
ಮುಂಬೈ ,ಏ.1: ‘ಧುರಂಧ 2’ ಸಿನಿಮಾ ಯಶಸ್ವಿಯಾಗಿದ್ದು ಬಾಲಿವುಡ್ ನಟ ಶಾರುಖ್ ಖಾನ್ ಅವರ ಹಳೆಯ ಸಂದರ್ಶನದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಪಾಕಿಸ್ತಾನವನ್ನು “ಉತ್ತಮ ನೆರೆಹೊರೆಯ ರಾಷ್ಟ್ರ” ಎಂದು ಕರೆದರು ಮತ್ತು ಉಗ್ರ ಅಜ್ಮಲ್ ಕಸಬ್ ಬಗ್ಗೆ ಮಾತನಾಡಿರುವ ವೀಡಿಯೊಗಳು ಈಗ ದೊಡ್ಡ ವಿವಾದವನ್ನು ಸೃಷ್ಟಿಸಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಶಾರುಖ್ ಖಾನ್ ಪಾಕಿಸ್ತಾನದ ಸಂಬಂಧದ ಕುರಿತು ಮಾತನಾಡುತ್ತಾ, ಆ ದೇಶವನ್ನು ಶ್ಲಾಘಿಸಿದ್ದಾರೆ. ಮತ್ತೊಂದು ವೀಡಿಯೋದಲ್ಲಿ 26/11 ಮುಂಬೈ ದಾಳಿಯ ಅಜ್ಮಲ್ ಕಸಬ್ನನ್ನು ಉಗ್ರ “ಜೆಂಟಲ್ಮನ್” ಎಂದು ಉಲ್ಲೇಖಿಸಿರುವ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾರುಖ್ ಖಾನ್ ಅವರ ಉಗ್ರ ಅಜ್ಮಲ್ ಕಸಬ್ನನ್ನು “ಜೆಂಟಲ್ಮನ್” ಎಂದಿರುವುದೇ ದೊಡ್ಡ ಅಚ್ಚರಿಯಾಗಿದೆ. ಉಗ್ರಗಾಮಿಗಳ ಸಿದ್ಧಾಂತವನ್ನು ಕಟುವಾಗಿ ಟೀಕಿಸುತ್ತಾ, “ಜೈಲಿನಲ್ಲಿರುವ ಒಬ್ಬ ವ್ಯಕ್ತಿ (ಕಸಬ್)… ಅವನು ಯಾವ ತರ್ಕದ ಮೇಲೆ ಜನರನ್ನು ಕೊಂದಿದ್ದಾನೆ? ಅವನಿಗೆ ಎಲ್ಲಿದೆ?” ಎಂದು ಪ್ರಶ್ನಿಸಿದ್ದರು. ಆದರೆ, ಕಸಬ್ನನ್ನು ‘ಜಂಟಲ್ಮನ್’ (ಸಂಭಾವಿತ ವ್ಯಕ್ತಿ) ಎಂಬ ಪದವನ್ನು ಬಳಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪದವನ್ನೇ ಈಗ ಕೆಲವರು ಗುರಿಯಾಗಿಸಿಕೊಂಡು, “ಶಾರುಖ್ ಒಬ್ಬ ಉಗ್ರನನ್ನು ಸಂಭಾವಿತ ಎಂದು ಕರೆದಿದ್ದಾರೆ” ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಧುರಂಧರ 2’ ಬಳಿಕ ಬರ್ತಿದೆ ಏಳುವರೆ ಗಂಟೆ ಸಿನಿಮಾ; ಎರಡು ಇಂಟರ್ವಲ್
ಈ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಅನೇಕರು ಶಾರುಖ್ ಖಾನ್ ಅವರನ್ನು “ದೇಶವಿರೋಧಿ” ಎಂದು ಕರೆದು ಟೀಕಿಸುತ್ತಿದ್ದಾರೆ. “ಸಿನಿಮಾ ಯಶಸ್ವಿಯಾಗುತ್ತಿರುವಾಗ ಇಂತಹ ಹೇಳಿಕೆಗಳು ಹೊರಬರುತ್ತಿವೆ” ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಶಾರುಖ್ ಅಭಿಮಾನಿಗಳು ಇದು ಹಳೆಯ ವೀಡಿಯೊ ಮತ್ತು ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ ಎಂದು ನಟನ ಬೆಂಬಲಕ್ಕೆ ನಿಂತಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ