Headlines

'ಫಸ್ಟ್​ ನೈಟ್​ ವಿತ್​ ದೆವ್ವ'ದ ಸಂಭ್ರಮದ ನಡುವೆಯೇ ಅಪ್ಪ ಆಗ್ತಿರೋ ಪ್ರಥಮ್​- ನಟ ಹೇಳಿದ್ದೇನು?

'ಫಸ್ಟ್​ ನೈಟ್​ ವಿತ್​ ದೆವ್ವ'ದ ಸಂಭ್ರಮದ ನಡುವೆಯೇ ಅಪ್ಪ ಆಗ್ತಿರೋ  ಪ್ರಥಮ್​- ನಟ ಹೇಳಿದ್ದೇನು?

'ಫಸ್ಟ್​ ನೈಟ್​ ವಿತ್​ ದೆವ್ವ'ದ ಸಂಭ್ರಮದ ನಡುವೆಯೇ ಅಪ್ಪ ಆಗ್ತಿರೋ  ಪ್ರಥಮ್​- ನಟ ಹೇಳಿದ್ದೇನು?

ಬಿಗ್ ಬಾಸ್ ವಿಜೇತ ಪ್ರಥಮ್ ಅವರ ‘ಫಸ್ಟ್ ನೈಟ್ ವಿತ್ ದೆವ್ವ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೇ ವೇಳೆ  ನಟ ಶ್ರೀನಿವಾಸಮೂರ್ತಿ ಪ್ರಥಮ್ ಅಪ್ಪನಾಗುತ್ತಿರುವ  ಸುದ್ದಿ  ಬಹಿರಂಗಪಡಿಸಿದ್ದಾರೆ. ಪ್ರಚಾರದಿಂದ ದೂರವಿರುವ ಪ್ರಥಮ್,  ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ

Bigg Boss Winner, ಒಳ್ಳೆ ಹುಡುಗ ಪ್ರಥಮ್​ ಅವರ ಫಸ್ಟ್​ ನೈಸ್ ವಿತ್​ ದೆವ್ವ (First Night With Devva) ಸಿನಿಮಾ ನಾಡಿದ್ದು ಅಂದ್ರೆ ಇದೇ 3ರಂದು ಬಿಡುಗಡೆಯಾಗಲಿರುವುದಾಗಿ ಘೋಷಿಸಲಾಗಿದೆ. ಸದ್ಯ ಈ ಚಿತ್ರದ ಟ್ರೈಲರ್​ ಅನ್ನು ಹಿರಿಯ ನಟ ಶ್ರೀನಿವಾಸಮೂರ್ತಿ ಬಿಡುಗಡೆ ಮಾಡಿದ್ದಾರೆ.

ಅಷ್ಟಕ್ಕೂ ಪ್ರಥಮ್​ ಅವರು ಯಾವುದೇ ರೀತಿಯ ಪ್ರಚಾರ ಬಯಸುವವರಲ್ಲ ಎಂದು ಹಲವು ಬಾರಿ ಹೇಳುತ್ತಲೇ ಬಂದಿದ್ದಾರೆ. ಈಚೆಗಷ್ಟೇ ಫಸ್ಟ್​ ನೈಸ್ ವಿತ್​ ದೆವ್ವದ ಪ್ರಮೋಷನ್​ಗಾಗಿ ದುಡ್ಡು ಖರ್ಚು ಮಾಡುವ ಬದಲು, ಟ್ರೈಲರ್​ ಲಾಂಚ್​ ಆದಾಗ ಅದನ್ನು ನೋಡಿದವರಿಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.

ಹಲವು ಸಂದರ್ಶನಗಳಲ್ಲಿ ಪ್ರಥಮ್ ನಾನು ಸರಳವಾಗಿ ಹಳ್ಳಿಯ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಅದರಂತೆ ಸರಳವಾಗಿ ಮದುವೆಯಾಗಿದ್ದು, ಮದುವೆಗೂ ಮುನ್ನ ನಡೆದ ಆರತಕ್ಷತೆಯಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಚಿತ್ರರಂಗದ ಹಲವು ಮಂದಿ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು.

ಅದರಂತೆಯೇ, ಇದೀಗ ಪ್ರಥಮ್​ ಅವರು ತಾವು ಅಪ್ಪ ಆಗ್ತಿರೋ ಸುದ್ದಿ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಸುದ್ದಿಯನ್ನು ಅವರಾಗಿಯೇ ಹೇಳಲಿಲ್ಲ. ಬದಲಿಗೆ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ವಿಷಯ ತಿಳಿಸಿದ್ದರಿಂದ, ಅದರ ಬಗ್ಗೆ ಪ್ರಶ್ನೆ ಕೇಳಿದಾಗ ರಿವೀಲ್​ ಮಾಡಿದ್ದಾರೆ.

ಇವೆಲ್ಲಾ ತೀರಾ ವೈಯಕ್ತಿಕ ವಿಚಾರಗಳು. ಇದನ್ನೆಲ್ಲ ವ್ಯೂವ್ಸ್​, ಲೈಕ್ಸ್​ಗೋಸ್ಕರ ಕ್ಯಾಮೆರಾ ಮುಂದೆ ಹೇಳಲು ಇಷ್ಟಪಡುವುದಿಲ್ಲ. ನಟ ಶ್ರೀನಿವಾಸಮೂರ್ತಿ ಅವರು ಹೇಳಿದ್ದಕ್ಕೆ, ನೀವು ಕೇಳಿದ್ದಕ್ಕೆ ಹೇಳುತ್ತಿದ್ದೇನೆ ಅಷ್ಟೇ. ಇದನ್ನೆಲ್ಲಾ ಜನರ ಮುಂದೆ ಇಟ್ಟು ವಿಜ್ರಂಭಿಸುವುದು ನನಗೆ ಇಷ್ಟವಿಲ್ಲ. ಜೀವನ ಚೆನ್ನಾಗಿ ನಡೆಯುತ್ತಿದೆ. ಅಪ್ಪ ಆಗ್ತಿದ್ದೇನೆ ಅಷ್ಟೇ ಎಂದಿದ್ದಾರೆ.

ಈ ಹಿಂದೆ ಪ್ರಥಮ್​ ಅವರು, ತಮ್ಮ ಮದುವೆಯ ಸಂದರ್ಭದಲ್ಲಿಯೇ, ಟ್ವಿಸ್ಟ್​ ಕೊಟ್ಟಿದ್ದರು. ಅದೇ ಸಂದರ್ಭದಲ್ಲಿ ಫಸ್ಟ್ ನೈಟ್ ವಿತ್ ದೆವ್ವ ರಿಲೀಸ್ ಮಾಡಿದ್ದರು. ಅಲ್ಲಿ ಸಿನಿಮಾ ನಟಿಯ ಜೊತೆ ಫೋಟೋ ಶೇರ್​ ಮಾಡಿದ್ದರು. ತಮ್ಮ ಮದುವೆಯ ದಿನವೂ ಅಸಲಿ ಪತ್ನಿಯ ಜೊತೆಗಿನ ಫೋಟೋ ಹಾಕಿಕೊಳ್ಳುವ ಬದಲು ಪ್ರಥಮ್​ ಅವರು ಸಿನಿಮಾ ಪ್ರಮೋಷನ್​ ಮಾಡಿಕೊಳ್ಳಲು ಸಿನಿಮಾದ ಹೀರೊಯಿನ್​ ನಿಖಿತಾ ಜೊತೆ ಫೋಟೋ ಶೇರ್​ ಮಾಡಿಕೊಂಡಿದ್ದರು. ಆದ್ದರಿಂದ ಇವರ ರಿಯಲ್​ ಪತ್ನಿ ಹಾಗೂ ರೀಲ್​ ಪತ್ನಿಯ ನಡುವೆ ಕನ್​ಫ್ಯೂಸ್​ ಆಗಿರುವ ಫ್ಯಾನ್ಸ್​, ಮದುವೆಯ ದಿನವೇ ಈ ಫೋಟೋ ನೋಡಿ ನಾಯಕಿಯನ್ನೇ ಮದುಮಗಳು ಎಂದು ತಿಳಿದು ಮದುವೆಯ ಶುಭ ಹಾರೈಸಿದ್ದರು.

Source link

Leave a Reply

Your email address will not be published. Required fields are marked *