
ನಟ ಪ್ರಭಾಸ್ ಅವರು (ಪ್ರಭಾಸ್) ಒಮ್ಮೊಮ್ಮೆ ಒಂದೊಂದು ರೀತಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ಯಂಗ್ ಆಯಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಾರೆ. ಕೆಲವೊಮ್ಮೆ ಅವರು ವಯಸ್ಸಾದವರಂತೆ ಕಾಣಿಸುತ್ತಾರೆ. ಈ ಸಮಯದಲ್ಲಿ ಅವರನ್ನು ಸಾಕಷ್ಟು ಟೀಕೆ ಮಾಡಿದೆ. ಇದು ಹಾಗೆಯೇ ಆಗಿದೆ. ಪ್ರಭಾಸ್ ಅವರನ್ನು ನೋಡಿ ಟೀಕಿಸಲಾಗಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಲುಕ್ ಬದಲಿಸುವಂತೆ ಕೋರಿಕೆ ಇಟ್ಟಿದ್ದಾರೆ.
ಟಾಲಿವುಡ್ ನಟ ಶರ್ವ ಅವರ ಹೊಸ ಸಿನಿಮಾ ‘ಬೈಕರ್’ ಏಪ್ರಿಲ್ 3 ರಂದು ತೆರೆಗೆ ಬರುತ್ತಿದೆ. ಏಪ್ರಿಲ್ 2 ರಂದು ಪೇಯ್ಡ್ ಪ್ರೇಮಿಗಳನ್ನು ಯೋಜಿಸಲಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಪ್ರಭಾಸ್ ಭಾಗಿ ಆಗಿದ್ದಾರೆ. ಇತ್ತೀಚೆಗೆ ಅವರು ಟ್ವೀಟ್ ಮಾಡಿ ಸಿನಿಮಾದ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಪ್ರಮೋಷನ್ ವಿಡಿಯೋದ ಭಾಗವಾಗಿದೆ.
ಪಂಡಗಲ ಧಿಗಿ ವಚದು…ರಕ್ತನ್ನಿ ಯೆರುಪೆಕಿಂಚದು
ಇದು ನಮಗೆ ಬಹಳಷ್ಟು ಅರ್ಥ ಮತ್ತು ದೀರ್ಘಕಾಲದವರೆಗೆ ಪಾಲಿಸುತ್ತದೆ #ಪ್ರಭಾಸ್ ಗಾರು
-ತಂಡ #ಬೈಕರ್
https://t.co/vvEmUSfJhs
ಇದರೊಂದಿಗೆ ಚಿತ್ರಮಂದಿರಗಳಲ್ಲಿ ಏಪ್ರಿಲ್ 3 ರಿಂದ ರೇಸ್ ಮಾಡೋಣ #ಬೈಕರ್
ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಡಾಲ್ಬಿಯಲ್ಲಿ ಬಿಡುಗಡೆ… pic.twitter.com/F02EoePqZK
— ಯುವಿ ಕ್ರಿಯೇಷನ್ಸ್ (@UV_Creations) ಮಾರ್ಚ್ 31, 2026
#ಪ್ರಭಾಸ್ ಅಧಿಕೃತವಾಗಿ ನಿವೃತ್ತಿ ವಯಸ್ಸು ಘೋಷಿಸಲಾಗಿದೆ… https://t.co/T9nAH6VAf8
– #ಭಾಯ್
(@ಸಾಯಿಕಿಶೋರ್86) ಮಾರ್ಚ್ 31, 2026
ಪ್ರಭಾಸ್ ಅವರು ಬೈಕ್ ಏರಿ ಹೋಗುತ್ತಿರುವ ವಿಡಿಯೋ ಇಲ್ಲಿದೆ. ‘ರೇಸ್‌ಗೆ ರೆಡಿ’ ಎಂದು ಅವರು ಕೋರಿಕೊಳ್ಳುತ್ತಾರೆ. ಈ ವಿಡಿಯೋ ವೈರಲ್ ಆಗಿದೆ. ಸಿನಿಮಾ ನಿರ್ಮಾಣ ಮಾಡಿರೋ ‘ಯುವಿ ಕ್ರಿಯೇಷನ್ಸ್’ ಈ ವಿಡಿಯೋ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳ ಕಡೆಯಿಂದ ವಿವಿಧ ರೀತಿಯ ಕಮೆಂಟ್ ಗಳು ಬರುತ್ತಿವೆ. ಅನೇಕರು ಪ್ರಭಾಸ್ ಅವರ ಲುಕ್ ಅನ್ನು ಟೀಕೆ ಮಾಡಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ‘ನಿವೃತ್ತಿ ದಿನ ಹತ್ತಿರವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?
ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಇದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ರಾಜಾ ಸಾಬ್’ ಹೀನಾಯವಾಗಿ ಸೋಲು ಕಂಡಿತು. ಈ ಕಾರಣದಿಂದ ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ. ಆ ಗೆಲುವು ‘ಸ್ಪಿರಿಟ್’ ಚಿತ್ರದ ಮೂಲಕ ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ಈ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.


https://t.co/vvEmUSfJhs