ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ: ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು | Newborn Baby Found In Utkal Express Train Toilet

ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ: ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು | Newborn Baby Found In Utkal Express Train Toilet



ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ: ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು | Newborn Baby Found In Utkal Express Train Toilet

newborn baby found in train toilet : ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ಪ್ರಯಾಣಿಕರೊಬ್ಬರು ಮಗುವನ್ನು ಕಂಡು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಂತರ ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಪಾಪಿಗಳು

ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವೊಂದನ್ನು ಯಾರೋ ಬಿಟ್ಟು ಹೋದಂತಹ ಘಟನೆ ನಡೆದಿದೆ. ಒಂದು ಬಟ್ಟೆಯಲ್ಲಿ ಸುತ್ತಿ ಮಗುವನ್ನು ಬಿಡಲಾಗಿದ್ದು, ಮಗು ಶೌಚಾಲಯಕ್ಕೆ ಹೋದವರಿಗೆ ಮಗು ನಡುಗುತ್ತಾ ಅಳುತ್ತಿರುವ ದೃಶ್ಯ ಕಂಡು ಬಂದಿದೆ. ಕೂಡಲೇ ಅವರು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದ್ದು, ಮಗು ರೈಲಿನ ಟಾಯ್ಲೆಟ್‌ನಲ್ಲಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರಿದ್ವಾರದಿಂದ ಪುರಿಗೆ ಹೊರಟಿದ್ದ ಉತ್ಕಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೌಚಾಲಯದಲ್ಲಿ ಈ ಘಟನೆ ನಡೆದಿದೆ. ಸಣ್ಣದೊಂದು ಟವೆಲ್‌ನಲ್ಲಿ ಮಗುವನ್ನು ಅರ್ಧ ಸುತ್ತಿ ಶೌಚಾಲಯದಲ್ಲಿ ಬಿಡಲಾಗಿತ್ತು.

ಪ್ರಯಾಣಿಕನೊಬ್ಬ ಶೌಚಾಲಯದ ಬಾಗಿಲು ತೆರೆದಾಗ ಘಟನೆ ಬೆಳಕಿಗೆ

ಅಧಿಕಾರಿಗಳ ಪ್ರಕಾರ, ಎಸ್‌ 4ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಶೌಚಾಲಯದ ಬಾಗಿಲು ತೆರೆದಾಗ, ಶೌಚಾಲಯದ ನೆಲದಲ್ಲಿ ನವಜಾತ ಶಿಶುವೊಂದನ್ನು ಬಿಟ್ಟು ಹೋಗಿರುವುದನ್ನು ನೋಡಿ ಆಘಾತಗೊಂಡಿದ್ದಾರೆ. ಆ ಪ್ರಯಾಣಿಕ ಕೂಡಲೇ ರೈಲಿನ ಬೋಗಿಯಲ್ಲಿರುವವರಿಗೆ ವಿಚಾರ ತಿಳಿಸಿದ್ದರಿಂದ ರೈಲಿನಲ್ಲಿದ್ದವರು ಭಯಗೊಂಡಿದ್ದಾರೆ. ನಂತರ ಒಬ್ಬ ಪ್ರಯಾಣಿಕ ರೈಲ್ವೆ ತುರ್ತು ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ನವಜಾತ ಶಿಶುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ: ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ: ಯಾವ ವಾಹನಗಳಿಗೆ ಎಷ್ಟು ದರ ಹೆಚ್ಚಳ

ರೈಲಿನಲ್ಲಿ ಸಿಕ್ಕ ಮಗುವನ್ನು ಜಿಲ್ಲಾ ಆಸ್ಪತ್ರೆಯ ವಿಶೇಷ ಆರೈಕೆ ನವಜಾತ ಶಿಶು ಘಟಕಕ್ಕೆ (SNCU) ದಾಖಲಿಸಲಾಗಿದೆ ಎಂದು ಸಿವಿಲ್ ಸರ್ಜನ್ ಡಾ. ಯಶವಂತ್ ವರ್ಮಾ ತಿಳಿಸಿದ್ದಾರೆ. ವೈದ್ಯರ ತಂಡವು ಮಗುವಿನ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಗತ್ಯವಿರುವ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಶಿಶುವನ್ನು ಪ್ರಸ್ತುತ ವೀಕ್ಷಣೆಯಲ್ಲಿಡಲಾಗಿದ್ದು, ವೈದ್ಯರು ಮಗುವಿನ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಇದನ್ನೂ ಓದಿ: ಟೋಲ್ ದರ ಹೆಚ್ಚಳ ನಗದು ಸ್ವೀಕಾರ ಇಲ್ಲ: ಯುಪಿಐ ಮೂಲಕವೇ ಪೇಮೆಂಟ್

ಇತ್ತ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಉತ್ಕಲ್ ಎಕ್ಸ್‌ಪ್ರೆಸ್‌ನ ಎಸ್ -4 ಕೋಚ್‌ನ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕಟ್ನಿ ಮುರ್ವಾರಾ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ನವಜಾತ ಶಿಶುವನ್ನು ಶೌಚಾಲಯದಲ್ಲಿ ಬಿಟ್ಟವರು ಯಾರು ಎಂದು ತಿಳಿಯಲುಪೊಲೀಸರು ಅದೇ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸಹ ಪ್ರಶ್ನಿಸಿದ್ದಾರೆ. 



Source link

Leave a Reply

Your email address will not be published. Required fields are marked *