
ಮಲಯಾಳಂ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರು ಆರೋಪಿ ಕಿರಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ. ಹೇಮಾ ಕಮಿಟಿ ವರದಿಯಲ್ಲಿ ಇವರ ಬಗ್ಗೆ ಈ ರೀತಿಯ ಸಾಕಷ್ಟು ಆರೋಪಗಳು ಎದುರಾಗಿದ್ದವು. ಈಗ ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿಗೆ ಇವರು ಸಾಕಷ್ಟು ಕಿರುಕುಳ ನೀಡಿದ್ದರು.
ಯುವ ನಟಿ ರಂಜಿತ್ ಮೇಲೆ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಸೆಟ್ ರಂಜಿತ್ ಸರಿಯಾಗಿ ನಡೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪ್ರಾಥಮಿಕ ವರದಿ ಆಧಾರದ ಮೇಲೆ ಅವರನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ. ಕಾರ್ಯಕ್ರ ಒಂದಕ್ಕೆ ಅವರು ತೆರಳಿದರು ಎಂದು ವರದಿಯಾಗಿದೆ.
ರಂಜಿತ್ ಅವರು ಶೂಟಿಂಗ್ ವೇಳೆ ನಟಿಯನ್ನು ಕ್ಯಾರವಾನ್ ಗೆ ಕರೆದರಂತೆ. ಉದ್ದೇಶ ಇಟ್ಟುಕೊಂಡು ಅವರು ತಪ್ಪಾಗಿ ನಡೆದುಕೊಂಡರು ಎಂದು ನಟಿ ದೂರಿದರು. ತಕ್ಷಣ ಸ್ಥಳದಿಂದ ತೆರಳಿದ ನಟಿ, ದೂರನ್ನು ದಾಖಲು ಮಾಡಿದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದು, ನಿರ್ದೇಶಕನ ಬಂಧನವಾಗಿದೆ.
ಈ ಮೊದಲು ಬೆಂಗಾಳಿ ನಟಿಯೊಬ್ಬರು ರಂಜಿತ್ ಮೇಲೆ ಕಿರುಕುಳ ಆರೋಪ ಹೊರಿಸಿದ್ದರು. 31 ವರ್ಷದ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರಂಜಿತ್ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು.
ಮಯಾಳಂ ಚಿತ್ರರಂಗದಲ್ಲಿ ಪ್ರಸ್ತುತ ಕಿರಕುಳ ವಿಷಯದ ಬಗ್ಗೆ ಜಸ್ಟೀಸ್ ಹೇಮಾ ವರದಿಯಲ್ಲಿ ಹೇಳಲಾಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಟಿಯರಿಗೆ ಮಲಯಾಳಂ ಚಿತ್ರರಂಗದಲ್ಲಿ ಸುರಕ್ಷತೆ ಇಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ: ‘ಧುರಂಧರ್ 2’ ನೋಡಿದ ನಂತರ ನಿರ್ದೇಶಕ ಆದಿತ್ಯ ಧಾರ್ ಎಚ್ಚರಿಸಿದ ವಿವೇಕ್ ಅಗ್ನಿಹೋತ್ರಿ
ರಂಜಿತ್ ಅವರು ಈ ಮೊದಲು ಮೋಹನ್ ಲಾಲ್ ಜೊತೆ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡಿದ್ದರು. ಇನ್ನೂ ಹಲವು ಚಿತ್ರಗಳನ್ನು ರಂಜಿತ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.