
ಶರಣ್ ಅವರು ಕೇವಲ ಒಳ್ಳೆಯ ನಟ ಮಾತ್ರ ಅಲ್ಲ ಅವರು ಅದ್ಭುತ ಹಾಡುಗಾರ ಕೂಡ ಹೌದು. ಕನ್ನಡದಲ್ಲಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಇಂದು (ಏಪ್ರಿಲ್ 2) ಹನುಮಜಯಂತಿ. ಹೀಗಾಗಿ, ಅವರು ವಿಶೇಷ ಹಾಡನ್ನು ಹಾಡಿದ್ದಾರೆ. ಹನುಮಂತಗೆ ಗೌರವ ಸೂಚಿಸುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಂಡಿದ್ದಾರೆ.ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅವರ ಧ್ವನಿ ಹಲವು ಜನರಿಗೆ ಇಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.