Headlines

Bhagyalakshmi Serial: ನಾನ್ ಮದುವೆ ಆಗಲ್ಲ-ಉಲ್ಟಾ ಹೊಡೆದ ಆದೀಶ್ವರ್;‌ ಮತ್ತೆ ನರಕವಾದ ಭಾಗ್ಯ ಜೀವನ

Bhagyalakshmi Serial: ನಾನ್ ಮದುವೆ ಆಗಲ್ಲ-ಉಲ್ಟಾ ಹೊಡೆದ ಆದೀಶ್ವರ್;‌ ಮತ್ತೆ ನರಕವಾದ ಭಾಗ್ಯ ಜೀವನ

Bhagyalakshmi Serial: ನಾನ್ ಮದುವೆ ಆಗಲ್ಲ-ಉಲ್ಟಾ ಹೊಡೆದ ಆದೀಶ್ವರ್;‌ ಮತ್ತೆ ನರಕವಾದ ಭಾಗ್ಯ ಜೀವನ

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ, ಆದಿ ಮದುವೆ ಆಗ್ತಾರೆ ಎನ್ನುವಾಗಲೇ ಇನ್ನೊಂದು ಟ್ವಿಸ್ಟ್‌ ಸಿಕ್ಕಿದೆ. ಇವರಿಬ್ಬರು ಮದುವೆ ಆಗೋದು ಅನೇಕರಿಗೆ ಇಷ್ಟವೇ ಇಲ್ಲ. ಹೀಗಾಗಿ ಒಂದಾದ ಮೇಲೆ ಒಂದರಂತೆ ಸಮಸ್ಯೆ ಬರುತ್ತಿದೆ.

ಆದಿ, ಭಾಗ್ಯ ಮದುವೆ ತಡೆಯಬೇಕು ಎಂದು ಕನ್ನಿಕಾ ಕೂಡ ಪ್ಲ್ಯಾನ್‌ ಮಾಡಿದ್ದಳು. ಯಾರು ಏನೇ ಹೇಳಿದರೂ ಕೂಡ ಆದಿ ಮಾತ್ರ ಭಾಗ್ಯ ಪರವಾಗಿದ್ದನು. ಈಗ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ಭರ್ಜರಿ ಟ್ವಿಸ್ಟ್‌ ಸಿಕ್ಕಿದೆ.

ಹೌದು, ತಾಂಡವ್‌ ಬದಲಾಗಿದ್ದಾನೆ ಎಂದು ಎಲ್ಲರೂ ನಂಬಿದ್ದಾರೆ. ಆದರೆ ತಾಂಡವ್‌ ಮೇಲೆ ಭಾಗ್ಯಗೆ ನಂಬಿಕೆಯೇ ಇಲ್ಲ. ನಾಟಕ ಮಾಡಿಕೊಂಡು ಭಾಗ್ಯ ಬದುಕಿನಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಬೇಕು ಎಂದು ತಾಂಡವ್‌ ಫಿಕ್ಸ್‌ ಆಗಿದ್ದಾನೆ. ಆದರೆ ವಿಧಿ ಕೂಡ ಇದಕ್ಕೆ ಸಾಥ್‌ ಕೊಡುತ್ತಿದೆ.

ಆದೀಶ್ವರ್‌ ಈಗ ಭಾಗ್ಯ ಬಳಿ ಬಂದು, “ನಾವು ಯಾಕೆ ಮದುವೆ ಆಗಬೇಕು? ನಾವಿಬ್ಬರು ಸ್ನೇಹಿತರಾಗಿ ಇರಬಹುದು ಅಲ್ವೇ?” ಎಂದು ಹೇಳಿದ್ದಾನೆ. ವಾಹಿನಿಯು ಈ ಪ್ರೋಮೋ ರಿಲೀಸ್‌ ಮಾಡಿದ್ದು, ಎಲ್ಲರಿಗೂ ಆಶ್ಚರ್ಯ ತಂದಿದೆ.

ಭಾಗ್ಯ ಮಾವ ಧರ್ಮರಾಜ್‌ ಕೂಡ ಈಗ ಹೊಸ ಬೇಡಿಕೆ ಇಟ್ಟಿದ್ದಾನೆ. ಆಸ್ಪತ್ರೆಯಲ್ಲಿರುವ ಮಾವ ಈಗ ಸೊಸೆಗೆ ಹೊಸ ಬೇಡಿಕೆ ಇಟ್ಟಿದ್ದಾನೆ. “ನನ್ನ ಬೇಡಿಕೆ ಈಡೇರಿಸುತ್ತೀಯಾ ಅಲ್ವಾ? ತಾಂಡವ್‌ ಜೊತೆ ಮರು ಮಾಂಗಲ್ಯ ಆಗ್ತೀಯಾ?” ಎಂದು ಮಾವ ಕೇಳಿದ್ದಾನೆ. ಮಾವನ ಮಾತು ಕೇಳಿ ಭಾಗ್ಯಗೆ ತಲೆಬಿಸಿ ಶುರು ಆಗಿದೆ.

ಆದಿಯೇ ಈಗ ಮದುವೆ ಆಗಲು ರೆಡಿ ಇಲ್ಲ. ಇನ್ನೊಂದು ಕಡೆ ಧರ್ಮರಾಜ್‌ ಕೂಡ ತಾಂಡವ್‌ ಜೊತೆ ಮದುವೆ ಆಗು ಅಂತಿದ್ದಾನೆ. ತನ್ವಿಗೂ ಕೂಡ ತಾಯಿ ಆದಿಯನ್ನು ಮದುವೆ ಆಗೋದು ಇಷ್ಟವೇ ಆಗ್ತಿಲ್ಲ. ಹೀಗಾಗಿ ಭಾಗ್ಯ ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ. ತಾಂಡವ್‌ ಅಸಲಿಯತ್ತು ಏನು? ಆದಿ ಯಾಕೆ ಮದುವೆಗೆ ಒಪ್ತಿಲ್ಲ ಎಂದು ಅವಳು ಕಂಡು ಹಿಡಿಯುತ್ತಾಳಾ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ತಾಂಡವ್‌- ಸುದರ್ಶನ್‌ ರಂಗಪ್ರಸಾದ್‌

ಆದಿ- ಹರೀಶ್‌ ರಾಜ್‌

ಭಾಗ್ಯ- ಸುಷ್ಮಾ ರಾವ್

Source link

Leave a Reply

Your email address will not be published. Required fields are marked *