ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!


ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ರಾಯಚೂರು, ಮಾ.31: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲಾದ ‘ಕರ್ನಾಟಕ ಅತಿಥಿ ಗೃಹ’ ಈಗ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಅತಿಥಿ ಗೃಹದ ದುರವಸ್ಥೆಯನ್ನು ಕಂಡುಹಿಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಸೂಚನೆಯಂತೆ, ರಾಯಚೂರು ಲೋಕಾಯುಕ್ತ ಡಿವೈಎಸ್ ಪಿ ರವಿ ಪುರುಷೋತ್ತಮ್ ಅವರು ನೀಡಿದ ವರದಿಯ ಆಧಾರದ ಮೇಲೆ ಇದೀಗ ಸ್ವಯಂಪ್ರೇರಿತ ದೂರು ದಾಖಲಾಗಿದೆ.

2022ರ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಂಡ ಈ ಸುಸಜ್ಜಿತ ಅತಿಥಿ ಗೃಹವು ಕೇವಲ ಮೂರೇ ವರ್ಷಗಳಲ್ಲಿ ಪಾಳುಬಿದ್ದ ಭೂಮಿ. ಲೋಕಾಯುಕ್ತರ ತನಿಖಾ ವರದಿಯಲ್ಲಿ ಈ ಕೆಳಗಿನ ಗಂಭೀರ ಲೋಪಗಳು ಇವೆ. 50 ಶೌಚಾಲಯಗಳಿಗೆ ಇರುವುದು ಕೇವಲ ಇಬ್ಬರು ಸಿಬ್ಬಂದಿ. ಫ್ಲಶ್ ವ್ಯವಸ್ಥೆಯೇ ಇಲ್ಲದೆ ಶೌಚಾಲಯಗಳು ನಾರುತ್ತಿವೆ.

ನೀರಿಗಾಗಿ ಇಟ್ಟಿದ್ದ 8 ಸಿಂಟೆಕ್ಸ್ ಮೇಲಕ್ಕೆ 5 ಒಡೆದು ಹೋಗಿವೆ. ಡ್ರೈನೇಜ್ ಪೈಪ್‌ಗಳು ಒಡೆದು ಯಾತ್ರಾಾರ್ಥಿಗಳು ದುರ್ವಾಸನೆಯಲ್ಲಿ ಕಾಲ ಕಳೆಯುವಂತಾಗಿದೆ. ಗೀಸರ್ ವೈರಿಂಗ್ ಲೋಪದಿಂದ ಶಾರ್ಟ್ ಉಂಟಾಗುತ್ತಿದೆ, ನಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಇದು ಜೀವಹಾನಿಗೆ ಆಹ್ವಾನ ನೀಡಿದೆ.

ಇನ್ನು ಸ್ನಾನಕ್ಕೆ ಒಂದು ಬಕೆಟ್ ಬಿಸಿನೀರಿಗೆ 30 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಹಾಸಿಗೆಗಳಲ್ಲಿ ತಿಗಣೆ ಮತ್ತು ಸೊಳ್ಳೆಗಳು ಕಾಟವಿದ್ದು, ಬೆಡ್ ಶೀಟ್‌ಗಳನ್ನು ದಿನನಿತ್ಯದಿಂದ ಬಳಸುತ್ತಿಲ್ಲ. 10 ಎಸಿ ರೂಮ್‌ಗಳಲ್ಲಿ 6 ಎಸಿಗಳು ಕೆಟ್ಟುಹೋಗಿದ್ದರೂ ಯಾತ್ರಾರ್ಥಿಗಳಿಂದ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿ.ಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!

ಈ ಭ್ರಷ್ಟಾಚಾರ ಮತ್ತು ದುರಾಡಳಿತದ ಅತಿಥಿ ಅತಿಥಿ ಗೃಹದ ಪತ್ರಾಂಕಿತ ವ್ಯವಸ್ಥಾಪಕ ಆಂಜನೇಯಲು ಮತ್ತು ಸಹಾಯಕ ನರಸನಗೌಡ ವಿರುದ್ಧ ಪ್ರಕರಣ ದಾಖಲಿಸಲು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಆದೇಶಿಸಿದ್ದಾರೆ. ಜೊತೆಗೆ, ಈ ಆದೇಶದ ಪ್ರತಿಯನ್ನು ಮುಜರಾಯಿ ಸಚಿವರಿಗೂ ಕಳುಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *