Strait of Hormuz to India ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? | Strait Of Hormuz To India Shipping Time And Drone Attack Protection 2026

Strait of Hormuz to India ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? | Strait Of Hormuz To India Shipping Time And Drone Attack Protection 2026



Strait of Hormuz to India ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? | Strait Of Hormuz To India Shipping Time And Drone Attack Protection 2026

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮಾರ್ಗವು ಅನಿಶ್ಚಿತವಾಗಿದೆ. ಈ ಲೇಖನವು ಹಾರ್ಮುಜ್‌ನಿಂದ ಭಾರತದ ಕರಾವಳಿಗೆ, ವಿಶೇಷವಾಗಿ ಗುಜರಾತ್ ಮತ್ತು ಮುಂಬೈಗೆ, ಹಡಗು ತಲುಪಲು ಬೇಕಾಗುವ ಸಮಯ, ಇಂಧನ ಬಳಕೆ ಮತ್ತು ಪ್ರಯಾಣದ ದುಬಾರಿ ವೆಚ್ಚದ ಬಗ್ಗೆ ವಿವರಿಸುತ್ತದೆ.

ಸದ್ಯ ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ಸಂಘರ್ಷ ಹಾರ್ಮುಜ್ ಜಲಸಂಧಿಯ ಮೇಲೆ ಕರಿನೆರಳು ಬಿದ್ದಿದೆ. ಇರಾನ್ ಈಗ ಈ ಮಾರ್ಗದಲ್ಲಿ ಆಯ್ದ ದೇಶಗಳ ಹಡಗುಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಸುಂಕದ ಹೊರೆಯನ್ನು ಕೂಡ ಹೇರಿದೆ. ವಿಶ್ವದ ಅತ್ಯಂತ ಜನನಿಬಿಡ ಮತ್ತು ಆಯಕಟ್ಟಿನ ಸಮುದ್ರ ಮಾರ್ಗವಾಗಿರುವ ಇದು ಭಾರತದ ಪಾಲಿಗೆ ಅತ್ಯಂತ ಮುಖ್ಯವಾದದ್ದು. ಹಾಗಾದರೆ, ಈ ಜಲಸಂಧಿಯಿಂದ ಭಾರತದ ಕರಾವಳಿ ತಲುಪಲು ಒಂದು ಹಡಗಿಗೆ ಎಷ್ಟು ಸಮಯ ಬೇಕು? ಅಲ್ಲಿನ ಇಂಧನ ಲೆಕ್ಕಾಚಾರವೇನು? ಬನ್ನಿ ನೋಡೋಣ.

ಹಾರ್ಮುಜ್‌ನಿಂದ ಭಾರತದ ಕರಾವಳಿ ತಲುಪಲು ಎಷ್ಟು ದಿನ ಬೇಕು?

ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿಯಿಂದ ಹೊರಟ ಹಡಗು ಭಾರತದ ಪಶ್ಚಿಮ ಕರಾವಳಿಯನ್ನು ತಲುಪಲು 2 ರಿಂದ 3 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಇದು ಹಡಗಿನ ವೇಗ ಮತ್ತು ತಲುಪಬೇಕಾದ ಬಂದರಿನ ಮೇಲೆ ಅವಲಂಬಿತವಾಗಿರುತ್ತದೆ. ಬಹುತೇಕ ವಾಣಿಜ್ಯ ಹಡಗುಗಳು ಸಮುದ್ರದಲ್ಲಿ ಗಂಟೆಗೆ ಸರಾಸರಿ 24 ರಿಂದ 31 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ. ಈ ವೇಗವು ಸಮುದ್ರದ ಹವಾಮಾನ ಮತ್ತು ಹಡಗಿನ ತೂಕಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.

ಇರಾನ್‌ನಿಂದ ಗುಜರಾತ್ ಮತ್ತು ಮುಂಬೈಗೆ ತಲುಪಲೌ ಎಷ್ಟು ಸಮಯ ಬೇಕು?

ಮಾರ್ಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಗುಜರಾತ್‌ನ ಕಾಂಡ್ಲಾ ಅಥವಾ ಮುಂದ್ರಾ ಬಂದರುಗಳಿಗೆ ಬರುವ ಹಡಗುಗಳು ಅತ್ಯಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತವೆ. ಹಾರ್ಮುಜ್‌ನಿಂದ ಈ ಬಂದರುಗಳಿಗೆ ಬರಲು ಸುಮಾರು 36 ರಿಂದ 40 ಗಂಟೆಗಳು ಸಾಕು. ಅದೇ ಹಡಗುಗಳು ಮಹಾರಾಷ್ಟ್ರದ ಮುಂಬೈ ಬಂದರನ್ನು ತಲುಪಬೇಕೆಂದರೆ ಸ್ವಲ್ಪ ಹೆಚ್ಚು ಅಂದರೆ 50 ರಿಂದ 55 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಹಡಗಿನ ವೇಗದಲ್ಲಿ ಅಲ್ಪ ವ್ಯತ್ಯಾಸವಾದರೂ ಒಟ್ಟು ಪ್ರಯಾಣದ ಸಮಯದಲ್ಲಿ ಗಂಟೆಗಟ್ಟಲೆ ವ್ಯತ್ಯಾಸ ಉಂಟಾಗುತ್ತದೆ.

ಭಾರತಕ್ಕೆ ತಲುಪಲು ಎಷ್ಟು ಇಂಧನ ಬಳಸಲಾಗುತ್ತೆ?

ಸಮುದ್ರದ ಮೇಲಿನ ಈ ಪ್ರಯಾಣದಲ್ಲಿ ಇಂಧನ ಬಳಕೆ ಎಂಬುದು ಹಡಗಿನ ಗಾತ್ರ ಮತ್ತು ಅದು ಹೊತ್ತಿರುವ ಸರಕಿನ ಮೇಲೆ ನಿಂತಿದೆ. ಬೃಹತ್ ಪ್ರಮಾಣದ ಸರಕು ಹೊತ್ತ ಕಂಟೈನರ್ ಹಡಗುಗಳು ದಿನಕ್ಕೆ ಸುಮಾರು 150 ರಿಂದ 250 ಟನ್ ಇಂಧನವನ್ನು ಕುಡಿಯುತ್ತವೆ. ಇದಕ್ಕೆ ಹೋಲಿಸಿದರೆ ಮಧ್ಯಮ ಗಾತ್ರದ ಹಡಗುಗಳು ಅಥವಾ ತೈಲ ಟ್ಯಾಂಕರ್‌ಗಳು ಸ್ವಲ್ಪ ಮಿತವ್ಯಯಿ ಎನ್ನಬಹುದು; ಇವು ದಿನಕ್ಕೆ 40 ರಿಂದ 70 ಟನ್ ಇಂಧನ ಬಳಸುತ್ತವೆ. ಉದಾಹರಣೆಗೆ, ಹಾರ್ಮುಜ್‌ನಿಂದ ಮುಂಬೈವರೆಗಿನ 3 ದಿನಗಳ ಪ್ರಯಾಣಕ್ಕೆ ಒಂದು ದೊಡ್ಡ ಟ್ಯಾಂಕರ್ ಸುಮಾರು 100 ರಿಂದ 200 ಟನ್ ‘ಬಂಕರ್ ಇಂಧನ’ವನ್ನು ಬಳಸುತ್ತದೆ.

ಸಮುದ್ರಯಾನ ಅಗ್ಗವಲ್ಲ, ದುಬಾರಿ ವೆಚ್ಚ

ಹಡಗನ್ನು ನಡೆಸುವ ಒಟ್ಟು ವೆಚ್ಚದಲ್ಲಿ ಇಂಧನದ ಪಾಲೇ ಅತ್ಯಂತ ದೊಡ್ಡದು. ಸಮುದ್ರಯಾನದಲ್ಲಿ ಬಳಸುವ ಈ ಇಂಧನವನ್ನು ‘ಬಂಕರ್ ಇಂಧನ’ ಎಂದು ಕರೆಯಲಾಗುತ್ತದೆ. ಹಾರ್ಮುಜ್ ಮಾರ್ಗದಲ್ಲಿ ಸಾಗುವ ಒಂದು ಹಡಗು ದಿನಕ್ಕೆ ಕನಿಷ್ಠ 5,000 ಡಾಲರ್‌ಗಳಿಗಿಂತಲೂ ಹೆಚ್ಚು ಇಂಧನ ವೆಚ್ಚವನ್ನು ಭರಿಸಬೇಕಾಗುತ್ತದೆ. ಯುದ್ಧದಂತಹ ಪರಿಸ್ಥಿತಿಯಲ್ಲಿ ಇಂಧನ ದರ ಏರಿಕೆಯಾದರೆ ಅಥವಾ ಇರಾನ್ ವಿಧಿಸುವ ಸುಂಕ ಹೆಚ್ಚಾದರೆ, ಈ ವೆಚ್ಚ ಮತ್ತಷ್ಟು ದುಬಾರಿಯಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳ ಮೇಲೂ ಪರಿಣಾಮ ಬೀರಬಹುದು.



Source link

Leave a Reply

Your email address will not be published. Required fields are marked *