ಪಶ್ಚಿಮ ಏಷ್ಯಾದಿಂದ ಶುಭಸುದ್ದಿ: ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

ಪಶ್ಚಿಮ ಏಷ್ಯಾದಿಂದ ಶುಭಸುದ್ದಿ: ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

ಪಶ್ಚಿಮ ಏಷ್ಯಾದಿಂದ ಶುಭಸುದ್ದಿ: ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

Iran Sends Crude Oil to India After 7 Years Amid Middle East War ಯುದ್ಧದ ಉದ್ವಿಗ್ನತೆಯ ನಡುವೆಯೂ, ಇರಾನ್ ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತ ಹಡಗನ್ನು ಕಳುಹಿಸಿದೆ. ‘ಪಿಂಗ್ ಶುನ್’ ಹೆಸರಿನ ಈ ಹಡಗು ಸುಮಾರು 5 ಲಕ್ಷ ಬ್ಯಾರಲ್ ತೈಲವನ್ನು ತರುತ್ತಿದೆ.

ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಭೀಕರ ಯುದ್ಧದಲ್ಲಿ ಇರಾನ್ ತೊಡಗಿಸಿಕೊಂಡಿದ್ದರೂ ಸಹ, ತನ್ನ ಮಿತ್ರ ರಾಷ್ಟ್ರ ಭಾರತಕ್ಕೆ ಕಚ್ಚಾ ತೈಲ ಪೂರೈಸುವ ಮೂಲಕ ದೊಡ್ಡ ಮಟ್ಟದ ಸಹಾಯ ಮಾಡಿದೆ. ಮಧ್ಯ ಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಭಾರತ ಎದುರಿಸುತ್ತಿದ್ದ ಇಂಧನ ಆತಂಕಕ್ಕೆ ಈಗ ಅಲ್ಪವಿರಾಮ ಬೀಳುವ ಲಕ್ಷಣ ಕಾಣಿಸುತ್ತಿದೆ.

ಯುದ್ಧದ ಹಿನ್ನೆಲೆಯಲ್ಲಿ ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತೈಲ ಸಾಗಣೆಗೆ ಬಂದ್ ಮಾಡಿದೆ. ಇದರಿಂದಾಗಿ ಜಗತ್ತಿನಾದ್ಯಂತ ತೈಲದ ಕೊರತೆ ಉಂಟಾಗಿದ್ದು, ಭಾರತದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿತ್ತು. ಅನೇಕ ಕಡೆ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟ ಉಂಟಾಗಿತ್ತು.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಬರೋಬ್ಬರಿ ಏಳು ವರ್ಷಗಳ ಸುದೀರ್ಘ ಅವಧಿಯ ನಂತರ ಇರಾನ್‌ನಿಂದ ಭಾರತಕ್ಕೆ ಕಚ್ಚಾ ತೈಲದ ಹಡಗು ಆಗಮಿಸುತ್ತಿದೆ. ಶಿಪ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ಪರ್ಷಿಯನ್ ಕೊಲ್ಲಿಯಿಂದ ಈ ಹಡಗು ಭಾರತದತ್ತ ಪ್ರಯಾಣ ಬೆಳೆಸಿದೆ.

’ಪಿಂಗ್ ಶುನ್’ (Ping Shun) ಹೆಸರಿನ ಬೃಹತ್ ತೈಲ ಹಡಗು ಇರಾನ್‌ನಿಂದ ಹೊರಟಿದ್ದು, ಈಗಾಗಲೇ ಸಿಗ್ನಲ್‌ಗಳನ್ನು ನೀಡಲು ಆರಂಭಿಸಿದೆ. ಈ ವಾರದ ಅಂತ್ಯದೊಳಗೆ ಈ ಹಡಗು ಭಾರತದ ಬಂದರನ್ನು ತಲುಪುವ ಸಾಧ್ಯತೆಯಿದೆ.

ಈ ಹಡಗಿನಲ್ಲಿ ಸುಮಾರು 5 ಲಕ್ಷ ಬ್ಯಾರಲ್ ಕಚ್ಚಾ ತೈಲವಿದೆ ಎಂದು ವರದಿಯಾಗಿದೆ. ಮಾರ್ಚ್ ಆರಂಭದಲ್ಲಿ ಇರಾನ್‌ನ ‘ಖಾರ್ಗ್ ಐಲ್ಯಾಂಡ್’ನಿಂದ ಈ ಹಡಗು ತೈಲವನ್ನು ಭರ್ತಿ ಮಾಡಿಕೊಂಡಿದ್ದು, ಪ್ರಸ್ತುತ ಭಾರತದ ಕರಾವಳಿಯತ್ತ ಸಾಗುತ್ತಿದೆ.

ಈ ಹಡಗು ಭಾರತಕ್ಕೆ ತಲುಪಿದರೆ ದೇಶದಲ್ಲಿನ ಇಂಧನ ಕೊರತೆ ನೀಗಲು ಮತ್ತು ಗಗನಕ್ಕೇರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಸಹಾಯವಾಗಲಿದೆ. ಸದ್ಯಕ್ಕೆ ಹಡಗಿನ ನಿಖರವಾದ ಡೆಸ್ಟಿನೇಶನ್ (ಅಂತಿಮ ನಿಲ್ದಾಣ) ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಅದು ಭಾರತದತ್ತಲೇ ಬರುತ್ತಿರುವುದು ದೃಢಪಟ್ಟಿದೆ.

Source link

Leave a Reply

Your email address will not be published. Required fields are marked *