ಚಿಕ್ಕಮಗಳೂರು ಸಂತೆಯಲ್ಲಿ ನಿಂತು ಮತಾಂತರ: ಕಿರಾತಕರನ್ನ ಹಿಡಿದು ಬುದ್ಧಿ ಕಲಿಸಿದ ಹಿಂದೂ ಕಾರ್ಯಕರ್ತರು! | Chikkamagaluru Hosapete Religious Conversion Attempt Market Hindu Activist Omni Chase Sat

ಚಿಕ್ಕಮಗಳೂರು ಸಂತೆಯಲ್ಲಿ ನಿಂತು ಮತಾಂತರ: ಕಿರಾತಕರನ್ನ ಹಿಡಿದು ಬುದ್ಧಿ ಕಲಿಸಿದ ಹಿಂದೂ ಕಾರ್ಯಕರ್ತರು! | Chikkamagaluru Hosapete Religious Conversion Attempt Market Hindu Activist Omni Chase Sat



ಚಿಕ್ಕಮಗಳೂರು ಸಂತೆಯಲ್ಲಿ ನಿಂತು ಮತಾಂತರ: ಕಿರಾತಕರನ್ನ ಹಿಡಿದು ಬುದ್ಧಿ ಕಲಿಸಿದ ಹಿಂದೂ ಕಾರ್ಯಕರ್ತರು! | Chikkamagaluru Hosapete Religious Conversion Attempt Market Hindu Activist Omni Chase Sat

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ವಾರದ ಸಂತೆಯಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು 10 ಕಿ.ಮೀ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಚಿಕ್ಕಮಗಳೂರು (ಮಾ.31): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತಾಂತರದ ಭೂತ ಮತ್ತೆ ದರ್ಶನ ನೀಡಿದೆ. ವಾರದ ಸಂತೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ. ಈ ವೇಳೆ ನಡೆದ ಸಿನಿಮೀಯ ಮಾದರಿಯ ಚೇಸ್ ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ವಾರದ ಸಂತೆಯಲ್ಲಿ ಮತಾಂತರದ ಜಾಲ:

ಹೊಸಪೇಟೆ ಗ್ರಾಮದಲ್ಲಿ ಇಂದು ವಾರದ ಸಂತೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಮೂಲದ ಇಬ್ಬರು ವ್ಯಕ್ತಿಗಳು ಓಮ್ನಿ ವ್ಯಾನ್‌ನಲ್ಲಿ ಗ್ರಾಮಕ್ಕೆ ಆಗಮಿಸಿದ್ದರು. ಸಂತೆಗೆ ಬಂದಿದ್ದ ಜನರಿಗೆ ‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’ ಎಂಬ ಮುಖಪುಟದ ಪುಸ್ತಕಗಳನ್ನು ಹಂಚುತ್ತಾ, ಹಿಂದೂ ಧರ್ಮದಿಂದ ಮತಾಂತರಗೊಳ್ಳುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರ ಆಕ್ರೋಶ ಮತ್ತು ಪ್ರಶ್ನೆ:

ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಓರ್ವ ಯುವಕ ಹಾಗೂ ಮತ್ತೊಬ್ಬ ಮಧ್ಯವಯಸ್ಕನನ್ನು ಸೆರೆಹಿಡಿದ ಕಾರ್ಯಕರ್ತರು, ‘ನೀವು ಹಿಂದೂ ಧರ್ಮದವರಾಗಿದ್ದುಕೊಂಡು ಮತಾಂತರಗೊಂಡಿದ್ದೀರಾ? ಈಗ ಬೇರೆಯವರನ್ನು ಏಕೆ ಮತಾಂತರ ಮಾಡುತ್ತಿದ್ದೀರಾ? ಬನ್ನಿ, ನೀವು ಕೂಡ ಮರಳಿ ಹಿಂದೂ ಧರ್ಮಕ್ಕೆ ಸೇರಿಕೊಳ್ಳಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಎರಡೂ ತಂಡಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

10 ಕಿಲೋ ಮೀಟರ್ ಸಿನಿಮೀಯ ಚೇಸ್:

ಕಾರ್ಯಕರ್ತರ ಪ್ರಶ್ನೆಗಳಿಗೆ ಗಾಬರಿಗೊಂಡ ಮತಾಂತರ ತಂಡದ ಇಬ್ಬರು, ತಮ್ಮ ಓಮ್ನಿ ವ್ಯಾನ್ ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅತ್ಯಂತ ವೇಗವಾಗಿ ವ್ಯಾನ್ ಚಲಾಯಿಸಿಕೊಂಡು ತಪ್ಪಿಸಿಕೊಳ್ಳಲು ಮುಂದಾದಾಗ, ಹಿಂದೂ ಕಾರ್ಯಕರ್ತರು ತಮ್ಮ ಬೈಕ್‌ಗಳಲ್ಲಿ ಅವರನ್ನು ಚೇಸ್ ಮಾಡಲು ಶುರು ಮಾಡಿದ್ದಾರೆ. ಹೊಸಪೇಟೆ ಗ್ರಾಮದಿಂದ ಸುಮಾರು 10 ಕಿಲೋ ಮೀಟರ್ ದೂರದವರೆಗೆ ಈ ಸಿನಿಮೀಯ ಮಾದರಿಯ ಚೇಸ್ ನಡೆದಿದೆ. ಕೊನೆಗೆ ಕೈಮರ ಚೆಕ್ ಪೋಸ್ಟ್ ಬಳಿ ಓಮ್ನಿ ವ್ಯಾನ್ ಅನ್ನು ಅಡ್ಡಗಟ್ಟಿದ ಕಾರ್ಯಕರ್ತರು, ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಪೊಲೀಸರ ವಶಕ್ಕೆ ಆರೋಪಿಗಳು:

ಚೇಸ್ ಮಾಡಿ ಹಿಡಿದ ಇಬ್ಬರನ್ನು ಕಾರ್ಯಕರ್ತರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. “ಭದ್ರಾವತಿಯಿಂದ ಹೊಸಪೇಟೆ ಗ್ರಾಮಕ್ಕೆ ಬರುವ ಮಾರ್ಗ ಮಧ್ಯದ ಎಲ್ಲಾ ಹಳ್ಳಿಗಳಲ್ಲೂ ಇವರು ಮತಾಂತರಕ್ಕೆ ಪ್ರೇರೇಪಿಸಿರುವ ಸಾಧ್ಯತೆ ಇದೆ” ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಓಮ್ನಿ ವ್ಯಾನ್ ಹಾಗೂ ಮತಾಂತರಕ್ಕೆ ಬಳಸುತ್ತಿದ್ದ ಪುಸ್ತಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಘಟನೆಯು ಜಿಲ್ಲೆಯಲ್ಲಿ ಮತಾಂತರದ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



Source link

Leave a Reply

Your email address will not be published. Required fields are marked *