
ಶಿವಮೊಗ್ಗ, ಏಪ್ರಿಲ್ 01: ನಿನ್ನೆ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ನಗರದ ಶರಾವತಿ ನಗರ ಬಡಾವಣೆಯ ಮನೆಯೊಂದಕ್ಕೆ ಚಾನೆಲ್ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ರಾತ್ರಿ 12 ಗಂಟೆಯ ವೇಳೆಗೆ ಗುಡುಗು ಸಮೇತ ಆರಂಭವಾದ ಮಳೆ, ಬೆಳಗ್ಗಿನ ಜಾವ ಸುಮಾರು 3 ಗಂಟೆಯವರೆಗೂ ಸುರಿದಿದೆ. ಭಾರಿ ಮಳೆ ಹಿನ್ನೆಲೆ ತುಂಗಾ ಚಾನೆಲ್ ನಿಂದ ಉಕ್ಕಿ ಹರಿದ ನೀರು ತಗ್ಗುಪ್ರದೇಶದಲ್ಲಿರುವ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ನೆಂದು ತೊಪ್ಪೆ,
ಹಾಸಿಗೆ, ಮಂಚ, ಅಡುಗೆ ಮನೆಯ ವಸ್ತುಗಳು ನೀರು ಪಾಲಾಗಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.