ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಸುಮಾರು 70 ಗೋಧಿ ಮೂಟೆಗಳನ್ನು ಶಾಲಾ ಆವರಣದಲ್ಲಿ 10 ಅಡಿ ಆಳದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಜೆಸಿಬಿ ಮೂಲಕ ಭೂಮಿ ಅಗೆದಾಗ ಮೂಟೆಗಳು ಸಿಕ್ಕಿವೆ.

ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು 10 ಅಡಿ ಆಳದಲ್ಲಿ ಸುಮಾರು ಗೋಧಿಯ 70 ಮೂಟೆ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಗೋಧಿ ಮೂಟೆಗಳನ್ನು ಹೂಳಲಾಗಿದೆ.

ಇಂದು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದಾಗ 10 ಅಡಿ ಆಳದಲ್ಲಿ ಗೋಧಿ ಮೂಟೆಗಳು ಪತ್ತೆಯಾಗಿವೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹರೀಶ್ ಎಂಬವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಒಂದು ವರ್ಷದ ಹಿಂದೆ ಗೋಧಿ ಮೂಟೆಗಳನ್ನು ಹೂಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಾಂಶುಪಾಲ ಹರೀಶ್ ಯಾಕೆ ಗೋಧಿ ಮೂಟೆಗಳನ್ನು ಹೂತರು ಎಂಬುದಕ್ಕೆ ನಿಖರ ಉತ್ತರ ಲಭ್ಯವಾಗಿಲ್ಲ. ರಹಸ್ಯವಾಗಿ ಸಂಗ್ರಹಿಸಿದ್ದ ಗೋಧಿ ಮೂಟೆ ಮಾರಾಟವಾಗದ ಹಿನ್ನೆಲೆ ಅಂತಿಮವಾಗಿ ಹೂತಿರಬಹುದು ಎಂಬ ಅನುಮಾನಗಳು ಮೂಡಿವೆ.

ವಸತಿ ಶಾಲೆಯ ಸಿಬ್ಬಂದಿ ಗೋಧಿ ಹಾಳಾಗಿದ್ದರಿಂದ ಹೂಳಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದು ವೇಳೆ ಗೋಧಿ ಹಾಳಾಗಿದ್ರೆ ಸರ್ಕಾರಕ್ಕೆ ಹಿಂದಿರುಗಿಸಬೇಕಿತ್ತು. ಸೇವನೆಗೆ ಯೋಗ್ಯವಲ್ಲದ ಗೋಧಿ ಆಗಿದ್ರೆ ಆಹಾರ ಇಲಾಖೆ ಸಿಬ್ಬಂದಿ ಗಮನಕ್ಕೆ ತರಬೇಕಿತ್ತು. ಆದ್ರೆ ಈ ಯಾವ ಪ್ರಕ್ರಿಯೆ ನಡೆಯದೇ ಗೋಧಿ ಹೂತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ

ಸಾರ್ವಜನಿಕರ ದೂರಿನಡಿ ಅಧಿಕಾರಿಗಳು ಭೂಮಿ ಅಗೆದಾಗ ಅಪಾರ ಪ್ರಮಾಣದ ಗೋಧಿ ಮೂಟೆಗಳು ಪತ್ತೆಯಾಗಿವೆ. 2025ರ ಬೇಸಿಗೆ ಸಂದರ್ಭದಲ್ಲಿ ಗೋಧಿ ಹೂತಿರುವ ಅನುಮಾನ ಮೂಡಿದ್ದು, ವಸತಿ ಶಾಲೆಯ ಮಕ್ಕಳಿಗೆ ಸರಿಯಾಗಿ ಆಹಾರ ವಿತರಣೆ ಮಾಡಿಲ್ಲವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿ ಬಂದಿವೆ.

ಇದನ್ನೂ ಓದಿ: ಖರ್ಚಿಗೆ ಒಂದಿಷ್ಟು ಕೊಡಿ? ನಾಚಿಕೆ ಬಿಟ್ಟು ರೈತನ ಬಳಿ ಲಂಚ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ

Source link
10 ಅಡಿ ಆಳದಲ್ಲಿ ಗೋಧಿಯ 70 ಮೂಟೆ ಹೂತಿಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್