Headlines

ಚಿನ್ನದ ಚೈನ್​ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಚಿನ್ನದ ಚೈನ್​ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ


ಚಿನ್ನದ ಚೈನ್ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಭಾನುಕ ರಾಜಪಕ್ಸೆ ಅವರು ನಟಿ ಹರ್ಷಿ ರಸಂಗ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ತಿಳಿಸಲಾಗಿದೆ ರಾಜಪಕ್ಸೆ ನಟಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಚಿನ್ನದ ಸರ ಎಂಬುದು ವಿಶೇಷ.

ಏನಿದು ಪ್ರಕರಣ?

ಭಾನುಕ ರಾಜಪಕ್ಸೆ ಹಾಗೂ ನಟಿ ಹರ್ಷಿ ರಸಂಗ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು. ಆ ಸಮಯದಲ್ಲಿ ರಾಜಪಕ್ಸೆ ಅವರು ಚಿನ್ನದ ಸರ ಮತ್ತು ಪೆಂಡೆಂಟ್ ಅನ್ನು ಹರ್ಷಿಗೆ ನೀಡಿದ್ದರು.

ಆದರೆ ಇವರಿಬ್ಬರ ಬ್ರೇಕ್-ಅಪ್ ಆದ ನಂತರ, ರಾಜಪಕ್ಸೆ ಅವರು ತಮ್ಮ ಆಭರಣವನ್ನು ಮರಳಿ ಕೇಳಿದ್ದಾರೆ. ಈ ವೇಳೆ ನಟಿ ಚೈನ್ ಹಿಂತಿರುಗಿರಲಿಲ್ಲ. ಆ ಬಳಿಕ ಆಭರಣವನ್ನು ಹರ್ಷಿ ರಸಂಗ ಅಡವಿಟ್ಟಿರುವುದು ಗೊತ್ತಾಗಿದೆ.

ಭಾನುಕ ರಾಜಪಕ್ಸೆ ಅವರ ಪ್ರಕಾರ, ನಟಿ ಹರ್ಷಿ ರಸಂಗ ಅವರು ತಮ್ಮ ಅನುಮತಿಯಿಲ್ಲದೆ ಈ ಆಭರಣವನ್ನು ಅಡವಿಟ್ಟಿದ್ದಾರೆ. ಆದರೆ ನಟಿ ಹರ್ಷಿ, ಆ ಸರವನ್ನು ರಾಜಪಕ್ಸೆ ತಮಗೆ ಉಡುಗೊರೆಯಾಗಿ ನೀಡಿದ್ದರು ಎಂದು ವಾದಿಸುತ್ತಿದ್ದಾರೆ.

ನಟಿಯ ಬಂಧನ:

ಈ ಪ್ರಕರಣಕ್ಕೆ ದೂರು ದಾಖಲಾದ ನಂತರ, ಹರ್ಷಿ ರಸಂಗ ಅವರನ್ನು ಬಂಧಿಸಿದ್ದರು. ಜೊತೆಗೆ ಮಾರ್ಚ್ 29, 2026 ರಂದು ಕಡುವೇಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಬಂಧನದ ಬಳಿಕ ನ್ಯಾಯಾಲಯದಲ್ಲಿ “ಆಭರಣವನ್ನು ಮರಳಿ ಬಿಡಿಸಿಕೊಳ್ಳಬಹುದು” ಎಂದು ಹರ್ಷಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯತಿರಿಕ್ತವಾದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಭಾನುಕಾ ರಾಜಪಕ್ಸೆಯನ್ನು ಗುರಿಯಾಗಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಆಕ್ರೋಶಗೊಂಡ ರಾಜಪಕ್ಸೆ ಏಪ್ರಿಲ್ 1, 2026 ರಂದು ಕಾನೂನು ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸಾಹಿಬ್ ಝಾದ ಫರ್ಹಾನ್

ಈ ಪ್ರಕರಣಕ್ಕೆ ಕಳುವಾದ ಅಥವಾ ಅಡವಿಡಲಾದ ಆಭರಣವನ್ನು ಪಡೆಯಲು ತಲಂಗಮ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಹರ್ಷಿ ರಸಂಗ ವಿರುದ್ಧದ ‘ನಂಬಿಕೆ ದ್ರೋಹ’ದ ಪ್ರಕರಣದ ಮುಂದಿನ ವಿಚಾರಣೆಯು ಏಪ್ರಿಲ್ 22, 2026 ರಂದು.

ಐಪಿಎಲ್‌ನಲ್ಲಿಲ್ಲ ಭಾನುಕ:

ಶ್ರೀಲಂಕಾದ ಸ್ಫೋಟಕ ದಾಂಡಿಗ ಭಾನುಕ ರಾಜಪಕ್ಸೆ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡ ಆಟಗಾರ. ಪಂಜಾಬ್ ಕಿಂಗ್ಸ್ ಪರ 13 ಪಂದ್ಯಗಳನ್ನಾಡಿದ್ದ ಎಡಗೈ ದಾಂಡಿಗ ಈ ಬಾರಿಯ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಲಂಕಾ ದಾಂಡಿಗನನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

 



Source link

Leave a Reply

Your email address will not be published. Required fields are marked *