
ಆದಿತ್ಯ ಧರ್ ನಿರ್ದೇಶಿಸಿ, ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ 2’ (ಧುರಂಧರ 2) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ದೇಶ, ವಿದೇಶಗಳಲ್ಲಿ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನ ಘಟಾನುಘಟಿ ನಟರಾದ ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರು ನಟಿಸಿದ್ದು, ನಾಯಕನಷ್ಟೆ ಮಹತ್ವದ ಪಾತ್ರಗಳು ಇವರದ್ದಾಗಿವೆ. ಆದರೆ, ಮಾಧವನ್ ಅವರ ಹೊರತಾಗಿ ಮೂರೂ ಮಂದಿ ಪ್ರಮುಖ ನಟರು ಸಹ ‘ಧುರಂಧರ’ ಸಿನಿಮಾದಲ್ಲಿ ನಟಿಸಲು ಒಪ್ಪಲಿಲ್ಲ. ಈ ಬಗ್ಗೆ ಸಿನಿಮಾದ ಕಾಸ್ಟಿಂಗ್ ನಿರ್ದೇಶಕ ಸಂದರ್ಶನದಲ್ಲಿ ಹೇಳಿದ್ದಾರೆ.
‘ಧುರಂಧರ’ ಮತ್ತು ‘ಧುರಂಧರ 2’ ಸಿನಿಮಾಕ್ಕೆ ನಟರನ್ನು ಆಯ್ಕೆ ಮಾಡಿರುವುದು ಬಾಲಿವುಡ್ ನ ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಛಾಬ್ರಾ. ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಚಿತ್ರಕಥೆಯನ್ನು ಕೇಳಿದ ಕೂಡಲೇ ಮುಲಾಜಿಲ್ಲದೆ ನಟಿಸಲು ಒಪ್ಪಿಕೊಂಡ ಏಕೈಕ ನಟ ಆರ್ ಮಾಧವನ್, ‘ನಾವು ಕಥೆ ಹೇಳಿದ ತಕ್ಷಣ ಮಾಧವನ್ ಗ್ರೀನ್ ಸಿಗ್ನಲ್. ಆದರೆ ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರು ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಕೊಂಚ ಹಿಂದೇಟು ಹಾಕಿದ್ದರು ಅಥವಾ ಗೊಂದಲದಲ್ಲಿದ್ದರು’ ಎಂದು ಮುಖೇಶ್ ಅವರು ತಿಳಿಸಿದ್ದಾರೆ.
ಈ ದೊಡ್ಡ ತಾರಾಗಣವನ್ನು ಒಟ್ಟುಗೂಡಿಸುವಲ್ಲಿ ಮುಖೇಶ್ ಛಾಬ್ರಾ ಅವರ ಪಾತ್ರ ದೊಡ್ಡದಾಗಿದೆ. ಆರಂಭದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಮುಖೇಶ್ ಅವರು ಬೇರೆ ರೀತಿಯ ನಟರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಆದರೆ ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ, ಧೈರ್ಯ ದೊಡ್ಡ ತಾರೆಯರನ್ನೇ ಸಿನಿಮಾಕ್ಕೆ ಕರೆತರಬೇಕು ಎಂದು ಮುಕೇಶ್ ಅವರು ಆದಿತ್ಯ ಧರ್ ಅವರಿಗೆ ತುಂಬಿದರಂತೆ. ಹಾಗೂ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಸಹ ತಾವೇ ಧೈರ್ಯ ನೀಡಿದ್ದಾಗಿಯೂ ಅವರು ಹೇಳಿದ್ದಾರೆ.
ಇದನ್ನೂ ಓದಿ:’ಧುರಂಧರ 2′ ಬಳಿಕ ಬರ್ತಿದೆ ಏಳುವರೆ ಗಂಟೆ ಸಿನಿಮಾ; ಎರಡು ಇಂಟರ್ವಲ್
ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರು ಒಪ್ಪಿಕೊಳ್ಳದೇ ಇರಲು ಹಾಗೂ ಮಾಧವನ್ ಅವರು ಬೇಗನೆ ಒಪ್ಪಿಕೊಳ್ಳಲು ಕಾರಣವೂ ಇದೆ. ಅಕ್ಷಯ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರದ್ದು ಪಾಕಿಸ್ತಾನಿಗಳ ಪಾತ್ರ, ಅದರಲ್ಲಿ ಅಕ್ಷಯ್ ಕುಮಾರ್ ಮತ್ತು ಅರ್ಜುನ್ ರಾಂಪಾಲ್ ಅವರದ್ದಂತೂ ಉಗ್ರವಾದಿ ನಾಯಕರ ಪಾತ್ರ. ಸಹಜವಾಗಿಯೇ ಅವರು ಆರಂಭದಲ್ಲಿ ಒಲ್ಲೆ. ಆದರೆ ಮಾಧವನ್ ಅವರದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರ, ಗೌರವ ಹೊಂದಿರುವ, ಹೀರೋಗಿರಿ ಉಳ್ಳ ಪಾತ್ರ ಇಲ್ಲದಿದ್ದರೂ ಅವರು ಸುಲಭವಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ಸಿನಿಮಾದಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಉಗ್ರರ ಪಾತ್ರವಾದರೂ ಸಹ ಪ್ರದರ್ಶಿಸು ಅಕ್ಷಯ್ ಖನ್ನಾ ಪಾತ್ರವನ್ನೂ ಸಹ ಸೆಲೆಬ್ರೇಟ್ ಮಾಡಿದ್ದಾರೆ, ಮೆಚ್ಚಿದ್ದಾರೆ. ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಹೇಳುವಂತೆ, ‘ಧುರಂಧರ’ ಒಂದು ನಿಖರವಾದ ಕಾಸ್ಟಿಂಗ್ ಆಗಿರುವ ಸಿನಿಮಾ ಅಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ