
‘ಧುರಂಧರ’ (ಧುರಂಧರ) ಸಿನಿಮಾದ ಅವಧಿ 3 ಗಂಟೆ 34 ನಿಮಿಷ ಇತ್ತು. ಅದೇ ರೀತಿ, ‘ಧುರಂಧರ 2’ ಸಿನಿಮಾ 3 ಗಂಟೆ 49 ನಿಮಿಷ ಇತ್ತು. ಇಷ್ಟು ದೀರ್ಘ ಅವಧಿ ಇದ್ದರೂ ಸಿನಿಮಾ ಯಶಸ್ಸು ಕಂಡಿತ್ತು. ಇದಾದ ಬೆನ್ನಲ್ಲೇ ಏಳು ಗಂಟೆ 30 ನಿಮಿಷದಲ್ಲಿ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ! ಇದು ಅಚ್ಚರಿ ಎನಿಸಿದರೂ ನಿಜ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರ ವೈರಲ್ ಆಗಿದೆ.
ಈ ಮೊದಲು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರವನ್ನು ಕಂಬೈನ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿದೆ. ಈ ಸಿನಿಮಾ ಗಮನ ಸೆಳೆದಿತ್ತು. ‘ಬಾಹುಬಲಿ’ ರಿಲೀಸ್ ಆಗಿ 10 ವರ್ಷಗಳ ಸಂಭ್ರಮದಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಈ ಸಿನಿಮಾ ಹೊಸ ಅನುಭವ ನೀಡಿತ್ತು. ಈಗ ‘ಧುರಂಧರ’ ಹಾಗೂ ‘ಧುರಂಧರ 2’ ಸಿನಿಮಾ ಸೇರಿಸಿ ‘ಧುರಂಧರ: ಡೈರೆಕ್ಟರ್ ಕಟ್’ ಎಂಬ ಚಿತ್ರ ತೆರೆಗೆ ಬರುತ್ತಿದೆ.
ಪಾರ್ಥ ಚತುರ್ವೇದಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರವನ್ನು ಹಂಚಿಕೊಂಡಿದ್ದಾರೆ. ‘ಧುರಂಧರ್: ಡೈರೆಕ್ಟರ್ಸ್ ಕಟ್’ ಎಂದು ಬರೆಯಲಾಗಿದೆ. ಸಿನಿಮಾಗೆ ಎ ಪ್ರಮಾಣ ಪತ್ರ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಈ ಸಿನಿಮಾದ ಅವಧಿ 450 ನಿಮಿಷ ಎಂದು ಬರೆಯಲಾಗಿದೆ. ಅಂದರೆ, ಏಳು ಗಂಟೆ 30 ನಿಮಿಷ ಸಿನಿಮಾ ಇರಲಿದೆ.
ಅಂತಿಮವಾಗಿ ಚಿತ್ರರಂಗಕ್ಕೆ ಮತ್ತು ದೇಶದ ಪ್ರತಿಯೊಬ್ಬ ಸಿನಿಪ್ರಿಯರಿಗೆ ಗೆಲುವು! #ಧುರಂಧರ & #ಧುರಂಧರ ಪ್ರತೀಕಾರ ಪ್ರೀಮಿಯಂ ಪರದೆಯ ಮೇಲೆ (DC, IMAX, HDR ಮತ್ತು EPIQ) ವಿಸ್ತೃತ 7 ಗಂಟೆಗಳ 30 ನಿಮಿಷಗಳ ನಿರ್ದೇಶಕರ ಕಟ್ ಅನ್ನು ಪ್ರತ್ಯೇಕವಾಗಿ ಸೆನ್ಸಾರ್ ಮಾಡದೆ ಬಿಡುಗಡೆ ಮಾಡಲು ಸಿದ್ಧವಾಗಿದೆ
ಇಂದು CBFC ತಂಡದಿಂದ ಹೊಸ ಪ್ರಮಾಣ ಪತ್ರವನ್ನು ನೀಡಲಾಗಿದೆ. ದಿ… pic.twitter.com/lNr4z0jG8x
— ಪಾರ್ಥ್ ಚತುರ್ವೇದಿ (@_mrchaturvedi) ಮಾರ್ಚ್ 31, 2026
ಈ ಸಿನಿಮಾ ಪ್ರೀಮಿಯಂ ಪರದೆಗಳಾದ ಡಿಸಿ, ಐಮ್ಯಾಕ್ಸ್, ಎಚ್ಡಿಆರ್ ಅಲ್ಲಿ ಮಾತ್ರ ಪ್ರದರ್ಶನ ಕಾಣಲಿದೆ, ಎರಡು ಇಂಟರ್ವಲ್‌ಗಳು ಇರಲಿ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಧುರಂಧರ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ
ಇಂದು (ಏಪ್ರಿಲ್ 1) ಮೂರ್ಖರ ದಿನ. ಹೀಗಾಗಿ, ಫೂಲ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಆ ರೀತಿ ಮೂರ್ಖ ಮಾಡುವ ಪ್ರಯತ್ನ ಕೂಡ ಇರಬಹುದು ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಸಿನಿಮಾ ತಂಡದಿಂದ ಸ್ಪಷ್ಟನೆ ಸಿಗಬೇಕಿದೆ.
‘ಧುರಂಧರ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆಗಿದೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.