59 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ! | India Declared Naxal Free After 59 Years Says Amit Shah In Parliament Gdp Videoshow

59 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ! | India Declared Naxal Free After 59 Years Says Amit Shah In Parliament Gdp Videoshow


‘ನಕ್ಸಲರ ಕೇಂದ್ರೀಯ ಸಮಿತಿ ಮತ್ತು ನಕ್ಸಲರ ಪ್ರಮುಖ ಕಾರ್ಯಪಡೆ ಬಹುತೇಕ ನಿರ್ನಾಮವಾಗುವುದರೊಂದಿಗೆ 59 ವರ್ಷಗಳ ಬಳಿಕ ದೇಶ ನಕ್ಸಲ್‌ ಮುಕ್ತವಾಗಿ ಹೊರಹೊಮ್ಮಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಹತ್ವದ ಘೋಷಣೆ ಮಾಡಿದ್ದಾರೆ.

ದೇಶವನ್ನು 2026ರ ಮಾ.31ರೊಳಗೆ ನಕ್ಸಲ್ ಮುಕ್ತ ಮಾಡುವ ಮಾಡುವ ಕುರಿತು ಕಳೆದ ವರ್ಷ ಕೇಂದ್ರ ಸರ್ಕಾರ ನೀಡಿದ್ದ ಗಡುವಿನ ಮುನ್ನಾ ದಿನ ಅವರು ಲೋಕಸಭೆಯಲ್ಲಿ ಸೋಮವಾರ ಇಂಥದ್ದೊಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಜೊತೆಗೆ, ‘ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುದೊಡ್ಡ ಸಾಧನೆ’ ಎಂದು ಬಣ್ಣಿಸಿದ್ದಾರೆ.

‘ದಶಕಗಳಿಂದ ನಕ್ಸಲ್ ಹಿಂಸಾಚಾರಕ್ಕೆ ತುತ್ತಾಗಿದ್ದ ಭಾರತ ಕೊನೆಗೂ ಆ ಆತಂಕದಿಂದ ಹೊರಬಂದಿದೆ. ದೇಶದಲ್ಲಿ ನಕ್ಸಲರ ಅತ್ಯಂತ ಭದ್ರ ಎಂಬ ಕುಖ್ಯಾತಿ ಹೊಂದಿದ್ದ ಮತ್ತು ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಆರಂಭದ ಬಳಿಕ ಕೆಂಪು ಉಗ್ರರ ಕೊನೆಯ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢದ ಬಸ್ತರ್‌ ವಲಯ ಕೂಡಾ ಬಹುತೇಕ ನಕ್ಸಲ್‌ ಮುಕ್ತವಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ನಕ್ಸಲ್ ಮುಕ್ತ:

ದೇಶವನ್ನು ಎಡಪಂಥೀಯ ಉಗ್ರವಾದದಿಂದ ಮುಕ್ತಗೊಳಿಸುವ ಯತ್ನಗಳ ಬಗ್ಗೆ ಸೋಮವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ‘ಕಾನೂನು ಇಲ್ಲದೆ 12 ರಾಜ್ಯಗಳು ಕೆಂಪು ಕಾರಿಡಾರ್‌ (ನಕ್ಸಲ್‌ ಪ್ರದೇಶ) ಆಗಿದ್ದವು. ಪರಿಣಾಮ ಈ ರಾಜ್ಯಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯದೇ 12 ಕೋಟಿ ಜನರು ಯಾವುದೇ ಹಲವು ವರ್ಷ ಬಡತನದಲ್ಲಿ ಬದುಕುತ್ತಿದ್ದರು. ನಕ್ಸಲರ ಕ್ರೌರ್ಯಕ್ಕೆ 5,000 ಭದ್ರತಾ ಸಿಬ್ಬಂದಿ ಸೇರಿದಂತೆ 20,000 ಜನ ಬಲಿಯಾಗಿದ್ದಾರೆ’ ಎಂದು ಅಂಕಿಅಂಶಗಳನ್ನು ನೀಡಿದರು.

ಜತೆಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿ, ‘ನಮ್ಮ ಸರ್ಕಾರವು ಆದಿವಾಸಿಗಳ ಅಭಿವೃದ್ಧಿ ಮಾಡುತ್ತಿದೆ. ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ. ಅದರಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ನಕ್ಸಲ್‌ ಮುಕ್ತ ಭಾರತವೇ ಮೋದಿ ಸರ್ಕಾರದ ಬಹುದೊಡ್ಡ ಸಾಧನೆ ಹಾಗೂ ಇದನ್ನು ಎಲ್ಲಾ ಸಂಶೋಧನಾಕಾರರು ಒಪ್ಪುತ್ತಾರೆ’ ಎಂದು ಶಾ ಹೇಳಿದರು.



Source link

Leave a Reply

Your email address will not be published. Required fields are marked *