Headlines

ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು! | Us Global Power Military Bases Modern Colonialism Analysis Gvd Videoshow

ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು! | Us Global Power Military Bases Modern Colonialism Analysis Gvd Videoshow


ಆಗ ಬ್ರಿಟಿಷರು.. ಈಗ ಅಮೆರಿಕನ್ನರು.. ಸೂರ್ಯ ಮುಳುಗದ ನವ ಸಾಮ್ರಾಜ್ಯ..!,, ವಿದೇಶಗಳಲ್ಲಿ 750 ಸೇನಾನೆಲೆ.. ಸಹಾಯದ ನೆಪದಲ್ಲಿ ದೊಡ್ಡಣ್ಣನ ಬಲೆ..!,, 195 ದೇಶಗಳ ಮೇಲೆ 360 ಡಿಗ್ರಿ ಕಣ್ಗಾವಲು.. ವಿಶ್ವವೇ ಅಮೆರಿಕ ಅಡಿಯಾಳು..? ಪಾಲಿಟಿಕ್ಸ್ ಪ್ರಭಾವ.. ಮಿಲಿಟರಿ ಹಸ್ತಕ್ಷೇಪ.. USA ಹೆಣೆದಿರೋ ವಸಾಹತು ವ್ಯೂಹ..! ಒಂದೊಮ್ಮೆ ಬ್ರಿಟಿಷರು ಇಡೀ ಪ್ರಪಂಚದ ಬಹತೇಕ ದೇಶಗಳನ್ನ ಆಳ್ತಾ, ತಮ್ಮದು ಸೂರ್ಯ ಮುಳುಗದ ಸಾಮ್ರಾಜ್ಯ ಅಂತ ಮೆರೀತಾ ಇದ್ರು.

ಇದೀಗ ಅಮೆರಿಕ ಅದೇ ರೀತಿ ಆಧುನಿಕ ವಸಾಹತುಶಾಹಿ ಆಗೋದಕ್ಕೆ ಹೊರಟಿದೆ. ಪ್ರಸ್ತುತ ಇರಾನ್ ಜೊತೆ ಯುದ್ಧದಲ್ಲಿ ತೊಡಗಿರೋ ಅಮೆರಿಕ ಗಲ್ಫ್ ರಾಷ್ಟ್ರಗಳಲ್ಲಿರೋ ತನ್ನ ಸೇನಾನೆಲೆಗಳ ಮೂಲಕ ದಾಳಿ ಮಾಡ್ತಾ ಇದೆ. ಇದೇ ರೀತಿ ವಿಶ್ವದ ಬಹುತೇಕ ದೇಶಗಳಲ್ಲಿ ಅಮೆರಿಕದ 750 ಸೇನಾನೆಲೆಗಳು ಇದ್ದು, ಅಮೆರಿಕ ಅಕ್ಷರಶಃ ಜಗತ್ತನ್ನ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ. ಅಮೆರಿಕದ ಈ ವಸಾಹತುಶಾಹಿ ವ್ಯೂಹದ ಕುರಿತ ರೋಚಕ ಸ್ಟೋರಿ ಇಲ್ಲಿದೆ. ದೊಡ್ಡಣ್ಣನ ಈ ವಸಾಹತು ವ್ಯೂಹದಲ್ಲಿ ಈ ತನಕ ಭಾರತ ಮಾತ್ರ ಸಿಲುಕಿಲ್ಲ.

ಈ ಹಿಂದೆ ಅಫ್ಘಾನಿಸ್ತಾನ್ ಮೇಲೆ ಯುದ್ಧ ಮಾಡಲಿಕ್ಕೆ ಪಾಕಿಸ್ತಾನವನ್ನ ಅಮೆರಿಕ ಬಳಸಿಕೊಂಡಿತ್ತು. ಪಾಕ್, ಅಪ್ಘನ್​ಗಳಲ್ಲೂ ಅಮೆರಿಕಾ ಸೇನಾ ನೆಲೆಗಳು ಸ್ಥಾಪನೆಗೊಂಡಿದ್ವು. ಅಮೆರಿಕದ ಈ ವಸಾಹತು ವ್ಯೂಹಕ್ಕೆ ಸಿಲುಕದ ಕೆಲವೇ ದೇಶಗಳಲ್ಲಿ ನಮ್ಮ ಭಾರತ ಕೂಡ ಇರೋದು ವಿಶೇಷ. ಬ್ರಿಟಿಷರು ಯುದ್ಧ ಮಾಡಿ ಬೇರೆ ಬೇರೆ ದೇಶಗಳಲ್ಲಿ ವಸಾಹತು ಸ್ಥಾಪನೆ ಮಾಡ್ತಾ ಬಂದ್ರು. ಆಧ್ರೆ ಅಮೆರಿಕ ಇಡೀ ವಿಶ್ವವನ್ನ ತನ್ನ ತಾಂತ್ರಿಕ ಮತ್ತು ಸೇನಾ ಬಲದಿಂದ ಹತೋಟಿಯಲ್ಲಿ ಇಟ್ಟುಕೊಳ್ತಾ ಬಂದಿದೆ. ಆ ಮೂಲಕ ಅಘೋಷಿತ ಸಾಮ್ರಾಜ್ಯ ಕಟ್ಟಿ ಹೊಸ ಕಾಲದ ವಸಾಹತುಶಾಹಿ ಅನ್ನಿಸಿಕೊಂಡಿದೆ.



Source link

Leave a Reply

Your email address will not be published. Required fields are marked *