Headlines

‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

‘ರಾಮಾಯಣ’ ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ


'ರಾಮಾಯಣ' ಟೀಸರ್: ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆ

ಭಾರತ ಚಿತ್ರರಂಗದ (ಭಾರತೀಯ ಚಲನಚಿತ್ರ) ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (ರಾಮಾಯಣ) ಟೀಸರ್ ಇಂದು (ಏಪ್ರಿಲ್ 02) ಬಿಡುಗಡೆಯಾಗಿದೆ. ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಹಲವಾರು, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕಥೆಯನ್ನು ಪ್ರಸ್ತುತಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ ಅದ್ಧೂರಿಯಾದ ಸಾಹಸ ಇದಾಗಿದೆ. ಟೀಸರ್ ನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಧುನಿಕ ತಂತ್ರಜ್ಞಾನದ ಸ್ಪರ್ಷದಲ್ಲಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ಚಿತ್ರತಂಡ ಮಾಡಿದೆ. ಇದೀಗ ಬಿಡುಗಡೆ ಆಗಿರುವ 2:38 ನಿಮಿಷದ ಟೀಸರ್ನ ಪ್ರತಿ ದೃಶ್ಯದಲ್ಲಿಯೂ ಅದ್ಧೂರಿತನ ಎದ್ದು ಕಾಣುತ್ತಿದೆ. ಅದ್ಧೂರಿತನದ ಜೊತೆಗೆ ನಿರ್ದೇಶಕರು ವಾಲ್ಮೀಕಿ ರಾಮಾಯಣದ ಕತೆಗೆ ನಿಷ್ಠವಾಗಿರುವುದು ಸಹ ಗೋಚರಿಸುತ್ತಿದೆ.

ಈಗ ಬಿಡುಗಡೆ ಆಗಿರುವ ಟೀಸರ್ ನಲ್ಲಿ ರಾಮನ ಪಾತ್ರವನ್ನಷ್ಟೇ ಪ್ರಮುಖವಾಗಿ ತೋರಿಸಲಾಗಿದೆ. ಶ್ರೀರಾಮನ ಬಾಲಕಾಂಡ, ಅರಣ್ಯಕಾಂಡದ ಕತೆಯ ಭಾಗಗಳನ್ನು ಮಾತ್ರವೇ ಟೀಸರ್‌ನಲ್ಲಿ ಸೇರಿಸಿರುವುದು ತಿಳಿದು ಬರುತ್ತಿದೆ. ರಾಮನ ಪಟ್ಟಾಭಿಷೇಕದ ಮುಂಚಿನ ಕತೆ, ವನವಾಸ, ಅರಣ್ಯದಲ್ಲಿ ಸಾಹಸಗಳು ಇತ್ಯಾದಿ ದೃಶ್ಯಗಳು ಟೀಸರ್ ನಲ್ಲಿವೆ. ವಿಶೇಷವಾಗಿ ರಾಮನ ವಿಚಿತ್ರ ಜೀವಿಗಳೊಟ್ಟಿಗೆ ಸೆಣೆಸಾಡುತ್ತಿರುವ ಕೆಲವು ದೃಶ್ಯಗಳು ಸಹ ಟೀಸರ್ ನಲ್ಲಿವೆ.

ರಣಬೀರ್ ಕಪೂರ್, ಶ್ರೀರಾಮನ ಪಾತ್ರದಲ್ಲಿ ಅದ್ಭುತವಾಗಿ ಕಾಣುತ್ತಿದೆ. ಅವರ ಮುಖ, ಮೈಕಟ್ಟು ರಾಮನ ಪಾತ್ರಕ್ಕೆ ಚೆನ್ನಾಗಿ ತೋರುತ್ತಿದೆ. ಆದರೆ ಟೀಸರ್ ನಲ್ಲಿ ಅವರ ಪಾತ್ರ ಹೊರತಾಗಿ ಇನ್ಯಾರ ಪಾತ್ರವನ್ನೂ ಸಹ ತೋರಿಸಿಲ್ಲ. ಸೀತೆ, ಲಕ್ಷ್ಮಣನ ಪಾತ್ರವನ್ನೂ ಸಹ ಈಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ತೋರಿಸಿಲ್ಲ. ಯಶ್ ಅವರ ರಾವಣನ ಪಾತ್ರ ಟೀಸರ್ನ ಅಂತ್ಯದಲ್ಲಿ ಬರುತ್ತದೆಯಾದರೂ ಯಶ್ ಪಾತ್ರವನ್ನೂ ಸಹ ಹಿಂದಿನಿಂದ ಮಾತ್ರ ತೋರಿಸಲಾಗಿದೆ. ಜೊತೆಗೆ ರಾವಣನ ಪುಷ್ಪಕವಿಮಾನವನ್ನು ಸಹ ತೋರಿಸಲಾಗಿದೆ.

ಒಟ್ಟಾರೆಯಾಗಿ ಈಗ ಬಿಡುಗಡೆ ಆಗಿರುವ ಟೀಸರ್ , ‘ರಾಮಾಯಣ’ ಕತೆ ಭಾರತೀಯ ಈ ಹಿಂದೆ ನೋಡಿದ ಇನ್ಯಾವುದೇ ರಾಮಾಯಣ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಬಲು ಅದ್ಧೂರಿಯಾಗಿ ಇರಲಿದೆ ಎಂಬುದಂತೂ ಖಾತ್ರಿ. ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಿ ನಿತೀಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *