
ಐಪಿಎಲ್ 19 (IPL 2026) ನೇ ಸೀಸನ್ ನ ಮೊದಲ ಹಂತದ ಐದನೇ ಮತ್ತು ಕೊನೆಯ ಪಂದ್ಯ ಇಂದು ಬುಧವಾರ, ಏಪ್ರಿಲ್ 1 ರಂದು. ಈ ಸೀಸನ್ ಐದನೇ ಶೋ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (LSG vs DC) ಎದುರಿಸುತ್ತಿದೆ. ಎರಡೂ ತಂಡಗಳಿಗೆ ಇದು ಈ ಸೀಸನ್ ಮೊದಲ ಪಂದ್ಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಪಂದ್ಯವನ್ನು ಗೆದ್ದು ಸೀಸನ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸಲು ಪ್ರಯತ್ನಿಸುತ್ತವೆ. ಯಾವ ತಂಡವು ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಟಾಸ್ ಗೆದ್ದ ಡೆಲ್ಲಿ
ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡು ತಂಡಗಳು ಆಡುವ ಹನ್ನೊಂದರ ಬಳಗವೂ ಪ್ರಕಟವಾಗಿದೆ. ಡೆಲ್ಲಿ ತಂಡದ ಆರಂಭಿಕರು ಬದಲಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಜೊತೆಗೆ ಪಾತುಮ್ ನಿಸ್ಸಾಂಕ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಹೆಡ್ ಟು ಹೆಡ್ ದಾಖಲೆ
ಐಪಿಎಲ್ ಇತಿಹಾಸದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ ಏಳು ಪಂದ್ಯಗಳನ್ನು ಆಡಿವೆ. ಇವುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಮೂರು ಪಂದ್ಯಗಳನ್ನು ಗೆದ್ದಿದೆ. ಅಂದರೆ ಎರಡೂ ತಂಡಗಳು ಸಮಬಲದ ಹೋರಾಟದ ನೀಡಿವೆ. ಕಳೆದ ಸೀಸನ್‌ನಲ್ಲಿ ಎರಡು ಪಂದ್ಯಗಳನ್ನು ಗೆದ್ದಿದೆ, ಡೆಲ್ಲಿ ಎರಡೂ ಪಂದ್ಯಗಳನ್ನು ಹೊಂದಿದೆ. 2024 ರ ಸೀಸನ್‌ನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ಎರಡೂ ಪಂದ್ಯಗಳನ್ನು ಗೆದ್ದಿತ್ತು. ಅಂದರೆ, ಲಕ್ನೋ ಸೂಪರ್ ಜೈಂಟ್ಸ್ ಕೊನೆಯದಾಗಿ 2023 ರ ಐಪಿಎಲ್‌ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು.
ಟಾಸ್
@ದೆಹಲಿ ರಾಜಧಾನಿಗಳು ವಿರುದ್ಧ ಟಾಸ್ ಗೆದ್ದರು @ಲಕ್ನೋವಿಪ್ಲ್ ಮತ್ತು ಮೊದಲು ಕ್ಷೇತ್ರರಕ್ಷಣೆ ಮಾಡುತ್ತಾರೆ
ನವೀಕರಣಗಳು
https://t.co/lfP7dRNKfg#TATAIPL | #ಖೇಲ್ ಬಿಂದಾಸ್ | #LSGvDC pic.twitter.com/IPtki9qcHm
— ಇಂಡಿಯನ್ ಪ್ರೀಮಿಯರ್ ಲೀಗ್ (@IPL) ಏಪ್ರಿಲ್ 1, 2026
ಉಭಯ ತಂಡಗಳ ಆಟ 11
ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ವಿಪ್ರಜ್ ನಿಗಮ್, ಅಕ್ಸರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ.ನಟರಾಜನ್ ಮತ್ತು ಮುಖೇಶ್ ಕುಮಾರ್.
ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮೈಕೆಲ್ ಮಾರ್ಷ್, ರಿಷಭ್ ಪಂತ್(ನಾಯಕ ಮತ್ತು ವಿಕೆಟ್ ಕೀಪರ್), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ, ಅನ್ರಿಚ್ ನೋಕಿಯಾ ಮತ್ತು ಪ್ರಿನ್ಸ್ ಯಾದವ್.
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟಾಸ್
https://t.co/lfP7dRNKfg