
ದಾವಣಗೆರೆ, ಏಪ್ರಿಲ್ 1: ನಗರದ ಹಳೇ ಪೇಟೆಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಟುಂಬದೊಂದಿಗೆ ಭಾಗವಹಿಸಿ, ಅಗ್ನಿಕುಂಡ ಹಾಯುವ ಮೂಲಕ ದೈವಭಕ್ತಿ ಮೆರೆದರು. ವಿಶೇಷವೆಂದರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿರುವ ಸಚಿವರ ಪುತ್ರ ಸಮರ್ಥ್ ಶಾಮನೂರು ಮತ್ತು ಪುತ್ರಿ ಶ್ರೇಷ್ಠ ತಂದೆಯೊಂದಿಗೆ ಕೊಂಡ ಹಾಯ್ದರು. ಕೊಂಡೋತ್ಸವಕ್ಕೂ ಮುನ್ನ ಸಚಿವ ಮಲ್ಲಿಕಾರ್ಜುನ ಅವರ ಕುಟುಂಬವು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಏಳಿಗೆಗಾಗಿ ಪ್ರಾರ್ಥಿಸಿದರು. ಉಪಚುನಾವಣೆಯ ಪ್ರಚಾರದ ನಡುವೆ ಸಚಿವರ ಕುಟುಂಬ ಈ ರೀತಿ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ಬೆಂಬಲಿಗರಲ್ಲಿ ಉತ್ಸಾಹ ತುಂಬಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ