Headlines

ಏರ್ಪೋರ್ಟ್‌ ಲಾಂಜ್‌ಗೆ ವೀಲ್‌ಚೇರಿನಲ್ಲಿ ಬಂದ ಮಹಿಳೆ, ಊಟಕ್ಕೆ ಹೈ-ಹೀಲ್ಸ್‌ ಧರಿಸಿ ಓಡಿಕೊಂಡು ಹೋದರು; ಪೋಸ್ಟ್ ವೈರಲ್! | Bengaluru Kempe Gowda International Airport Wheelchair Misuse Debate Sumit Ramani Viral Post Sat

ಏರ್ಪೋರ್ಟ್‌ ಲಾಂಜ್‌ಗೆ ವೀಲ್‌ಚೇರಿನಲ್ಲಿ ಬಂದ ಮಹಿಳೆ, ಊಟಕ್ಕೆ ಹೈ-ಹೀಲ್ಸ್‌ ಧರಿಸಿ ಓಡಿಕೊಂಡು ಹೋದರು; ಪೋಸ್ಟ್ ವೈರಲ್! | Bengaluru Kempe Gowda International Airport Wheelchair Misuse Debate Sumit Ramani Viral Post Sat



ಏರ್ಪೋರ್ಟ್‌ ಲಾಂಜ್‌ಗೆ ವೀಲ್‌ಚೇರಿನಲ್ಲಿ ಬಂದ ಮಹಿಳೆ, ಊಟಕ್ಕೆ ಹೈ-ಹೀಲ್ಸ್‌ ಧರಿಸಿ ಓಡಿಕೊಂಡು ಹೋದರು; ಪೋಸ್ಟ್ ವೈರಲ್! | Bengaluru Kempe Gowda International Airport Wheelchair Misuse Debate Sumit Ramani Viral Post Sat

ಬೆಂಗಳೂರಿನ ಸುಮಿತ್ ರಮಣಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್ ಬಳಸಿದ ಮಹಿಳೆ ನಂತರ ಹೈ ಹೀಲ್ಸ್ ಧರಿಸಿ ನಡೆದಾಡಿದ್ದು, ಇದು ಸೌಲಭ್ಯದ ದುರುಪಯೋಗವೇ ಅಥವಾ ‘ಗುಪ್ತ ಅಂಗವೈಕಲ್ಯ’ದ ಪ್ರಕರಣವೇ ಎಂಬ ವಾದ-ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು (ಏ.01): ವಿಮಾನ ನಿಲ್ದಾಣಗಳಲ್ಲಿ ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಅಥವಾ ಅನಾರೋಗ್ಯ ಪೀಡಿತರಿಗೆ ನೀಡಲಾಗುವ ವೀಲ್‌ಚೇರ್ (Wheelchair) ಸೌಲಭ್ಯವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಬೆಂಗಳೂರು ಮೂಲದ ‘ಪ್ರೊಟೆಕ್ಟ್ ಮೀ ವೆಲ್’ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಸುಮಿತ್ ರಮಣಿ ಅವರು ಹಂಚಿಕೊಂಡಿರುವ ಒಂದು ಪೋಸ್ಟ್, ಈ ಸೌಲಭ್ಯವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ನಡೆದಿದ್ದೇನು? ಸುಮಿತ್ ರಮಣಿ ಅವರ ಪೋಸ್ಟ್‌ನಲ್ಲಿ ಏನಿದೆ?

ಸುಮಿತ್ ರಮಣಿ ಅವರು ಇತ್ತೀಚೆಗೆ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಕುಳಿತಿದ್ದಾಗ ಕಂಡ ಒಂದು ವಿಚಿತ್ರ ಸನ್ನಿವೇಶವನ್ನು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಏರ್‌ಪೋರ್ಟ್ ಲಾಂಜ್‌ನಲ್ಲಿ ಕುಳಿತಿದ್ದಾಗ, ಸುಮಾರು 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ಏರ್‌ಲೈನ್ಸ್ ಸಿಬ್ಬಂದಿಯ ಸಹಾಯದೊಂದಿಗೆ ವೀಲ್‌ಚೇರ್‌ನಲ್ಲಿ ಲಾಂಜ್ ಒಳಗಡೆ ಬಂದರು. ಆದರೆ, ಲಾಂಜ್ ಒಳಗೆ ಪ್ರವೇಶಿಸಿದ ಕ್ಷಣವೇ ಅವರು ವೀಲ್‌ಚೇರ್‌ನಿಂದ ಬಹಳ ಸುಲಭವಾಗಿ ಎದ್ದು ನಿಂತರು. ನಂತರ ಅವರು ತಮ್ಮ ಹೈ ಹೀಲ್ಸ್ (High Heels) ಚಪ್ಪಲಿಗಳನ್ನು ಧರಿಸಿಕೊಂಡು ಸಲೀಸಾಗಿ ನಡೆದು ಹೋಗಿ, ತಟ್ಟೆ ತುಂಬಾ ಊಟವನ್ನು ತುಂಬಿಸಿಕೊಂಡು ಮರಳಿ ಬಂದರು’ ಎಂದು ಸುಮಿತ್ ವಿವರಿಸಿದ್ದಾರೆ.

ಸುಮಿತ್ ಅವರು ತಮ್ಮ ಪೋಸ್ಟ್‌ನಲ್ಲಿ ಮುಂದುವರಿದು, ‘ನಾನು ಯಾರನ್ನೂ ಜಡ್ಜ್ (Judge) ಮಾಡಲು ಹೋಗುವುದಿಲ್ಲ, ಆದರೆ ಆ ಮಹಿಳೆಗೆ ನಡೆಯಲು ಹೆಚ್ಚು ಕಷ್ಟವಿದ್ದಂತೆ ಕಾಣಲಿಲ್ಲ’ ಎಂದು ಹೇಳಿದ್ದಾರೆ. ಇದು ಕೇವಲ ಒಂದು ಘಟನೆಯಲ್ಲ, ಬದಲಾಗಿ ವಿಮಾನ ನಿಲ್ದಾಣಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ ಎಂಬುದು ಸುಮಿತ್ ಅವರ ಪೋಸ್ಟ್‌ನ ಸಾರಾಂಶವಾಗಿತ್ತು.

Scroll to load tweet…

ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ:

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಎರಡು ಗುಂಪುಗಳಾಗಿ ಚರ್ಚೆ ನಡೆಸುತ್ತಿದ್ದಾರೆ. ಒಂದು ಗುಂಪಿನ ಪ್ರಕಾರ, ‘ಭಾರತೀಯರಲ್ಲಿ ‘ಉಚಿತವಾಗಿ’ ಸಿಗುವ ಯಾವುದನ್ನೂ ಬಿಡಬಾರದು ಎಂಬ ಮನೋಭಾವವಿದೆ. ಏರ್‌ಪೋರ್ಟ್‌ಗಳು ಬಹಳ ವಿಸ್ತಾರವಾಗಿರುವುದರಿಂದ ನಡೆಯಲು ಸೋಮಾರಿತನ ಪಟ್ಟು ವೀಲ್‌ಚೇರ್ ಬುಕ್ ಮಾಡುತ್ತಾರೆ. ಇದರಿಂದ ನಿಜವಾಗಿಯೂ ನಡೆಯಲು ಸಾಧ್ಯವಾಗದವರಿಗೆ ಸೌಲಭ್ಯ ಸಿಗದೆ ತೊಂದರೆಯಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ವರ್ಗದ ಜನರು ‘ಎಲ್ಲಾ ಅನಾರೋಗ್ಯವೂ ಕಣ್ಣಿಗೆ ಕಾಣಿಸುವುದಿಲ್ಲ (Hidden Disabilities)’ ಎಂದು ವಾದಿಸಿದ್ದಾರೆ. ‘ಕೆಲವರಿಗೆ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಸಮಸ್ಯೆ ಅಥವಾ ತೀವ್ರ ಬೆನ್ನುನೋವು ಇರುತ್ತದೆ. ಅಂತಹವರು ಏರ್‌ಪೋರ್ಟ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ನಡೆಯಲು ಸಾಧ್ಯವಾಗುವುದಿಲ್ಲ. ಆದರೆ 10-15 ಹೆಜ್ಜೆಗಳನ್ನು ಲಾಂಜ್ ಒಳಗೆ ಆರಾಮವಾಗಿ ನಡೆಯಬಲ್ಲರು. ಹಾಗಂದ ಮಾತ್ರಕ್ಕೆ ಅವರು ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರ್ಥವಲ್ಲ’ ಎಂದು ಈ ಸೌಲಭ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ನಿಜವಾದ ಅರ್ಹರಿಗೆ ತೊಂದರೆಯಾಗುತ್ತಿದೆಯೇ?

ಏರ್‌ಪೋರ್ಟ್‌ಗಳಲ್ಲಿ ವೀಲ್‌ಚೇರ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ನಿಜವಾಗಿಯೂ ಅಂಗವೈಕಲ್ಯ ಹೊಂದಿದವರಿಗೆ ಅಥವಾ ವೃದ್ಧರಿಗೆ ಸಮಯಕ್ಕೆ ಸರಿಯಾಗಿ ವೀಲ್‌ಚೇರ್ ಮತ್ತು ಸಿಬ್ಬಂದಿ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ, ಏರ್‌ಲೈನ್ಸ್‌ಗಳು ವೀಲ್‌ಚೇರ್ ಬುಕ್ ಮಾಡುವ ಮುನ್ನ ವೈದ್ಯಕೀಯ ದಾಖಲೆಗಳನ್ನು ಅಥವಾ ಅರ್ಹತೆಯನ್ನು ಪರಿಶೀಲಿಸಬೇಕೆ ಎಂಬ ಬೇಡಿಕೆಯೂ ಕೇಳಿಬರುತ್ತಿದೆ.

ಸುಮಿತ್ ರಮಣಿ ಅವರ ಈ ಪೋಸ್ಟ್ ಪ್ರಸ್ತುತ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಸೌಲಭ್ಯಗಳ ಸದ್ಬಳಕೆಯ ಬಗ್ಗೆ ದೊಡ್ಡ ಸಂವಾದವನ್ನೇ ಸೃಷ್ಟಿಸಿದೆ.



Source link

Leave a Reply

Your email address will not be published. Required fields are marked *