Chiranjeevi ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾ ಮಿಸ್ ಮಾಡಿಕೊಂಡ ಟಬು: ಆ ಸ್ಟಾರ್ ನಟಿಯೇ ಕಾರಣವಾದ್ರಾ? | Rowdy Alludu Movie Tabu Missed Role Divya Bharti Chiranjeevi Gvd

Chiranjeevi ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾ ಮಿಸ್ ಮಾಡಿಕೊಂಡ ಟಬು: ಆ ಸ್ಟಾರ್ ನಟಿಯೇ ಕಾರಣವಾದ್ರಾ? | Rowdy Alludu Movie Tabu Missed Role Divya Bharti Chiranjeevi Gvd



Chiranjeevi ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾ ಮಿಸ್ ಮಾಡಿಕೊಂಡ ಟಬು: ಆ ಸ್ಟಾರ್ ನಟಿಯೇ ಕಾರಣವಾದ್ರಾ? | Rowdy Alludu Movie Tabu Missed Role Divya Bharti Chiranjeevi Gvd

ನಟಿ ಟಬು ಬಾಲಿವುಡ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರೂ, ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗುವ ಅವಕಾಶವನ್ನು ಕಳೆದುಕೊಂಡರು. ಅದ್ರಲ್ಲೂ ಚಿರಂಜೀವಿ ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾವನ್ನು ಮಿಸ್ ಮಾಡಿಕೊಂಡರು.

ಒಂದಾನೊಂದು ಕಾಲದ ಸ್ಟಾರ್ ನಟಿ ಟಬು ತೆಲುಗಿನಲ್ಲಿ ಮಾಡಿದ್ದು ಕೆಲವೇ ಕೆಲವು ಸಿನಿಮಾಗಳು. ನಾಗಾರ್ಜುನ, ವೆಂಕಟೇಶ್, ಬಾಲಕೃಷ್ಣ ಜೊತೆ ನಟಿಸಿದ್ದಾರೆ. ಚಿರಂಜೀವಿ ಜೊತೆ ‘ಅಂದರಿವಾಡು’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ನಾಗ್ ಜೊತೆ ಎರಡು, ಬಾಲಯ್ಯ ಜೊತೆ ಎರಡು ಸಿನಿಮಾ ಮಾಡಿದ್ದಾರೆ. ಆದರೆ ನಾಗಾರ್ಜುನ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ, ಟಬು ತನ್ನ ಬೆಸ್ಟ್ ಫ್ರೆಂಡ್, ಹೈದರಾಬಾದ್‌ಗೆ ಬಂದಾಗಲೆಲ್ಲಾ ಮನೆಗೆ ಬರುತ್ತಾರೆ ಎಂದು ನಾಗಾರ್ಜುನ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದರು.

ಇದೆಲ್ಲದರ ನಡುವೆ, ಟಬು ಚಿರಂಜೀವಿ ಜೊತೆಗಿನ ಒಂದು ಇಂಡಸ್ಟ್ರಿ ಹಿಟ್ ಸಿನಿಮಾವನ್ನು ಕಳೆದುಕೊಂಡರು. ಆ ಸಿನಿಮಾ ಮಾಡಿದ್ದರೆ, ಅವರು ಟಾಲಿವುಡ್‌ನಲ್ಲಿ ಅಪ್ರತಿಮ ಸ್ಟಾರ್ ನಟಿಯಾಗಿ ಬೆಳೆಯುತ್ತಿದ್ದರು. ಬಹುಶಃ ಲೇಡಿ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದರು ಎನ್ನಬಹುದು. ಹಾಗಾದರೆ ಆ ಸಿನಿಮಾ ಯಾವುದು? ಅದಕ್ಕೆ ಕಾರಣವೇನು? ನೋಡೋಣ. ಟಬು ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರ ‘ಕೂಲಿ ನಂ. 1’. ಇದರಲ್ಲಿ ವೆಂಕಟೇಶ್ ಜೊತೆ ನಟಿಸಿದ್ದರು. ನಾಗಾರ್ಜುನ ಜೊತೆಗಿನ ‘ನಿನ್ನೇ ಪೆಳ್ಳಾಡತಾ’ ಚಿತ್ರದ ಮೂಲಕ ಇಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಪಡೆದು, ಹಾಟ್ ಕೇಕ್ ಆಗಿದ್ದರು.

ಆದರೆ, ಟಬು ಆಗಲೇ ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದರು. ಫುಲ್ ಬ್ಯುಸಿಯಾಗಿದ್ದರು. ಹೀಗಾಗಿ ತೆಲುಗಿನಲ್ಲಿ ಅವಕಾಶಗಳು ಬಂದರೂ ಮಾಡಲು ಸಾಧ್ಯವಾಗಲಿಲ್ಲ. ‘ಕೂಲಿ ನಂ. 1’ ಸಮಯದಲ್ಲಿಯೇ ಟಬುಗೆ ಚಿರಂಜೀವಿ ಜೊತೆ ನಟಿಸಲು ಮತ್ತೊಂದು ಆಫರ್ ಬಂದಿತ್ತು. ಕೆ. ರಾಘವೇಂದ್ರ ರಾವ್ ಅವರು ಚಿರಂಜೀವಿ ಜೊತೆ ‘ರೌಡಿ ಅಲ್ಲುಡು’ ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಇದರಲ್ಲಿ ಚಿರಂಜೀವಿ ದ್ವಿಪಾತ್ರದಲ್ಲಿದ್ದರು. ಒಂದು ಪಾತ್ರಕ್ಕೆ ಶೋಭನಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಮತ್ತೊಂದು ಪಾತ್ರಕ್ಕೆ ದಿವ್ಯಾ ಭಾರತಿಯನ್ನು ಅಂದುಕೊಂಡಿದ್ದರು.

ಆದರೆ ದಿವ್ಯಾ ಭಾರತಿ ಡೇಟ್ಸ್ ಹೊಂದಾಣಿಕೆಯಾಗದ ಕಾರಣ, ಟಬು ಅವರನ್ನು ತೆಗೆದುಕೊಳ್ಳಲು ಚಿತ್ರತಂಡ ಯೋಚಿಸಿತ್ತು. ಆದರೆ ಚಿತ್ರತಂಡದ ಗಮನವೆಲ್ಲಾ ದಿವ್ಯಾ ಭಾರತಿ ಮೇಲಿತ್ತು. ಕೊನೆಗೆ ದಿವ್ಯಾ ಭಾರತಿ ಅವರ ಡೇಟ್ಸ್ ಓಕೆ ಆಗಿದ್ದರಿಂದ, ಟಬು ಅವರನ್ನು ಕೈಬಿಡಲಾಯಿತು. ಹೀಗೆ ಚಿರಂಜೀವಿ ಜೊತೆ ಮೊದಲ ಬಾರಿಗೆ ನಟಿಸುವ ಅವಕಾಶವನ್ನು ಟಬು ಕಳೆದುಕೊಂಡರು. ‘ರೌಡಿ ಅಲ್ಲುಡು’ 1991ರಲ್ಲಿ ಬಿಡುಗಡೆಯಾಗಿ ಅಂದಿನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ನಂತರ 2005ರಲ್ಲಿ ‘ಅಂದರಿವಾಡು’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದರು. ಆದರೆ ಅದರಲ್ಲಿ ಟಬು ಅವರದ್ದು ಎರಡನೇ ನಾಯಕಿಯ ಪಾತ್ರವಾಗಿತ್ತು.

ದೊಡ್ಡ ಕೆರಿಯರ್ ಕಳೆದುಕೊಂಡ ಟಬು

ಒಂದು ವೇಳೆ ಟಬು ‘ರೌಡಿ ಅಲ್ಲುಡು’ ಸಿನಿಮಾ ಮಾಡಿದ್ದರೆ, ಅವರು ತೆಲುಗಿನಲ್ಲಿಯೇ ಸೆಟಲ್ ಆಗುತ್ತಿದ್ದರು ಮತ್ತು ಲೇಡಿ ಸೂಪರ್‌ಸ್ಟಾರ್ ಆಗಿ ಬೆಳೆಯುತ್ತಿದ್ದರು ಎನ್ನಬಹುದು. ದಿವ್ಯಾ ಭಾರತಿಯಿಂದಾಗಿ ಟಬು ತೆಲುಗಿನಲ್ಲಿ ದೊಡ್ಡ ಕೆರಿಯರ್ ಕಳೆದುಕೊಂಡರು. ಅಷ್ಟೇ ಅಲ್ಲ, ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಚಿರಂಜೀವಿ ಮತ್ತು ಟಬು ಕಾಂಬಿನೇಶನ್‌ನಲ್ಲಿ ‘ಭೂಲೋಕ ವೀರುಡು’ ಎಂಬ ಸಿನಿಮಾ ಕೂಡ ಶುರುವಾಗಿ, ನಂತರ ನಿಂತುಹೋಯಿತು. ಟಬು, ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿರುವ ಬಗ್ಗೆ ವರದಿಗಳಿವೆ.



Source link

Leave a Reply

Your email address will not be published. Required fields are marked *