ಮಾವಿನಕಾಯಿ ಸೀಸನ್‌ನಲ್ಲಿ, ಕೇವಲ ಒಂದು ಕಾಯಿಯನ್ನು ಬಳಸಿ ಇಡೀ ಕುಟುಂಬಕ್ಕೆ ರುಚಿಕರವಾದ ಅಡುಗೆಯನ್ನು ತಯಾರಿಸಬಹುದು. ಈ ವಿಶೇಷ ಮಾವಿನಕಾಯಿ-ತೆಂಗಿನಕಾಯಿ ತಂಬುಳಿ ರೆಸಿಪಿಯು ಸುಲಭವಾಗಿದ್ದು, ಬೇಸಿಗೆಗೆ ಹೇಳಿ ಮಾಡಿಸಿದಂತಿದೆ.
ಸದ್ಯ ಮಾವಿನಕಾಯಿ ಸೀಸನ್ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಕಾಯಿ ಜೊತೆ ಹಣ್ಣುಗಳು ಸಹ ಬರುತ್ತಿವೆ. ಸ್ವಲ್ಪ ರೇಟ್ ಹೆಚ್ಚಾಗಿರುವ ಕಾರಣ ಮಾವಿನಕಾಯಿ ಖರೀದಿ ಕೊಂಚ ಭಾರವಾಗಿದೆ. ಆದ್ರೆ ಒಂದೇ ಒಂದು ಮಾವಿನಕಾಯಿಯಿಂದ ಇಡೀ ಮನೆ ಮಂದಿಯ ಹೊಟ್ಟೆಯನ್ನು ಸುಲಭವಾಗಿ ತುಂಬಿಸಬಹುದು. ಆ ವಿಶೇಷ ರೆಸಿಪಿಯನ್ನು ನಿಮಗಾಗಿ ತಂದಿದ್ದೇವೆ.

ಮಾವಿನಕಾಯಿ: ಒಂದು, ಕಡಲೆಹಿಟ್ಟು: 2 ಟೀ ಸ್ಪೂನ್, ಹಸಿತೆಂಗಿನಕಾಯಿ ತುರಿ: 1 ಕಪ್, ಸಾಸವೆ-ಜೀರಿಗೆ: 1 ಟೀ ಸ್ಪೂನ್, 5 ರಿಂದ 6 ಬೆಳ್ಳುಳ್ಳಿ ಎಸಳು, ಕರೀಬೇವು: 6 ರಿಂದ 8 ದಳ, ಹಸಿಮೆಣಸಿನಕಾಯಿ: ಮೂರರಿಂದ ನಾಲ್ಕು, ಬ್ಯಾಡಗಿ ಮೆಣಸಿನಕಾಯಿ: 2, ಕೋತಂಬರಿ ಸೊಪ್ಪು, ಚಿಟಿಕೆ ಅರಿಶಿಣ, ಚಿಟಿಕೆ ಇಂಗು, ಎಣ್ಣೆ: 2-3 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು

ಮೊದಲಿಗೆ ಹಸಿ ಮಾವಿನಕಾಯಿಯ ಸಿಪ್ಪೆ ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಹಾಗೆಯೇ ತೆಂಗಿನಕಾಯಿ ತುರಿಯನ್ನು ಸಹ ಸಿದ್ಧತೆ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಬೌಲ್‌ಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಮಾವಿನಕಾಯಿ ತುಂಡುಗಳನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಎರಡನ್ನೂ ಮತ್ತೊಮ್ಮೆ ಸಣ್ಣದಾಗಿ ರುಬ್ಬಿಕೊಳ್ಳಬೇಕು.

ಈಗ ಒಲೆ ಆನ್ ಮಾಡ್ಕೊಂಡು ಪ್ಯಾನ್ ಇಟ್ಟುಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ-ಜೀರಿಗೆ, ನಾಲ್ಕೈದು ತುಂಡು ಮಾಡಿಕೊಂಡಿರುವ ಬ್ಯಾಡಗಿ ಮೆಣಸಿನಕಾಯಿ ಸೇರಿಸಿಕೊಳ್ಳಿ. ಈಗ ಇದಕ್ಕೆ ತರಿತರಿಯಾಗಿ ಜಜ್ಜಿಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಕರೀಬೇವು, ಅರಿಶಿನ, ಇಂಗು ಸೇರಿಸಿಕೊಳ್ಳಿ.

ಇದನ್ನೂ ಓದಿ: ಮನೆಯಲ್ಲೇ ತಯಾರಿಸಿದ ಚಟ್ನಿಗಳು ಹೆಚ್ಚು ಕಾಲ ತಾಜಾವಾಗಿರಲು, ಹಾಳಾಗದಿರಲು ಇಲ್ಲಿವೆ 7 Tips

ಕೊನೆಗೆ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಾವಿನಕಾಯಿ-ತೆಂಗಿನತುರಿಯ ಮಿಶ್ರಣ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ಈಗ ಕೊನೆಯದಾಗಿ ಕಡಲೆಹಿಟ್ಟನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕಲಸಿಕೊಂಡು ಸೇರಿಸಿಕೊಂಡ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಷ್ಟು ನೀರು ಹಾಕಿಕೊಂಡು ಐದರಿಂದ ಆರು ನಿಮಿಷ ಕುದಿಸಿಕೊಳ್ಳಬೇಕು. ಕೊನೆಗೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಮಾವಿನಕಾಯಿ-ತೆಂಗಿನಕಾಯಿಯ ತಂಬುಳಿ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ಈ ಸಣ್ಣ ಟಿಪ್ಸ್‌ನಿಂದ ನೀವು ಪ್ರತಿ ತಿಂಗಳು ನಿಮ್ಮ ಮನೆಯಲ್ಲಿ ಅಡುಗೆ ಎಣ್ಣೆಯನ್ನ ಉಳಿಸ್ಬೋದು

Source link
ಒಂದು ಮಾವಿನಕಾಯಿಯಿಂದ ಇಡೀ ಮನೆ ಮಂದಿಯ ಹೊಟ್ಟೆ ತುಂಬಿಸೋ ರೆಸಿಪಿ; ಹಳ್ಳಿ ಶೈಲಿಯ ಅಡುಗೆ