Headlines

ಕೆಜಿಎಫ್ ಬಾಕ್ಸಾಫೀಸ್​ ಕೋಟೆ ಕೆಡವಿದ ರಣ್ವೀರ್ ಸಿಂಗ್! ಧುರಂಧರ್ 2 ಮುಂದೆ ಬಾಹುಬಲಿ, ಪುಷ್ಪ ರೆಕಾರ್ಡ್ ನುಚ್ಚುನೂರು! | Dhurandhar 2 Breaks Baahubali Kgf And Pushpa Records With Massive 2700 Cr Rupees Collection Kvn

ಕೆಜಿಎಫ್ ಬಾಕ್ಸಾಫೀಸ್​ ಕೋಟೆ ಕೆಡವಿದ ರಣ್ವೀರ್ ಸಿಂಗ್! ಧುರಂಧರ್ 2 ಮುಂದೆ ಬಾಹುಬಲಿ, ಪುಷ್ಪ ರೆಕಾರ್ಡ್ ನುಚ್ಚುನೂರು! | Dhurandhar 2 Breaks Baahubali Kgf And Pushpa Records With Massive 2700 Cr Rupees Collection Kvn


‘ಧುರಂಧರ್-2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಎರಡು ಭಾಗಗಳಿಂದ ಒಟ್ಟು 2,700 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಈ ಚಿತ್ರವು ‘ಬಾಹುಬಲಿ’, ‘ಪುಷ್ಪ’, ಮತ್ತು ‘ಕೆಜಿಎಫ್’ ಸರಣಿಗಳ ಒಟ್ಟು ಗಳಿಕೆಯ ದಾಖಲೆಗಳನ್ನು ಮುರಿದುಹಾಕಿದೆ. ಭಾರತದ ಸ್ಪೈ ಏಜೆಂಟ್ ಕಥೆಯುಳ್ಳ ಈ ಸಿನಿಮಾ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ.

ಬೆಂಗಳೂರು: ಸಿನಿಮಾಗಳ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಬಂದ್ರೆ ದೊಡ್ಡ ಹಿಟ್ ಆಗಿದ್ದೇ ಹೆಚ್ಚು. ಮೊದಲ ಭಾಗ ತಕ್ಕ ಮಟ್ಟಿಗೆ ಹಿಟ್ ಆದ್ರೆ ಎರಡನೇ ಪಾರ್ಟ್​ ಸೂಪರ್​ ಹಿಟ್ ಆಗಿರುತ್ತವೆ. ಇದೀಗ ಎರಡು ಭಾಗದಲ್ಲಿ ಬಂದಿರೋ ಧುರಂಧರ್​ ಸಿನಿಮಾ ಹಳೇ ಸಿನಿಮಾಗಳ ದಾಖಲೆಯನ್ನೆಲ್ಲಾ ಚಿಂದಿ ಚಿತ್ರಾನ್ನ ಮಾಡಿದೆ. ಹಾಗಾದ್ರೆ ಧುರಂಧರ್ ಯಾವೆಲ್ಲಾ ಸೀಕ್ವೆಲ್​ ಪ್ರೀಕ್ವೆಲ್​ ಸಿನಿಮಾಗಳ ರೆಕಾರ್ಡ್ ಮುರಿದಿದೆ ಅಂತ ನೋಡೋಣ ಬನ್ನಿ.

ಮತ್ತಷ್ಟು ಹೆಚ್ಚಾಯ್ತು ಬಾಕ್ಸಾಫೀಸ್‌ನಲ್ಲಿ ಧುರಂಧರ್​-2 ಆರ್ಭಟ!

ಧುರಂಧರ್​-2. ಈ ಸಿನಿಮಾ ಬಗ್ಗೆ ಇಡೀ ದೇಶದ ಮೂಲೆ ಮೂಲೆಯಲ್ಲೂ ಮಾತಾಡುತ್ತಿದ್ದಾರೆ. ಪಾಕಿಗಳ ಹುಟ್ಟಡಗಿಸಿದ ಭಾರತದ ಸ್ಪೈ ಏಜೆಂಟ್​​ ಕತೆಯ ಧುರಂಧರ್​ ಬಾಕ್ಸಾಫೀಸ್​ನಲ್ಲಿ ನಿಜಕ್ಕೂ ದರ್ಬಾರ್ ಮಾಡ್ತಾ ಇದೆ. ಈ ಸಿನಿಮಾದ ಎರಡು ಪಾರ್ಟ್‌ಗಳಿಂದ ಬಾಹುಬಲಿ,ಪುಷ್ಪ, ಕೆಜಿಎಫ್‌ನಂತಹ ದೊಡ್ಡ ಸಿನಿಮಾಗಳ ರೆಕಾರ್ಡ್‌ಗಳು ಒಡೆದು ಚೂರಾಗಿವೆ..

ಎರಡು ಪಾರ್ಟ್‌ನಿಂದ ಬಾಹುಬಲಿ ಗಳಿಸಿದ್ದು 2,400 ಕೋಟಿ..!

ಧುರಂಧರ್​-2 ಕಲೆಕ್ಷನ್ ನೋಡಿ ಇವತ್ತು ಎಲ್ಲರೂ ಬಾಯ್ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಅದರಲ್ಲೂ ಬಾಹುಬಲಿ-ಪುಷ್ಪ, ಕೆಜಿಎಫ್​​ನಂತಹ ನಿರ್ಮಾಣ ಸಂಸ್ಥೆಗಳು ಹೊಟ್ಟೆ ಕಿವುಚಿಕೊಳ್ಳೋ ಹಾಗಾದ್ತಿದೆ. ಯಾಕಂದ್ರೆ ಎರಡು ಪಾರ್ಟ್​ನಲ್ಲಿ ಬಂದು ಸಾವಿರಾರು ಕೋಟಿ ಕಲೆಕ್ಷನ್​ ಮಾಡಿದ್ದ ಸಿನಿಮಾಗಳ ರೆಕಾರ್ಡ್​​ಅನ್ನೆಲ್ಲಾ ಧರಂಧರ್​ ಮುರಿಯುತ್ತಿದೆ. ಬಾಹುಬಲಿ ಸಿನಿಮಾ ಎರಡು ಪಾರ್ಟ್​ನಲ್ಲಿ ಬಂದಿತ್ತು. ಮೊದಲ ಭಾಗ 600 ಕೋಟಿ ಗಳಿಸಿದ್ರೆ ಎರಡನೇ ಭಾಗ 1,810.60 ಕಲೆಕ್ಷನ್ ಮಾಡಿತ್ತು. ಬಾಹುಬಲಿಯ ಈ ಎರಡೂ ಪಾರ್ಟ್‌ನಿಂದ ಒಟ್ಟು ಕಲೆಕ್ಷನ್ ಆಗಿದ್ದು 2400 ಕೋಟಿ.

ಇನ್ನೂ ಬಾಹುಬಲಿ ಸೀಕ್ವೆಲ್‌ನ ನಂತರ ಎರಡನೇ ಸ್ಥಾನದಲ್ಲಿದ್ದಿದ್ದು, ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾಗಳು. ಪುಷ್ಪ ಪಾರ್ಟ್​​-1 ಚಿತ್ರ 390 ಕೋಟಿ ಕಲೆಕ್ಷನ್ ಮಾಡಿದ್ರೆ, ಪುಷ್ಪ ಪಾರ್ಟ್​-2 ಸಿನಿಮಾ 1800 ಕೋಟಿ ಕಲೆಕ್ಷನ್​ ಮಾಡಿತ್ತು. ಎರಡು ಪಾರ್ಟ್​​ನ ಪುಷ್ಪ ಒಟ್ಟು ಕಲೆಕ್ಷನ್ 2190 ಕೋಟಿ.

ಕೆಜಿಎಫ್​ ರೆಕಾರ್ಡ್​ ಕೋಟೆಗೂ ಖನ್ನ ಹಾಕಿದ ಧುರಂದರ್

ಇನ್ನು ನಮ್ಮ ಕನ್ನಡದ ಕೆಜಿಎಫ್​ ಸೀರಿಸ್, ಈ ಸಿನಿಮಾ ಮೊದಲ ಭಾಗ ಗಳಿಸಿದ್ದು, 250 ಕೋಟಿ ಅಷ್ಟೆ. ಆದ್ರೆ ಕೆಜಿಎಫ್ ಚಾಪ್ಟರ್​2 ಸಿನಿಮಾದಿಂದ ಬಂದಿದ್ದು 1250 ಕೋಟಿ. ಅಲ್ಲಿಗೆ ಎರಡು ಪಾರ್ಟ್‌ನಿಂದ 1500 ಕೋಟಿ ಕಲೆಕ್ಷನ್ ಮಾಡಿತ್ತು ಯಶ್​ ಸಿನಿಮಾ.

ರಡು ಪಾರ್ಟ್‌ನಿಂದ ಧುರಂಧರ್​​ ಗಳಿಸಿದ್ದು 2,700 ಕೋಟಿ..!

ಹೌದು, ಇಂದು ಧುರಂಧರ್​​ ಸಿನಿಮಾ ಬಾಕ್ಸಾಫೀಸ್​ ಕಲೆಕ್ಷನ್ ಬಗ್ಗೆ ಇಡೀ ಪ್ರಪಂಚವೇ ಮಾತಾಡುತ್ತಿದೆ. ಈ ಸಿನಿಮಾ ಎರಡು ಪಾರ್ಟ್‌ನಲ್ಲಿ ಬಂದ ಈ ಸಿನಿಮಾದ ಮೊದಲ ಭಾಗ 1,350 ಕೋಟಿ ಗಳಿಸಿತ್ತು. ಈಗ ಧುರಂಧರ್​-2 ಕೇವಲ 12 ದಿನದಲ್ಲಿ 1350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಎರಡು ಚಾಪ್ಟರ್‌ನಿಂದ ಸಿಕ್ಕಿದ್ದು ಒಟ್ಟು 2,700 ಕೋಟಿಗೂ ಹೆಚ್ಚು ಹಣ. ಹೀಗಾಗಿ ಧುರುಂಧರ್ ಈ ಹಿಂದೆ ಯಾರೆಲ್ಲಾ ಪಾರ್ಟ್​2 ಮಾಡಿ ಬಾಕ್ಸಾಫೀಸ್​​ ರೆಕಾರ್ಡ್​​ ಬುಕ್ ಸೇರಿದ್ರೋ ಅವರೆಲ್ಲರ ದಾಖಲೆಗಳು ಕಣ್ಮರೆ ಆಗೋ ಹಾಗೆ ಮಾಡಿದೆ. ಧುರಂಧರ್​ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಮುನ್ನುಗ್ಗುತ್ತಲೇ ಇದೆ.



Source link

Leave a Reply

Your email address will not be published. Required fields are marked *