
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನಮ್ಮ ಕನಸಿನಲ್ಲಿ ನಾವು ಸತ್ತರೆ ಏನು ಅರ್ಥ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸ್ವಪ್ನಶಾಸ್ತ್ರದ ಪ್ರಕಾರ, ಮರಣಕ್ಕೆ ಸಂಬಂಧಿಸಿದ ಕನಸುಗಳು ಸಾಮಾನ್ಯವಾಗಿ ಶುಭ ಸೂಚಕ ಸೂಚಕ. ನಿಮ್ಮ ಸಾವು ಕನಸಿನಲ್ಲಿ ಕಂಡರೆ ಅದು ಕಷ್ಟಗಳಿಂದ ಪಾರಾಗುವ, ಸಂಕಟಗಳು ದೂರವಾಗುವ, ದೋಷಗಳು ನಿವಾರಣೆಯಾಗುವ ಮತ್ತು ಅದೃಷ್ಟ ಕೂಡಿ ಬರುವ ಸೂಚನೆಯಾಗಿದೆ. ಬೇರೆಯವರ ಮರಣವನ್ನು ಕನಸಿನಲ್ಲಿ ಕಂಡರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ಬ್ರಹ್ಮ ವೈವರ್ತ ಪುರಾಣದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಇಂತಹ ಕನಸುಗಳು ಶುಭವನ್ನು ತರುವುದರಿಂದ ಯಾವುದೇ ಚಿಂತೆ ಅಥವಾ ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗಬಾರದು ಎಂದು ಗುರೂಜಿ ಹೇಳಿದ್ದಾರೆ.