
ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನಾಗಿದ್ದ ಮಗನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಜಗಳದ ವೇಳೆ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸಾವನ್ನಪ್ಪಿದ್ದಾರೆ.
ತನಗೆ ಮದುವೆ ಮಾಡಿಸಲಿಲ್ಲ ಎಂದು ಅಮ್ಮನನ್ನೇ ಕೊಂದ ಮಗ
ಹಾಸನ: ತನಗೆ ಮದುವೆ ಮಾಡಿಸಲಿಲ್ಲ ಎಂದು ಮಗನೋರ್ವ ತನಗೆ ಜನ್ಮ ನೀಡಿದ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದಂತಹ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. 65 ವರ್ಷದ ಗಂಗಮ್ಮ ಕೊಲೆಯಾದ ಮಹಿಳೆ 40 ವರ್ಷದ ಉಮಾಶಂಕರ್ ಕೊಲೆ ಮಾಡಿದ ಪಾಪಿ ಮಗ.
ಅಪಘಾತದಿಂದಾಗಿ ತಲೆಗೆ ಪೆಟ್ಟಾಗಿತ್ತು:
ಮಗ ಉಮಾಶಂಕರ್ಗೆ ಕಳೆದ ಎರಡು ವರ್ಷದ ಹಿಂದೆ ಅಪಘಾತವಾಗಿತ್ತು ಅಪಘಾತದ ಬಳಿಕ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸ್ ಆಗುವಾಗ ಅಪಘಾತದಲ್ಲಿ ಉಮಾಶಂಕರ್ ತಲೆಗೆ ಪೆಟ್ಟು ಬಿದ್ದ ನಂತರ ಉಮಾಶಂಕರ್ ಒಮ್ಮೊಮ್ಮೆ ಬುದ್ಧಿಭ್ರಮಣೆಯಾದವನಂತೆ ವರ್ತಿಸುತ್ತಿದ್ದ. ಪದೇ ಪದೇ ಮದುವೆ ಮಾಡಿಸುವಂತೆ ತಾಯಿ ಜೊತೆ ಜಗಳವಾಡುತ್ತಿದ್ದ. ಆದರೆ ಸರಿ ಇರುವವರಿಗೆ ಇಂದಿನ ಕಾಲದಲ್ಲಿ ಹುಡುಗಿ ಸಿಗಲ್ಲ, ಹೀಗಿರುವಾಗ ಬುದ್ಧಿಭ್ರಮಣೆಯಾದವರಿಗೆ ಯಾರು ಹೆಣ್ಣು ಕೊಡುತ್ತಾರೆ.
ಇದನ್ನೂ ಓದಿ: ಎಕ್ಸ್ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ: ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು
ಹೀಗಿರುವಾಗ ಮಾ.26 ರಂದು ಮನೆಯಲ್ಲಿ ತಾಯಿ ಗಂಗಮ್ಮನ ಜೊತೆ ಮಗ ಉಮಾಶಂಕರ್ ತನಗೆ ಮದುವೆ ಮಾಡುವಂತೆ ಮತ್ತೆ ಜಗಳ ತೆಗೆದಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಮೊದಲು ಉಮಾಶಂಕರ ಕೈಯಿಂದ ತಾಯಿ ಗಂಗಮ್ಮನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಗಂಗಮ್ಮಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ನಂತರ ಆರೋಪಿ ಉಮಾಶಂಕರ್ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಾ.30ರ ಮಧ್ಯರಾತ್ರಿ ಗಂಗಮ್ಮ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ರವಣಬೆಳಗೊಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ: ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ