾ ಪರ ಇದ್ದ ಕಡಿರೋವ್ ಕುಟುಂಬವನ್ನು ಚೆಚನ್ಯಾದ ಆಡಳಿತಕ್ಕೆ ಕೂರಿಸಿತು.
ಇದನ್ನೂ ಓದಿ: ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು
ರಮಜಾನ್ ಕಡಿರೋವ್ ಅವರು ಬಹಳ ಗಟ್ಟಿಯಾದ ಮಿಲಿಟರಿ ಪಡೆಯನ್ನೇ ಕಟ್ಟಿದ್ದಾರೆ. ಈ ಪಡೆಗಳು ಕಡಿರೋವ್ ಅವರಿಗೆ ಪೂರ್ಣ ನಿಷ್ಠೆ ಇದೆ. ಈ ಹೋರಾಟದ ಸೈನಿಕರ ಶಸ್ತ್ರಾಸ್ತ್ರಗಳಿವೆ. ಕಡಿರೋವ್ ಮೂಲಕ ರಷ್ಯಾದ ನಾಯಕತ್ವವು ಈ ಚೆಚನ್ಯಾ ಹೋರಾಟಗಾರರನ್ನು ಅಗತ್ಯವಾಗಿ ಬಳಸುತ್ತಿದೆ. ಈಗ ಪುಟಿನ್ ಮನವಿ ಕಡಿರೋವ್ ಅವರು ತಮ್ಮ ಪ್ರಬಲ ಮಿಲಿಟರಿ ಪಡೆಗಳನ್ನು ಇರಾನ್‌ನಲ್ಲಿ ನಿಯೋಜಿಸಬಹುದು. ಇದರಿಂದ ರಷ್ಯಾ ನೇರವಾಗಿ ಯುದ್ಧಕ್ಕೆ ಧುಮುಕಿದಂತಾಗದೇ ಇದ್ದರೂ ಪರೋಕ್ಷವಾಗಿ ಇರಾನ್‌ಗೆ ನೆರವು ಕೊಟ್ಟಂತಾಗುತ್ತದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ