ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್: ಹೆಲಿಕಾಪ್ಟರ್ ಖರೀದಿಸಿದ ರೈತ | Noida Airport Made Locals Rich Overnight Farmer Buys Helicopter

ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್: ಹೆಲಿಕಾಪ್ಟರ್ ಖರೀದಿಸಿದ ರೈತ | Noida Airport Made Locals Rich Overnight Farmer Buys Helicopter



ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್: ಹೆಲಿಕಾಪ್ಟರ್ ಖರೀದಿಸಿದ ರೈತ | Noida Airport Made Locals Rich Overnight Farmer Buys Helicopter

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಭಾರಿ  ಮೊತ್ತದ ಪರಿಹಾರ ದೊರೆತಿದೆ. ಇದರಿಂದಾಗಿ, ಭೂಮಿ ನೀಡಿದ ರೈತರೊಬ್ಬರು 15 ಕೋಟಿ ರೂ. ಪರಿಹಾರ ಪಡೆದು ಹೆಲಿಕಾಪ್ಟರ್ ಖರೀದಿಸಿದ ವಿಚಾರ ಈಗ ಭಾರಿ ಸುದ್ದಿಯಾಗುತ್ತಿದೆ.

ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್

ಸಾಮಾನ್ಯವಾಗಿ ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರಿಂದ ಆಸ್ತಿಯನ್ನು ಖರೀದಿಸಿದರೆ ಅದಕ್ಕೆ ಸರಿಯಾದ ದಾಖಲೆಗಳಿದ್ದರೆ ಒಳ್ಳೆಯ ಮೊತ್ತದ ಪರಿಹಾರ ಸಿಗುತ್ತದೆ. ರಾತ್ರೋರಾತ್ರಿ ಅಲ್ಲಿನ ನಿವಾಸಿಗಳು ಶ್ರೀಮಂತರಾಗುತ್ತಾರೆ. ಹಾಗೆಯೇ ನೋಯ್ಡಾದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸರ್ಕಾರವೂ ಸ್ವಾಧೀನಪಡಿಸಿದ ಭೂಮಿಗೆ ಭಾರಿ ಮೊತ್ತದ ಪರಿಹಾರ ನೀಡಿದೆ. ಇದು ಜನರ ಜೀವನಮಟ್ಟವನ್ನೇ ಬದಲಿಸಿದೆ. ಕೆಲವರು ರಾತ್ರೋರಾತ್ರಿ ಆಗರ್ಭ ಶ್ರೀಮಂತರಾಗಿಬಿಟ್ಟಿದ್ದಾರೆ. ಹಾಗೆಯೇ ಇಲ್ಲಿ ರೈತರೊಬ್ಬರಿಗೆ ತಾವು ನೀಡಿದ ಭೂಮಿಗೆ ಬರೋಬ್ಬರಿ 15 ಕೋಟಿ ರೂಪಾಯಿ ಪರಿಹಾರ ಸಿಕ್ಕಿದ್ದು, ಈ ಹಣದಿಂದ ಈಗ ರೈತರು ಹೆಲಿಕಾಪ್ಟರ್‌ವೊಂದನ್ನು ಖರೀದಿಸಿದ್ದು, ಮುಂದೆ ತಾನು ಥೈಲ್ಯಾಂಡ್‌ಗೆ ಪ್ರವಾಸ ಹೋಗುವುದಾಗಿ ರೈತ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ ಅಂದಹಾಗೆ ನೋಯ್ಡಾ ವಿಮಾನ ನಿಲ್ದಾಣವನ್ನು ನಿನ್ನೆಯಷ್ಟೇ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

ಸಂಪತ್ತಿನ ಮೂಲವಾದ ಖಾಲಿ ಭೂಮಿ

ನೋಯ್ಡಾ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಸುತ್ತಮುತ್ತಲಿನ ಜಾಗಕ್ಕೆ ಚಿನ್ನದ ಬೆಲೆ ಬಂದಿದ್ದು,ಹೀಗಾಗಿ ಇಲ್ಲಿನ ನಿವಾಸಿಗಳಿಗೆ ತಮ್ಮ ಖಾಲಿ ಭೂಮಿ ಹಠಾತ್‌ ಆಗಿ ಸಂಪತ್ತಿನ ಮೂಲವಾಗಿ ಬದಲಾಗಿದೆ. ಜೊತೆಗೆ ತಮ್ಮ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಆಕಾಂಕ್ಷೆಗಳನ್ನು ಈಡೇರಿಸುವ ಅವಕಾಶವಾಗಿ ಬದಲಾಗಿದೆ. ವಿಮಾನ ನಿಲ್ದಾಣದಿಂದಾಗಿ ಭೂಮಿ ಮೌಲ್ಯ ಗಗನಕ್ಕೇರಿದ್ದರಿಂದ ಜನರು ತಮ್ಮ ಆಸೆಗಳನ್ನು ಈಡೇರಿಕೊಂಡು ಸಂತೋಷವಾಗಿದ್ದಾರೆ ಎಂದು ಈ ಭಾಗದ 26 ವರ್ಷದ ಯುವಕ ಶಿವಂ ಪ್ರಜಾಪತಿ ಹೇಳಿದ್ದಾರೆ. ಭೂಮಾಲೀಕರಿಗೆ ಸಿಕ್ಕ ಭಾರಿ ಮೊತ್ತದ ಪರಿಹಾರ ಹಣವೂ ರಾತ್ರೋರಾತ್ರಿ ಅವರ ಜೀವನಶೈಲಿಯನ್ನು ಹೇಗೆ ಬದಲಾಯಿಸಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್

ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣದಿಂದ ಪ್ರಜಾಪತಿ ಸ್ವತಃ ಹೊಸ ಅವಕಾಶಗಳನ್ನು ಕಂಡುಕೊಂಡಿದ್ದಾರೆ. ಅವರು ವಿಮಾನ ನಿಲ್ದಾಣ ಯೋಜನೆ ಮತ್ತು ಹತ್ತಿರದ ಸೌರ ಸ್ಥಾವರಕ್ಕೆ ಕಾರ್ಮಿಕರನ್ನು ಪೂರೈಸುವ ಉಪ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿದ ಗಳಿಕೆಯೊಂದಿಗೆ, ಅವರು ಸ್ನೇಹಿತರೊಂದಿಗೆ ಥೈಲ್ಯಾಂಡ್‌ಗೆ ಅಂತರರಾಷ್ಟ್ರೀಯ ರಜೆಯನ್ನು ಪ್ಲಾನ್ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಇದನ್ನೂ ಊಹಿಸಲೂ ಸಾಧ್ಯವಿರಲಿಲ್ಲ ಎಂದು ಅವರು ಹೇಳುತ್ತಾರೆ.

ವರದಿಯ ಪ್ರಕಾರ, ಕಿಶೋರ್‌ಪುರ್ ಗ್ರಾಮದ ಮತ್ತೊಬ್ಬ ವ್ಯಕ್ತಿ ಅಜಯ್ ಬೆನಿವಾಲ್ ಸಾಧಾರಣ ವ್ಯವಸ್ಥೆಯನ್ನು ಸ್ಥಿರ ಆದಾಯದ ಮೂಲವಾಗಿ ಪರಿವರ್ತಿಸಿದ್ದಾರೆ. ಒಂದು ಕಾಲದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು, ಈಗ ಕಾರ್ಮಿಕರು ಕೆಲಸದಲ್ಲಿರುವಾಗ ತಮ್ಮ ಹೆಲ್ಮೆಟ್ ಮತ್ತು ಕೀಲಿಗಳನ್ನು ಠೇವಣಿ ಇಡುವ ಸಣ್ಣ ಸೇವೆಯನ್ನು ನಡೆಸುವ ಮೂಲಕ ತಿಂಗಳಿಗೆ ಸುಮಾರು 60,000 ರೂ.ಗಳನ್ನು ಸಂಪಾದಿಸುತ್ತಾರೆ. ನಾನು ಮೊದಲು ಅತ್ಯಂತ ಬಡವರಲ್ಲಿ ಒಬ್ಬನಾಗಿದ್ದೆ, ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸ್ವಲ್ಪ ರೆಕಾರ್ಡ್ ಮಾಡಿ ಅಂತ ಫೋನ್ ಕೊಟ್ಟು ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ

ಬನ್ವಾರಿ ಬಾಸ್‌ನ 56 ವರ್ಷದ ನಿವಾಸಿ ನಾನಕ್ ಚಂದ್, ಇಲ್ಲಿ ಏರ್‌ಪೋರ್ಟ್‌ ನಿರ್ಮಾಣ ಚಟುವಟಿಕೆಯ ಉತ್ತುಂಗದಲ್ಲಿದ್ದಾಗ ವಲಸೆ ಕಾರ್ಮಿಕರಿಗೆ ಬಾಡಿಗೆಗೆ ನೀಡಲು ಆರು ಕೊಠಡಿಗಳನ್ನು ಮನೆಗೆ ಸೇರಿಸುವ ಮೂಲಕ ತಮ್ಮ ಮನೆಯನ್ನು ವಿಸ್ತರಿಸಿದ್ದಾರೆ. ಇದು ಮೊದಲು ಸ್ಥಿರವಾದ ಆದಾಯವನ್ನು ತಂದಿದ್ದರೂ ಈಗ ಬೇಡಿಕೆ ತೀವ್ರವಾಗಿ ಕುಸಿದಿದೆ, ಹೆಚ್ಚಿನ ಕೊಠಡಿಗಳು ಖಾಲಿಯಾಗಿವೆ. ಆದರೂ ಒಮ್ಮಿಂದೊಮ್ಮೆಲೇ ಶ್ರೀಮಂತರಾದ ಇವರ ಕತೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.



Source link

Leave a Reply

Your email address will not be published. Required fields are marked *