ಬೆಂಗಳೂರಿಗರಿಗೆ ಬಿಡದ ಬಿಸಿಲ ಬೇಗೆ: ಉತ್ತರ ಕರ್ನಾಟಕದಲ್ಲಿ ಕೆಂಡದಂತಹ ಬಿಸಿಲು! ಮಲೆನಾಡಿನಲ್ಲಿ ಹೇಗಿದೆ ತಾಪಮಾನ?

ಬೆಂಗಳೂರಿಗರಿಗೆ ಬಿಡದ ಬಿಸಿಲ ಬೇಗೆ: ಉತ್ತರ ಕರ್ನಾಟಕದಲ್ಲಿ ಕೆಂಡದಂತಹ ಬಿಸಿಲು! ಮಲೆನಾಡಿನಲ್ಲಿ ಹೇಗಿದೆ ತಾಪಮಾನ?


ಬೆಂಗಳೂರಿಗರಿಗೆ ಬಿಡದ ಬಿಸಿಲ ಬೇಗೆಗೆ: ಉತ್ತರ ಕರ್ನಾಟಕದಲ್ಲಿ ಕೆಂಡದಂತಹ ಬಿಸಿಲು! ಮಲೆನಾಡಿನಲ್ಲಿ ಹೇಗಿದೆ ತಾಪಮಾನ?

ಬೆಂಗಳೂರು, ಏ.2: ರಾಜಧಾನಿ ಬೆಂಗಳೂರಿನಲ್ಲಿ ಇಂದೂ ಕೂಡ ಒಣ ಹವಾಮಾನ ಮುಂದುವರಿಯಲಿದೆ. ಗರಿಷ್ಠ ತಾಪಮಾನವು 35°C ನಿಂದ 37°C ವರೆಗೆ ಇರುತ್ತದೆ. ಸಂಜೆಯ ವೇಳೆಗೆ ಆಕಾಶ ಮೋಡದಿಂದ ಕೂಡಿದ್ದರೂ ಮಳೆಯ ಮುನ್ಸೂಚನೆ ತೀರಾ ಕಡಿಮೆಯಾಗಿದೆ. ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲ ಧಗೆ ವಿಪರೀತವಾಗಲಿದೆ. ಸ್ಥಳೀಯ ಕೆಲವು ಭಾಗಗಳಲ್ಲಿ ಉಷ್ಣಾಂಶವು 41°C ದಾಟುವ ಸಾಧ್ಯತೆಯಿದೆ, ಮಧ್ಯಾಹ್ನದ ವೇಳೆ ಬಿಸಿಗಾಳಿ (ಹೀಟ್ ವೇವ್) ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸೆಖೆ ಮತ್ತು ಹಬೆ (ಹ್ಯೂಮಿಡ್) ಹೆಚ್ಚಾಗಲಿದೆ. ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೋಡೂರು ಕವಿದ ವಾತಾವರಣವಿರಲಿದೆ, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು (42°C ಸಂಭವನೀಯ) ಗರಿಷ್ಠ ಉಷ್ಣಾಂಶ ಇರಲಿದೆ ಎಂದು ಹೇಳಲಾಗಿದೆ. ಮಲೆನಾಡು ಭಾಗದಲ್ಲಿ (20°C – 22°C) ಕನಿಷ್ಠ ಉಷ್ಣಾಂಶ ಇರಲಿದೆ. ಇನ್ನು ಇಲಾಖೆ ಹೇಳುವಂತೆ ಉತ್ತರ ಕರ್ನಾಟಕದ ಜನರಿಗೆ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.

ಇಲ್ಲಿದೆ ನೋಡಿ: 1,2,3,4,5,6,7 ಈ ದಿನದಂದು ಮಧ್ಯಾಹ್ನದ ನಂತರ ಬರಲಿದೆ ಗುಡುಗು ಸಹಿತ ಮಳೆ; ಎಲ್ಲೆಲ್ಲಿ ಮಳೆಯಾಗಬಹುದೇ?

ಕರಾವಳಿಯಲ್ಲಿ ಬಿಸಿಲಿನೊಂದಿಗೆ ಸೆಖೆ ಮತ್ತು ಹಬೆ ಜನರನ್ನ ಹೆಚ್ಚು ಕಾಡಲಿದೆ. ಗರಿಷ್ಠ 33°C – 35°C, ಆದರೆ ಅನುಭವಕ್ಕೆ ಬರುವ ತಾಪಮಾನ (ಅನಿಸುತ್ತದೆ) 38°C ದಾಟಬಹುದು. ಕಡಲತೀರದ ಭಾಗಗಳಲ್ಲಿ ಸಂಜೆ ವೇಳೆ ತಂಗಾಳಿ ಬೀಸುವ ಸಾಧ್ಯತೆ ಇದೆ. ಮೈಸೂರು ಭಾಗದಲ್ಲಿ ಒಣ ಹವಾಮಾನವಿದ್ದರೂ, ಸಂಜೆಯ ವೇಳೆಗೆ ತುಸು ತಂಪು ವಾತಾವರಣವಿರಲಿದೆ. ದಿನವಿಡೀ ಬಿಸಿಲು, ಸಂಜೆ ಮೋಡ ಕವಿದ ವಾತಾವರಣ. ಮಳೆಯ ಸಾಧ್ಯತೆ ತೀರಾ ಕಡಿಮೆ ಇದೆ. ಉತ್ತರ ಕರ್ನಾಟಕ (ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ) ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇಲ್ಲಿ ತಪಮಾನ ಗರಿಷ್ಠ 39°C ನಿಂದ 42°C ವರೆಗೆ ಏರಿಕೆಯಾಗುವ ಸಂಭವವಿದೆ. 12 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ನೇರ ಬಿಸಿ ಮೈಯೊಡ್ಡದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *