
ಜನವರಿ, ಏಪ್ರಿಲ್ 1: ವಿಶ್ವದ ಪ್ರಮುಖ ಸಾಫ್ಟ್ವೇರ್ ಕಂಪನಿಗಳಲ್ಲಿ ಒಂದಾದ ಒರೇಕಲ್ ತನ್ನ ಉದ್ಯೋಗಿಗಳ ಸಂಖ್ಯೆಗೆ ಭಾರೀ ಕತ್ತರಿ (Oracle Layoffs) ಹಾಕಿದೆ. ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಒರೆಕಲ್ ಲೇ ಆಫ್ ಮಾಡಿದೆ. ಭಾರತವೊಂದರಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಒರೇಕಲ್ ಕಂಪನಿ 30,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 12,000 ಮಂದಿ ಎಂದರೆ ಶೇ. 40ರಷ್ಟು ಲೇ ಆಫ್ ಆದಂತಾಗುತ್ತದೆ.
ಒರೇಕಲ್ ಸಂಸ್ಥೆಯಿಂದ ಈ ಉದ್ಯೋಗ ಕಡಿತದ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ಬೇರೆ ಬೇರೆ ವೇದಿಕೆಗಳಲ್ಲಿ ಸಂತ್ರಸ್ತ ಉದ್ಯೋಗಿಗಳು ಹಾಕಿರುವ ಪೋಸ್ಟ್ಗಳಿಂದ ಇದರ ಮಾಹಿತಿ ಬಹಿರಂಗವಾಗಿದೆ. ನಿನ್ನೆಯಿಂದಲೇ (ಮಾರ್ಚ್ 31) ಲೇ ಆಫ್ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ರೆಡ್ಡಿಟ್, ಟೀಮ್ಬ್ಲೈಂಡ್ ಮುಂತಾದ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಕಣ್ಣೀರ ಕಥೆಗಳು ಹರಿದಾಡುತ್ತಿವೆ.
ಇದನ್ನೂ ಓದಿ: ವಾಣಿಜ್ಯ LPG ಸಿಲಿಂಡರ್ ಬೆಲೆ: ಗಾಯದ ಮೇಲೆ ಬರೆ; ಕಮರ್ಷಿಯಲ್ ಸಿಲಿಂಡರ್ ದರ 195ರೂ. ಎಣ್ಣೆ
ಫೋನ್ ಕೂಡ ಇಲ್ಲ… ಇಮೇಲ್ ನಲ್ಲಿ ಬಂತು ಲೇ ಆಫ್ ನೋಟೀಸ್
ಯಾವ ಪೂರ್ವಸೂಚನೆ ಇಲ್ಲದೆ, ರಾತ್ರೋರಾತ್ರಿ ಕೆಲಸ ಕಳೆದುಕೊಂಡ ಅನೇಕರು ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕಂಪನಿಯಲ್ಲಿ ಲೇ ಆಫ್ ಮಾಡುವಾಗ ಸಾಮಾನ್ಯವಾಗಿ ಅದರ ಸುಳಿವನ್ನು ಮುಂಚಿತವಾಗಿ ನೀಡಲಾಗಿರುತ್ತದೆ. ಲೇ ಆಫ್ ಮಾಡಿದಾಗ ಫೋನ್ ಮಾಡಿಯೋ, ಮೀಟಿಂಗ್ ಮಾಡಿಯೋ ಅಥವಾ ಎಚ್ ಆರ್ ಕರೆಸಿಯೋ ತಿಳಿಸುವುದು. ಆದರೆ, ಒರೆಕಲ್ ಉದ್ಯೋಗಿಗಳಿಗೆ ಒಂದು ಇಮೇಲ್ನಲ್ಲಿ ಲೇ ಆಫ್ ನೋಟೀಸ್ ಬಂದಿತ್ತಂತೆ.
‘ನಾವು ಒರೆಕಲ್ನಲ್ಲಿ 26 ವರ್ಷ ಕೆಲಸ ಮಾಡಿದ್ದೇನೆ. ನನಗೆ ಬೆಳಗ್ಗೆ 6 ಗಂಟೆಗೆ ಇಮೇಲ್ ಬಂತು. ಫೋನ್ ಕರೆ ಮಾಡಿ ತಿಳಿಸುವ ಸೌಜನ್ಯವೂ ಇಲ್ಲ, ಎಂಥ ಕಚಡ ಇದು’ ಎಂದು ಒಬ್ಬ ವ್ಯಕ್ತಿ ಅಲವತ್ತುಕೊಂಡಿದ್ದಾನೆ.
’20 ವರ್ಷದ ಕೆಲಸ ಮಾಡಿದ ನನ್ನ ತಂದೆಗೆ ನಿವೃತ್ತಿಯಾಗಲು 2 ವರ್ಷ ಇತ್ತು. ಅವರಿಗೆ ಇಮೇಲ್ ಮೂಲಕ ಲೇ ಆಫ್ ಮಾಡಲಾಗಿದೆ. ಅವರಿಗೆ ಕ್ಯಾನ್ಸರ್ ಇದೆ. ಆದರೆ, ಹೆಲ್ತ್ ಇನ್ಶೂರೆನ್ಸ್ ಇರೋದಿಲ್ಲ’ ಎಂದು ಮತ್ತೊಬ್ಬ ವ್ಯಕ್ತಿ ಗೋಳಿಟ್ಟಿದ್ದಾನೆ.
ಇದನ್ನೂ ಓದಿ: ಪ್ರೀಮಿಯಂ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್ಗೆ 11 ರೂ ದರ
ಓರೇಕಲ್ ಇಂಡಿಯಾ ಡೆಲಪ್ಮೆಂಟ್ ಸೆಂಟರ್ಗಳಲ್ಲಿ ಹೆಚ್ಚಿನ ಜಾಬ್ ಕಟ್ ಆಗಿದೆ. ಅದರಲ್ಲೂ ಇಂಟರ್ನಲ್ ತಂಡಗಳಲ್ಲಿ ಭರ್ಜರಿ ಕತ್ತರಿ ಬಿದ್ದಿದೆ. ಲೇ ಆಫ್ ಆದ ಉದ್ಯೋಗಿಗಳಿಗೆ ತತ್ಕ್ಷಣವೇ ಜಾರಿಗೆ ಬರುವಂತೆ ಸ್ಲ್ಯಾಕ್, ವಿಪಿಎನ್, ಇಮೇಲ್ ಇತ್ಯಾದಿ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಉದ್ಯೋಗಿ ತತ್ಕ್ಷಣವೇ ರಿಲೀವ್ ಆ ನೆರಿಗೆ.
ಎನ್+2 ತಿಂಗಳ ವೇತನ
ಲೇ ಆಫ್ ಆದ ಓರೇಕಲ್ ಉದ್ಯೋಗಿಗಳಿಗೆ ಪರಿಹಾರವಾಗಿ ಕನಿಷ್ಠ ಎರಡು ತಿಂಗಳ ವೇತನವನ್ನು ಕೊಡದಿದ್ದರೆ. ಎನ್ + 2 ಸೂತ್ರದ ಪ್ರಕಾರ ವೇತನದ ಪರಿಹಾರ ಇರುತ್ತದೆ. ಎನ್ ಎಂಬುದು ಉದ್ಯೋಗಿ ಕೆಲಸ ಮಾಡಿರುವ ವರ್ಷಗಳ ಸಂಖ್ಯೆ. ಇದರ ಜೊತೆಗೆ ನೋಟೀಸ್ ಪೇ ಪರಿಹಾರಗಳನ್ನು ಕೊಟ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ ಒರೆಕಲ್.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ