‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?


'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

ಜೀ ಕನ್ನಡದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಮಾಟ-ಮಂತ್ರದ ಕಥೆಯನ್ನು ಹೊಂದಿರುವ ಈ ಚಿತ್ರವು ಈಗ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಿರುವುದು ಗೊತ್ತೇ ಇದೆ. ಹೀಗಿರುವಾಗಲೇ ಮಾಯಾ ಪಾತ್ರವು ಕೊನೆ ಆಯಿತೇ ಎಂಬ ಪ್ರಶ್ನೆಯೂ ಮೂಡುವಂತೆ ಆಗಿದೆ. ಎಪಿಸೋಡ್ ಅಲ್ಲಿ ನಡೆದ ಘಟನೆಗಳು ಆ ರೀತಿಯ ಅನುಮಾನಗಳನ್ನು ಹುಟ್ಟುಹಾಕಿತು. ಆ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಳವಿಕಾ ತುಂಬಾನೇ ಕೆಟ್ಟವಳು. ಅವಳು ಮನೆಯಲ್ಲಿ ಹಿರಿಯವಳು ಮತ್ತು ಎಲ್ಲರ ಎದುರು ಒಳ್ಳೆಯವಳಂತೆ ತೋರಿಸಿಕೊಳ್ಳುತ್ತಾ ಬಂದವಳು. ಆದರೆ, ಎಲ್ಲವನ್ನೂ ಬದಲಾಯಿಸುವ ಕೆಲಸ ಮಾಡಿದೆ. ಅಂಬಿಕಾಳ ಸಾವಿಗೆ ಆಕೆ ಕಾರಣ ಆಗಿದ್ದಾಳೆ. ಅಂಬಿಕಾಳ ಮಗಳು ಹಿತಾಳನ್ನು ಬಲಿ ಪಡೆಯವ ಆಲೋಚನೆಯೂ ಅವಳಿಗೆ ಇದೆ.

ತನ್ನ ದಾರಿಗೆ ಅಡ್ಡಾದ ಯಾರೊಬ್ಬರನ್ನೂ ಮಾಳವಿಕಾ ಬಿಡೋದಿಲ್ಲ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ. ತನ್ನ ದುಷ್ಟ ಶಕ್ತಿಗಳ ಮೂಲಕ ಆಕೆ ಎಲ್ಲವನ್ನೂ ಹಾಳು ಮಾಡುತ್ತಿದ್ದಾಳೆ. ಈಗ ಮಾಯಾಳನ್ನು ಆಕೆ ಕೊಂದಳೇ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಸಿಗುವ ಸಮಯ ಸಮೀಪಿಸಿದೆ. ಇಂದಿನ ಎಪಿಸೋಡ್ ಅಲ್ಲಿ ಅದಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್; ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ?

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಯಾಳನ್ನು ದಾಳದ ರೀತಿಯಲ್ಲಿ ಉಪಯೋಗಿಸುತ್ತಿದ್ದಳು ಮಾಳವಿಕಾ. ಈಗ ಆಕೆಗೆ ಸತ್ಯ ಗೊತ್ತಾಗಿದೆ. ಮಾಳವಿಕಾ ಮತ್ತು ಆಕೆಯ ಹಿನ್ನೆಲೆ ಏನು ಎಂಬುದು ಸ್ಪಷ್ಟವಾಗಿದೆ. ಈ ವಿಷಯವನ್ನು ದುರ್ಗಾ ಬಳಿ ಹೇಳುವುದಾಗಿ ಮಾಯಾ ನಿರ್ಧರಿಸಿದಳು. ಆಕೆಗೆ ಬೆಟ್ಟಕ್ಕೆ ಬರುವಂತೆ ಹೇಳಿದ್ದಳು. ಆದರೆ, ದುರ್ಗಾ ಅಲ್ಲಿಗೆ ಹೋಗಿಲ್ಲ. ಅಲ್ಲಿಗೆ ಹೋಗಿದ್ದು ಮಾಳವಿಕಾ. ದುರ್ಗಾಳ ವೇಷದಲ್ಲಿ ಮಾಳವಿಕಾ ಅಲ್ಲಿಗೆ ತೆರಳಿದಳು. ಮಾಯಾ ಎಲ್ಲವನ್ನೂ ವಿವರಿಸುವವರಿಗೆ ಸುಮ್ಮನೆ ಇದ್ದ ಆಕೆ ನಂತರ ತನ್ನ ಅಸಲಿ ಬಣ್ಣವನ್ನು ತೋರಿಸಿದಳು. ಆ ಬಳಿಕ ಮಾಳವಿಕಾ, ಮಾಯಾನ ಪ್ರಪಾತಕ್ಕೆ ತಳ್ಳಿದ್ದಾಳೆ. ಈ ವೇಳೆ ರಕ್ಷಣೆಗೆ ಅಂಬಿಕಾ ಬರುತ್ತಾಳಾ ಎಂದು ಕಾದು ನೀಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *