ಇರಾನ್‌ ಮುಂದೆ ಮಂಡಿಯೂರಿದ ಅಮೆರಿಕ?: ಶೀಘ್ರದಲ್ಲೇ ಕದನ ವಿರಾಮ, ಸಂಚಲನ ಮೂಡಿಸಿದ ಡೊನಾಲ್ಡ್ ಟ್ರಂಪ್ ಪೋಸ್ಟ್‌ | Iran Us War Ceasefire Donald Trump Truth Social Post Kannada News San

ಇರಾನ್‌ ಮುಂದೆ ಮಂಡಿಯೂರಿದ ಅಮೆರಿಕ?: ಶೀಘ್ರದಲ್ಲೇ ಕದನ ವಿರಾಮ, ಸಂಚಲನ ಮೂಡಿಸಿದ ಡೊನಾಲ್ಡ್ ಟ್ರಂಪ್ ಪೋಸ್ಟ್‌ | Iran Us War Ceasefire Donald Trump Truth Social Post Kannada News San



ಇರಾನ್‌ ಮುಂದೆ ಮಂಡಿಯೂರಿದ ಅಮೆರಿಕ?: ಶೀಘ್ರದಲ್ಲೇ ಕದನ ವಿರಾಮ, ಸಂಚಲನ ಮೂಡಿಸಿದ ಡೊನಾಲ್ಡ್ ಟ್ರಂಪ್ ಪೋಸ್ಟ್‌ | Iran Us War Ceasefire Donald Trump Truth Social Post Kannada News San

ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಇರಾನ್ ಕದನ ವಿರಾಮಕ್ಕಾಗಿ ಯಾಚಿಸುತ್ತಿದೆ ಎಂದು ಹೇಳಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದೊಂದೇ ಕದನ ವಿರಾಮಕ್ಕೆ ಇರುವ ಏಕೈಕ ಷರತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಏ.1): ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಅಮೆರಿಕ ಈ ಯುದ್ಧದಿಂದ ಹಿಂದೆ ಸರಿಯುತ್ತಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ ಎಂದು ಅಮೆರಿಕ ಹಲವು ಬಾರಿ ಹೇಳಿಕೊಂಡಿದ್ದರೂ, ಇರಾನ್ ಮಾತ್ರ ಇದನ್ನು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದೆ. “ಮುಂದಿನ ಆರು ತಿಂಗಳ ಕಾಲ ಯುದ್ಧ ಮುಂದುವರಿದರೂ ನಾವು ಹೋರಾಡಲು ಸಿದ್ಧ” ಎಂದು ಇರಾನ್ ಸಡ್ಡು ಹೊಡೆದಿತ್ತು.

ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಮೂಲಕ 15 ಅಂಶಗಳ ಕಾರ್ಯಕ್ರಮವನ್ನು ಇರಾನ್‌ಗೆ ಕಳುಹಿಸಿ ಕದನ ವಿರಾಮಕ್ಕೆ ಪ್ರಯತ್ನಿಸಿದ್ದರು. ಆದರೆ ಇರಾನ್ ಅದನ್ನು ತಿರಸ್ಕರಿಸಿ ಉಲ್ಟಾ ಅಮೆರಿಕಕ್ಕೇ ಐದು ಕಠಿಣ ಷರತ್ತುಗಳನ್ನು ವಿಧಿಸಿತ್ತು. ಅಮೆರಿಕ ಇನ್ನು ಮುಂದೆ ಎಂದಿಗೂ ನಮ್ಮ ಮೇಲೆ ದಾಳಿ ಮಾಡುವುದಿಲ್ಲ ಎಂಬ ಗ್ಯಾರಂಟಿ ನೀಡಬೇಕು, ತಕ್ಷಣವೇ ಎಲ್ಲಾ ದಾಳಿಗಳನ್ನು ನಿಲ್ಲಿಸಬೇಕು ಮತ್ತು ಯುದ್ಧದಲ್ಲಿ ನಮಗಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂಬುದು ಇರಾನ್ ಆಗ್ರಹವಾಗಿತ್ತು.

ಟ್ರಂಪ್ ಪೋಸ್ಟ್‌ನಲ್ಲಿ ಏನಿದೆ?

ಇದೀಗ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ (Truth Social) ಖಾತೆಯಲ್ಲಿ ಮಾಡಿರುವ ಪೋಸ್ಟ್ ಹೊಸ ಸಂಚಲನ ಸೃಷ್ಟಿಸಿದೆ. ಈ ಪೋಸ್ಟ್‌ನಲ್ಲಿ ಟ್ರಂಪ್ ಅವರು ಇರಾನ್‌ನ ನೂತನ ಅಧ್ಯಕ್ಷರನ್ನು ಹೊಗಳುತ್ತಲೇ, “ಇರಾನ್ ಕದನ ವಿರಾಮಕ್ಕಾಗಿ ಯಾಚಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

“ಇರಾನ್‌ನ ನೂತನ ಅಧ್ಯಕ್ಷರು ಹಿಂದಿನವರಿಗಿಂತ ಕಡಿಮೆ ಹಠಮಾರಿ ಮತ್ತು ಹೆಚ್ಚು ಬುದ್ಧಿವಂತರಾಗಿದ್ದಾರೆ. ಅವರು ಕದನ ವಿರಾಮಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಹೊರ್ಮುಜ್ ಜಲಸಂಧಿ (Strait of Hormuz) ಮಾತ್ರ ಈಗ ಕದನ ವಿರಾಮ ಘೋಷಣೆಗೆ ಇರುವ ಏಕೈಕ ಮಾರ್ಗವಾಗಿದೆ. ಇರಾನ್ ಈ ಮಾರ್ಗವನ್ನು ಮುಕ್ತಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಮಾತ್ರ ಕದನ ವಿರಾಮದ ಒಪ್ಪಂದ ಸಾಧ್ಯ. ಒಂದು ವೇಳೆ ಕದನ ವಿರಾಮ ಸಂಭವಿಸದಿದ್ದರೆ, ನಾವು ಇರಾನ್ ಮೇಲೆ ಬಾಂಬ್ ದಾಳಿಗಳನ್ನು ಮುಂದುವರಿಸುತ್ತೇವೆ ಮತ್ತು ಇರಾನ್ ಅನ್ನು ಶಿಲಾಯುಗಕ್ಕೆ ತಳ್ಳುತ್ತೇವೆ” ಎಂದು ಟ್ರಂಪ್ ಗುಡುಗಿದ್ದಾರೆ.

ಅಮೆರಿಕ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿದೆಯೇ?

ಯುದ್ಧದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮಕ್ಕಾಗಿ ಅನೇಕ ಕಠಿಣ ಷರತ್ತುಗಳನ್ನು ವಿಧಿಸಿದ್ದರು. ಆದರೆ ಅವರ ಇತ್ತೀಚಿನ ಪೋಸ್ಟ್ ಗಮನಿಸಿದರೆ, ಅಮೆರಿಕ ಒಂದು ಹೆಜ್ಜೆ ಹಿಂದೆ ಸರಿದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ಈಗ ಅವರು ಇರಾನ್ ಮುಂದೆ ಇಟ್ಟಿರುವ ಏಕೈಕ ಪ್ರಮುಖ ಷರತ್ತು ಎಂದರೆ ‘ಹೊರ್ಮುಜ್ ಜಲಸಂಧಿ’ಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದು. ಅಮೆರಿಕದ ಈ ಪ್ರಸ್ತಾಪಕ್ಕೆ ಇರಾನ್ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಈಗ ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *