Headlines

ರಾಣಿ ಫಿಕ್ಸ್ ಆಯ್ತು: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಮದುವೆ ಆಗ್ತಿರೋ ಹುಡುಗಿ ಯಾರು?

ರಾಣಿ ಫಿಕ್ಸ್ ಆಯ್ತು: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಮದುವೆ ಆಗ್ತಿರೋ ಹುಡುಗಿ ಯಾರು?

ರಾಣಿ ಫಿಕ್ಸ್ ಆಯ್ತು: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಮದುವೆ ಆಗ್ತಿರೋ ಹುಡುಗಿ ಯಾರು?

Sam Sameer Girlfriend Name: ಕನ್ನಡದಲ್ಲಿ Vlog ಮಾಡಿ ಗಮನಸೆಳೆದ ಸ್ಯಾಮ್‌ ಸಮೀರ್‌ ಈಗ ಮದುವೆಯಾಗಲು ರೆಡಿ ಆಗಿದ್ದಾರೆ. ಹುಡುಗಿ ಫಿಕ್ಸ್‌ ಮಾಡುವ ಶಾಸ್ತ್ರದ ವಿಡಿಯೋವನ್ನು ಕೂಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು?

ಈ ಹಿಂದೆ ಓರ್ವ ಬಿಗ್‌ ಬಾಸ್‌ ಸ್ಪರ್ಧಿ ಜೊತೆ ಸ್ಯಾಮ್‌ ಸಮೀರ್‌ ಲವ್‌ನಲ್ಲಿದ್ದರು ಎನ್ನಲಾಗಿತ್ತು. ಆ ಬಳಿಕ ಅವರು ಬ್ರೇಕಪ್‌ ಮಾಡಿಕೊಂಡಿದ್ದರು. ಈ ಬಗ್ಗೆ ಇವರಿಬ್ಬರು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹೆಸರು ಪ್ರಸ್ತಾಪ ಮಾಡದೆ ಹೇಳಿಕೊಂಡಿತ್ತು.

ಸ್ಯಾಮ್‌ ಸಮೀರ್‌ ಅವರು ಕೆಲ ದಿನಗಳ ಹಿಂದೆ ಮದುವೆ ಆಗುವೆ ಎಂದು ಹೇಳಿದ್ದರು. ಆದರೆ ಹುಡುಗಿ ಯಾರು ಎಂದು ರಿವೀಲ್‌ ಮಾಡಿರಲಿಲ್ಲ. ಈಗ ಹುಡುಗಿ ರಿವೀಲ್‌ ಮಾಡಿದ್ದಾರೆ.‌ ಇದಕ್ಕೂ ಮೊದಲು ಹುಡುಗಿ ಕುಟುಂಬದ ಜೊತೆ ವಯನಾಡಿಗೆ ಹೋಗಿದ್ದರು.

ಇನ್ನು ಹುಡುಗಿ ಯಾರು ಎಂದು ಹೇಳಿದ ಬಳಿಕ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿದ್ದಾರೆ. ಈಗ ಇವರಿಬ್ಬರ ಫೋಟೋ, ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ನೇಹಾ ಗುಪ್ತ ಎನ್ನುವವರ ಜೊತೆ ಸ್ಯಾಮ್‌ ಸಮೀರ್‌ ಅವರು ಕಮಿಟ್‌ ಆಗಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ನಡೆದಿದೆ. ನೇಹಾ ಗುಪ್ತ ಅವರು ಬೆಂಗಳೂರಿನವರು ಎನ್ನಲಾಗಿದೆ. ನೇಹಾ ಅವರು ಕೇಕ್‌ ರೆಡಿ ಮಾಡಿ ಮಾರುತ್ತಾರೆ. ವಿಧ ವಿಧವಾದ ಸಂದರ್ಭಕ್ಕೆ ತಕ್ಕಂತೆ ಅವರು ಕೇಕ್‌ ರೆಡಿ ಮಾಡುತ್ತಾರೆ.

ನೇಹಾ ಗುಪ್ತ ಕುಟುಂಬ, ಶಿಕ್ಷಣದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. TEDx and Josh talk speaker ಎಂದು ಕೂಡ ಹೇಳಿಕೊಂಡಿದ್ದಾರೆ.

ಇವರಿಬ್ಬರ ನಿಶ್ಚಿತಾರ್ಥ ಯಾವಾಗ? ಎಲ್ಲಿ ಎಂದು ಇನ್ನೂ ಹೇಳಿಲ್ಲ.

ವರುಣ್‌ ಆರಾಧ್ಯ, ಶ್ರವಣ್‌ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದರು.

ಅಸಹಾಯಕರಿಗೆ, ಬಡವರಿಗೆ ಅನ್ನದಾನ ಮಾಡೋದು ಎಂದರೆ ನೇಹಾ ಗುಪ್ತಗೆ ತುಂಬ ಇಷ್ಟವಂತೆ. ಈ ನಿಟ್ಟಿನಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರಂತೆ.

ಸ್ಯಾಮ್‌ ಸಮೀರ್‌ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ.

ಸ್ಯಾಮ್‌ ಸಮೀರ್‌ ಅವರು ಯುಟ್ಯೂಬ್‌ನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ. ಇವರ ಗಳಿಕೆ ಕೂಡ ಚೆನ್ನಾಗಿದೆ.

ಮದುವೆ, ಹುಡುಗಿ ನೋಡುವ ಶಾಸ್ತ್ರ ಸಂಬಂಧಿತ ಇವರು ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದು, ಒಂದು-ಎರಡು ದಿನಗಳಲ್ಲಿ ಎಂಟು, ಒಂಭತ್ತು ಲಕ್ಷ ವೀಕ್ಷಣೆ ಪಡೆದಿದೆ.

ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಸ್ಯಾಮ್‌ ಸಮೀರ್‌ ಅವರು ಯಾವಾಗ ಮದುವೆ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *