Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ | India Becomes Naxal Free Nation Amit Shah Operation Black Forest Kannada San Videoshow

Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ | India Becomes Naxal Free Nation Amit Shah Operation Black Forest Kannada San Videoshow


ನವದೆಹಲಿ (ಏ.2): ಭಾರತಕ್ಕೆ ದಶಕಗಳ ಕಾಲ ಆಂತರಿಕ ಭದ್ರತೆಯ ಸವಾಲಾಗಿ ಕಾಡುತ್ತಿದ್ದ ನಕ್ಸಲ್ ವಾದಕ್ಕೆ ಕೊನೆಗೂ ಶಾಶ್ವತ ಅಂತ್ಯ ಸಿಕ್ಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆ ನೀಡಿದ್ದ ಗಡುವಿನಂತೆ, ದೇಶ ಈಗ ಅಧಿಕೃತವಾಗಿ ‘ನಕ್ಸಲ್ ಮುಕ್ತ’ ರಾಷ್ಟ್ರವಾಗಿದೆ. 59 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದ ಈ ಸಶಸ್ತ್ರ ಹೋರಾಟವನ್ನು ಮೋದಿ ಸರ್ಕಾರ ತನ್ನ ಇಚ್ಛಾಶಕ್ತಿಯ ಮೂಲಕ ಬುಡಮೇಲು ಮಾಡಿದೆ.

59 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!

ಮೋದಿ-ಶಾ ಜೋಡಿಯ ಆಪರೇಷನ್: ಕೇವಲ ಸೇನಾ ಕಾರ್ಯಾಚರಣೆ ಅಷ್ಟೇ ಅಲ್ಲದೆ, ಶರಣಾದ ನಕ್ಸಲರಿಗೆ ಮುಖ್ಯವಾಹಿನಿಯ ಬದುಕು ನೀಡುವ ಮೂಲಕ ಸರ್ಕಾರ ಈ ಸಾಧನೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ನಡೆದ ಸಮಗ್ರ ಕಾರ್ಯಾಚರಣೆಯ ಫಲವಾಗಿ, 2,218 ನಕ್ಸಲರ ಬಂಧನ ಮತ್ತು 4,839 ಮಂದಿ ಶರಣಾಗತಿಯಾಗಿದೆ. ಕೆಂಪು ಕಾರಿಡಾರ್ ಎಂದು ಗುರುತಿಸಲ್ಪಟ್ಟಿದ್ದ ಪ್ರದೇಶಗಳು ಇಂದು ನಕ್ಸಲ್ ಮುಕ್ತವಾಗಿವೆ.

ಕೆಂಪು ಸಾಮ್ರಾಜ್ಯದ ಪತನ: ಅಮಿತ್ ಶಾ ಅವರ ‘ಆಪರೇಷನ್ ಬ್ಲ್ಯಾಕ್ ಫಾರೆಸ್ಟ್’ ಮೂಲಕ ನಕ್ಸಲರ ನೆಲೆಗಳನ್ನು ಸಂಪೂರ್ಣ ನಾಶಪಡಿಸಲಾಗಿದೆ. ಯಾವುದೇ ಮ್ಯಾಜಿಕ್ ಇಲ್ಲದೆ, ದೀರ್ಘಕಾಲದ ಯೋಜಿತ ತಂತ್ರಗಾರಿಕೆಯಿಂದ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ. ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ ಶೂನ್ಯಕ್ಕೆ ತಲುಪಿದ್ದು, ದೇಶದ ಆಂತರಿಕ ಭದ್ರತೆಯಲ್ಲಿ ಇದು ಹೊಸ ಮೈಲಿಗಲ್ಲಾಗಿದೆ.



Source link

Leave a Reply

Your email address will not be published. Required fields are marked *