
ಶಿವಮೊಗ್ಗ, ಏಪ್ರಿಲ್ 01: ಆ ಬಾಲಕ ಸಾವನ್ನಪ್ಪಿದರೂ ಆತನ ಸಮಾಧಿಯನ್ನ ಮಾತ್ರ ಕಿಡಿಗೇಡಿಗಳು ಬಿಡುತ್ತಿಲ್ಲ. ಕಳೆದ ಫೆಬ್ರವರಿಯಲ್ಲಿ ಜಗಳ ಬಿಡಸಲು ಹೋದ ಅಮಾಯಕ ಬಾಲಕ ಸಂಕೇತ್ ನನ್ನ (ಸಂಕೇತ್ ಕೊಲೆ ಪ್ರಕರಣ) ಕಿಡಿಗೇಡಿ ಯುವಕರು ಹತ್ಯೆ ಮಾಡಿದ್ದರು. ಇದೀಗ ಆತನ ಸಮಾಧಿ ಸಿದ್ಧಪಡಿಸಿ ಎರಡು ದಿನ ಕಳೆದಿಲ್ಲ, ಅಷ್ಟರಲ್ಲೇ ಸಮಾಧಿಯನ್ನೇ ಕೆಡವಲಾಗಿದೆ. ಯಾರೋ ದುಷ್ಕರ್ಮಿಗಳು ಸಮಾಧಿಯನ್ನು ಕೆಡವಿದ್ದಾರೆ. ಇದೀಗ ಮತ್ತೊಮ್ಮೆ ಸಮಾಧಿ ನಿರ್ಮಾಣ ಮಾಡಲಾಗಿದೆ.
ನಡೆದಿದ್ದೇನು?
ಶಿವಮೊಗ್ಗ ಸೂಳೇಬೈಲು ಬಡಾವಣೆ ನಿವಾಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಕೊಲೆ ಕೇಸಿನಲ್ಲಿ ಅಪ್ರಾಪ್ತರು ಬಂಧಿಯಾಗಿ ಜೈಲು ಸೇರಿದ್ದು, ಸಂಕೇತ್ ಪತ್ರ ಇನ್ನು ಆ ದುಃಖದಿಂದ ಹೊರಬಂದಿಲ್ಲ. ಅಷ್ಟರಲ್ಲೇ ಮತ್ತೊಂದು ಅವಘಡ ನಡೆದಿದೆ. ಅದೇನೆಂದರೆ ಮೃತ ಸಂಕೇತ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಹತ್ಯೆ: ಕೊಲೆಗೆ ಕಾರಣ ಬಿಚ್ಚಿಟ್ಟ ಎಸ್ಪಿ
ಶಿವಮೊಗ್ಗದ ನಗರದ ಸೂಳೆಬೈಲಿನ ಸರ್ಕಾರಿ ಶಾಲೆ ಮುಂಭಾಗ, ಗಲಾಟೆ ಬಿಡಿಸಲು ಹೋಗಿ ಕೊಲೆಯಾದ ಶಾಲಾ ಬಾಲಕ ಸಂಕೇತನ ಸಮಾಧಿಗೆ ಹಾನಿಯಾಗಿದೆ. ಫೆ. 23 ರಂದು ವಿದ್ಯಾರ್ಥಿ ಸಂಕೇತ ಹತ್ಯೆಯಾಗಿದೆ. ಬಳಿಕ ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್‌ನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕಳೆದೆರೆಡು ದಿನಗಳ ಹಿಂದೆಯೇ, ಆತನ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೋ ಸಹ ಅಳವಡಿಸಲಾಗಿದೆ. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗ ಒಡೆದಿರುವುದು ಗೊತ್ತಾಗಿದೆ. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ತಂದೆ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯಬೇಕಾದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಕಿಡಿಗೇಡಿಗಳ ವರ್ತನೆಗೆ ಶಾಸಕ ಚನ್ನಬಸಪ್ಪ ಆಕ್ರೋಶ
ಇನ್ನು ಮಾ. 26 ರಂದಷ್ಟೇ ನಿರ್ಮಿಸಲಾಗಿದೆ ಮೃತ ಸಂಕೇತ ಸಮಾಧಿಯನ್ನು ಕಲ್ಲಿನಿಂದ ಜಜ್ಜಿದ್ದಾರೆ. ಹಿಂದೆ ಹಾಕಿದ್ದ ಗ್ರಾನೈಟ್ ಒಡೆದು ಹಾಕಿದ್ದಾರೆ. ಪ್ರತಿದಿನ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ವಿಶೇಷವಾಗಿ ಪೂಜೆ ಮಾಡಿ ಬರುತ್ತಿದ್ದರು. ಮೊದಲೇ ಸಂಕೇತ್‌ನ ಸಾವಿನ ಬಳಿಕ ಅವರ ಮನೆಯಲ್ಲಿ ನೆಮ್ಮದಿ ಇಲ್ಲ. ಈಗ ಇಂತಹ ಘಟನೆ ನಡೆದಿರುವುದು ಸಂಕೇತ ಪೋಷಕರಿಗೆ ಮತ್ತಷ್ಟು ಘಟನೆ ತಂದಿದೆ. ಈ ವಿಚಾರದ ಬಗ್ಗೆ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ಕಿಡಿಗೇಡಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಲೆ ಪ್ರಕರಣ: 15 ಲಕ್ಷ ರೂ. ಪರಿಹಾರ ನೀಡಿದ ಸರ್ಕಾರ
ತಮ್ಮಿಂದ ಬಹುಬೇಗನೇ ಅಗಲಿರುವ ಪ್ರೀತಿಯ ಪುತ್ರನನ್ನು ನೆನೆದು, ಕಟ್ಟೆ ಕಟ್ಟಿಸಿದ್ದ, ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಿರಾತಕರು, ಸಮಾಧಿಯಲ್ಲೂ ಸಂಕೇತ್‌ಗೆ ನೆಮ್ಮದಿಯಾಗಿರಲು ಬಿಡದೇ ಸತಾಯಿಸುತ್ತಿರುವುದು ಬೇಸರದ ಸಂಗತಿಯೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.