‘ರಾಜಾ ಶಿವಾಜಿ’ ಪಾತ್ರದಲ್ಲಿ ಅಬ್ಬರಿಸಿದ ರಿತೇಶ್ ದೇಶ್‌ಮುಖ್; ಟೀಸರ್ ಹೇಗಿದೆ ನೋಡಿ

‘ರಾಜಾ ಶಿವಾಜಿ’ ಪಾತ್ರದಲ್ಲಿ ಅಬ್ಬರಿಸಿದ ರಿತೇಶ್ ದೇಶ್‌ಮುಖ್; ಟೀಸರ್ ಹೇಗಿದೆ ನೋಡಿ


'ರಾಜಾ ಶಿವಾಜಿ' ಪಾತ್ರದಲ್ಲಿ ಅಬ್ಬರಿಸಿದ ರಿತೇಶ್ ದೇಶ್‌ಮುಖ್; ಟೀಸರ್ ಹೇಗಿದೆ ನೋಡಿ

ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ಭಾರತದ ಶ್ರೇಷ್ಠ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ಬಹುನಿರೀಕ್ಷಿತ ‘ರಾಜಾ ಶಿವಾಜಿ’ (ರಾಜಾ ಶಿವಾಜಿ) ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ರಿತೇಶ್ ದೇಶ್ಮುಖ್ (ರಿತೇಶ್ ದೇಶಮುಖ್) ಅವರು ಈ ಐತಿಹಾಸಿಕ ಕಥಾಹಂದರದ, ಸಾಹಸ ಪ್ರಧಾನ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಅವರೇ ನಟಿಸುತ್ತಿದ್ದಾರೆ. 2 ನಿಮಿಷ 31 ಸೆಕೆಂಡುಗಳು ಈ ಟೀಸರ್ ದೃಶ್ಯದಲ್ಲಿ ರೋಮಾಂಚನ ಉಂಟುಮಾಡಿದೆ.

ಸಂಜಯ್ ದತ್ ಈ ಸಿನಿಮಾದಲ್ಲಿ ಕ್ರೂರ ಅಫ್ಜಲ್ ಖಾನ್ ಪಾತ್ರದಲ್ಲಿ ನಟಿಸಿದ್ದಾರೆ, ಮಹೇಶ್ ಮಾಂಜ್ರೇಕರ್ ಲಖೂಜಿ ಜಾಧವ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟ ಅಭಿಷೇಕ್ ಬಚ್ಚನ್ ಅವರು ಸಂಭಾಜಿ ಶಹಾಜಿ ಭೋಸಲೆ ಅವರ ಪಾತ್ರದಲ್ಲಿ ಮಿಂಚಿದ್ದಾರೆ. ವಿದ್ಯಾ ಬಾಲನ್, ಜೆನಿಲಿಯಾ ದೇಶ್ಮುಖ್, ಭಾಗ್ಯಶ್ರೀ, ಫರ್ದೀನ್ ಖಾನ್, ಬೋಮನ್ ಇರಾನಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಮತ್ತೊಂದು ದೊಡ್ಡ ಹೈಲೈಟ್ ಎಂದರೆ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರಗಳನ್ನು ಮಾಡಿದ್ದಾರೆ. ಶಿವಾಜಿ ಮಹಾರಾಜರ ಅತ್ಯಂತ ನಂಬಿಕಸ್ತ ಕಮಾಂಡರ್ ಆಗಿದ್ದ ಜೀವಾ ಮಹಾಲಾ ಪಾತ್ರದಲ್ಲಿ ಸಲ್ಮಾನ್ ಖಾನ್ ಅಬ್ಬರಿಸಲಿದ್ದಾರೆ. ರಿತೇಶ್ ದೇಶ್ಮುಖ್ ಅವರ ಜೊತೆಗಿನ ಸ್ನೇಹಕ್ಕಾಗಿ ಸಲ್ಮಾನ್ ಈ ಚಿತ್ರದಲ್ಲಿ ನಟಿಸಲು ತಕ್ಷಣ ಒಪ್ಪಿಕೊಂಡಿದ್ದಾರೆ.

‘ರಾಜಾ ಶಿವಾಜಿ’ ಸಿನಿಮಾದ ಟೀಸರ್:

ಸ್ವರಾಜ್ಯದ ಅಡಿಪಾಯ ಹಾಕಲು ಶಿವಾಜಿ ಮಹಾರಾಜರು ನಡೆಸಿದ ಹೋರಾಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಜಿಯೋ ಸ್ಟುಡಿಯೋಸ್’ ಮತ್ತು ‘ಮುಂಬೈ ಫಿಲ್ಮ್ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಮರಾಠಿ, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಮೇ 1 ರಂದು ಸಿನಿಮಾ ರಿಲೀಸ್ ಆಗಲಿದೆ. ಟೀಸರ್ ನೋಡಿದ ಬಳಿಕ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಶವವಾಗಿ ಪತ್ತೆಯಾದ ಡ್ಯಾನ್ಸರ್; ರಿತೇಶ್ ದೇಶಮುಖ್ ಸಿನಿಮಾ ಶೂಟಿಂಗ್ ವೇಳೆ ಅವಘಡ

ಇನ್ನೊಂದೆಡೆ ನಟ ರಿಷಬ್ ಶೆಟ್ಟಿ ಅವರು ಕೂಡ ಶಿವಾಜಿ ಮಹಾರಾಜ್ ಜೀವನಾಧಾರಿತ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಆ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. 2025ರಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದ ‘ಛಾವ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *