ಹೆಣ ಹೊರುವುದೇ ಮಕ್ಕಳಿಗೆ ಆಟ: ಗಾಜಾದ ಭೀಕರ ಚಿತ್ರಣ ತೆರೆದಿಟ್ಟ ಪುಟಾಣಿಗಳ ಎದೆ ಝಲ್ಲೆವ ವಿಡಿಯೋ | Children From Gaza Turned Their Toy Into A Martyr This Is The Childhood Of Children Suc

ಹೆಣ ಹೊರುವುದೇ ಮಕ್ಕಳಿಗೆ ಆಟ: ಗಾಜಾದ ಭೀಕರ ಚಿತ್ರಣ ತೆರೆದಿಟ್ಟ ಪುಟಾಣಿಗಳ ಎದೆ ಝಲ್ಲೆವ ವಿಡಿಯೋ | Children From Gaza Turned Their Toy Into A Martyr This Is The Childhood Of Children Suc



ಹೆಣ ಹೊರುವುದೇ ಮಕ್ಕಳಿಗೆ ಆಟ: ಗಾಜಾದ ಭೀಕರ ಚಿತ್ರಣ ತೆರೆದಿಟ್ಟ ಪುಟಾಣಿಗಳ ಎದೆ ಝಲ್ಲೆವ ವಿಡಿಯೋ | Children From Gaza Turned Their Toy Into A Martyr This Is The Childhood Of Children Suc

ಮೂರು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್-ಗಾಜಾ ಯುದ್ಧವು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹುಟ್ಟಿನಿಂದಲೇ ಹಿಂಸೆ ಮತ್ತು ಸಾವನ್ನು ನೋಡುತ್ತಿರುವ ಈ ಮಕ್ಕಳಿಗೆ, ಯುದ್ಧವೇ ಸಾಮಾನ್ಯ ಜೀವನವಾಗಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ, ಮಕ್ಕಳು ಗೊಂಬೆಯನ್ನು ಹೆಣದಂತೆ ಹೊತ್ತು ಸಾಗಿಸುವ ಆಟವಾಡುತ್ತಿರುವುದು ಯುದ್ಧದ ಕರಾಳತೆಯನ್ನು ಮತ್ತು ಕಳೆದುಹೋದ ಮುಗ್ಧತೆಯನ್ನು ತೋರಿಸುತ್ತದೆ.

ಇಸ್ರೇಲ್​ ಮತ್ತು ಗಾಜಾ ನಡುವೆ ನಡೆಯುತ್ತಿರುವ ಯುದ್ಧ ಮೂರು ವರ್ಷಗಳನ್ನು ಮೀರಿಬಿಟ್ಟಿದೆ. ಅಕ್ಟೋಬರ್ 7, 2023 ರಂದು ಹಮಾಸ್‌ನ ಭೂ, ಸಮುದ್ರ ಮತ್ತು ವಾಯು ದಾಳಿಯೊಂದಿಗೆ ಯುದ್ಧ ಪ್ರಾರಂಭವಾಗಿತ್ತು. ಹಮಾಸ್ ಅನ್ನು ನಾಶಮಾಡಲು ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ನಡೆಸುತ್ತಿರುವ ಈ ಕಾರ್ಯಾಚರಣೆಯಲ್ಲಿ ಸಾವಿರಾರು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ ಸುಮಾರು 2 ಸಾವಿರ ಇಸ್ರೇಲಿಗಳು ಮೃತಪಟ್ಟಿದ್ದಾರೆ. ಗಾಜಾ ಪಟ್ಟಿಯಲ್ಲಿ ಮೂಲಸೌಕರ್ಯಗಳು, ಆಸ್ಪತ್ರೆಗಳು ಮತ್ತು ಮನೆಗಳು ವ್ಯಾಪಕವಾಗಿ ನಾಶವಾಗಿವೆ, ತೀವ್ರ ಹಸಿವು ಮತ್ತು ರೋಗಗಳ ಭೀತಿ ಹೆಚ್ಚಾಗಿದೆ. ಅಕ್ಟೋಬರ್ 2025 ರಲ್ಲಿ ತಾತ್ಕಾಲಿಕ ಕದನ ವಿರಾಮ ಒಪ್ಪಂದಗಳು ನಡೆದಿವೆ, ಆದರೆ ಸಂಘರ್ಷ ಪೂರ್ಣವಾಗಿ ಅಂತ್ಯಗೊಂಡಿಲ್ಲ.

ಹುಟ್ಟುತ್ತಲೇ ಯುದ್ಧ

ಈ ಯುದ್ಧದ ನಡುವೆಯೇ, ಅದೆಷ್ಟೋ ಪುಟಾಣಿಗಳ ಜನನವಾಗಿದೆ. ಈ ಮಕ್ಕಳು ಹುಟ್ಟುತ್ತಲೇ ಎಲ್ಲೆಡೆ ಢಂ ಢಂ ಸದ್ದು ಕೇಳಿದವರು. ಈ ಜಗತ್ತು ಇರುವುದೇ ಹೀಗೆ ಎಂದು ತಿಳಿದುಕೊಂಡಿರುವ ಮಕ್ಕಳು ಇವರು. ಯುದ್ಧದ ಕರಾಳ ಮುಖ ಅವರಿಗೆ ಗೊತ್ತೇ ಇಲ್ಲ, ಏಕೆಂದರೆ ಶಾಂತ ವಾತಾವರಣ ಎಂದರೇನು ಎನ್ನುವುದು ಇವರಿಗೆ ತಿಳಿದಿಲ್ಲ. ಹುಟ್ಟುತ್ತಲೇ ಅಕ್ಕ ಪಕ್ಕ ಹೆಣದ ರಾಶಿಗಳನ್ನು ನೋಡಿದವರು. ಹೆಣಗಳನ್ನು ಹೊತ್ತು ಸಾಗುವವರನ್ನು ನೋಡಿದ ಈ ಮಕ್ಕಳಿಗೆ ಜೀವನವೇ ಹೀಗೆ, ಈ ಜಗತ್ತೇ ಹೀಗೆ, ಸಾಮಾನ್ಯ ಜನಜೀವನವೇ ಇದು ಎನ್ನಿಸಿಬಿಟ್ಟಿದೆ.

ಗೊಂಬೆಯ ಜೊತೆ ನಂಟು

ಬಾಲ್ಯದಲ್ಲಿ ಮಕ್ಕಳು ಏನೇ ನೋಡಿದರೂ ಅದನ್ನೇ ಅನುಸರಿಸುತ್ತಾರೆ. ದೇಶ, ಭಾಷೆ ಏನೇ ಆದರೂ ಎಲ್ಲ ಪುಟಾಣಿಗಳಿಗೂ ಗೊಂಬೆ ಎಂದರೆ ಪ್ರೀತಿ. ಗೊಂಬೆಯ ಜೊತೆ ಅವರು ನಡೆಸುವಷ್ಟು ಸಂವಹನ ಬೇರೆ ಯಾರ ಜೊತೆಯೂ ನಡೆಸುವುದಿಲ್ಲ. ಅದರಲ್ಲಿಯೂ ಹೆಣ್ಣುಮಕ್ಕಳಿಗಂತೂ ಗೊಂಬೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಈ ಮಕ್ಕಳು ತಮ್ಮ ಅಮ್ಮ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಹಾಲು ಕುಡಿಸುವುದು, ಅದಕ್ಕೆ ಬಟ್ಟೆ ಹಾಕಿ ಶೃಂಗಾರ ಮಾಡುವುದು, ಮಗುವನ್ನು ಪ್ರೀತಿಯಿಂದ ಅಪ್ಪ-ಅಮ್ಮ ಗದರುವುದು… ಇವುಗಳನ್ನೇ ನೋಡಿ ಬೆಳೆಯುವ ಕಾರಣ, ಗೊಂಬೆಗಳ ಜೊತೆಯಲ್ಲಿಯೂ ಆ ಪುಟಾಣಿಗಳು ಅದನ್ನೇ ಮಾಡುತ್ತವೆ. ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಹೆಂಗಸರ ಮಕ್ಕಳು, ಗೊಂಬೆಯ ಜೊತೆ, ಮನೆ ನಿರ್ಮಾಣ ಕಾರ್ಯವನ್ನು ಮಾಡುವಂತೆಯೇ ಆಟವಾಡುತ್ತಿರುವುದನ್ನು ನೋಡಿರಬಹುದು.

ಹೆಣ ಹೊರುವುದೇ ಆಟ

ಹೀಗೆ ಅಪ್ಪ-ಅಮ್ಮ, ನಮ್ಮ ಸುತ್ತಲೂ ಏನು ಆಗುತ್ತದೆಯೋ ಅದನ್ನೇ ಮಕ್ಕಳು ಮಾಡುತ್ತಾರೆ. ಆದರೆ, ಇಲ್ಲೊಂದು ಗಾಜಾದ ವಿಡಿಯೋ ವೈರಲ್​ ಆಗಿದ್ದು, ಇದು ಶಾಕಿಂಗ್​ ಜೊತೆ ಹೃದಯವನ್ನು ಚೂರು ಚೂರು ಮಾಡುವಂಥದ್ದಾಗಿದೆ. ಮೊದಲೇ ಹೇಳಿದಂತೆ ಈ ಪುಟಾಣಿಗಳು ಹುಟ್ಟುತ್ತಲೇ ಹೆಣವನ್ನು ಸಾಗಿಸುವ ಜೀವನವನ್ನೇ ಕಂಡವರು. ಅದೇ ಕಾರಣಕ್ಕೆ ಒಂದು ಗೊಂಬೆಯನ್ನು ಹೆಣದ ರೀತಿಯಲ್ಲಿ ಹೊತ್ತುಕೊಂಡು ಅದನ್ನು ಸಾಗಿಸುವುದನ್ನೇ ಆಟ ಮಾಡಿಕೊಂಡಿದ್ದಾರೆ. ಆ ಗೊಂಬೆಯನ್ನು ಎತ್ತಿಕೊಂಡು ನಡೆಯಲು ಸಾಧ್ಯವಾಗದೇ ಹೋದಾಗ, ಅದನ್ನು ಕೈಯಲ್ಲಿ ಹಾಗೆಯೇ ಹಿಡಿದುಕೊಂಡು ಹೆಣದ ರೀತಿ ಸಾಗಿಸುತ್ತಿರುವ ಮನಕಲಕುವ ವಿಡಿಯೋ ವೈರಲ್​ ಆಗಿದೆ. ಯುದ್ಧ ಎನ್ನುವುದು ಮನುಷ್ಯರನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತಿದೆ ಎಂದು ಸಾರುವ ವಿಡಿಯೋ ಇದಾಗಿದೆ. ghaith_of_gaza Instagramನಲ್ಲಿ ಈ ಭಯಾನಕ ಚಿತ್ರಣ ಶೇರ್​ ಮಾಡಲಾಗಿದೆ.



Source link

Leave a Reply

Your email address will not be published. Required fields are marked *