Headlines

IPL 2026: LSG vs DC ಪಂದ್ಯದ ವೇಳೆ ಅಭಿಮಾನಿಗಳ ಮಾರಾಮಾರಿ!

IPL 2026: LSG vs DC ಪಂದ್ಯದ ವೇಳೆ ಅಭಿಮಾನಿಗಳ ಮಾರಾಮಾರಿ!


IPL 2026: LSG vs DC ಪಂದ್ಯದ ವೇಳೆ ಅಭಿಮಾನಿಗಳ ಮಾರಾಮಾರಿ!

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್‌ನಲ್ಲಿ ಕ್ರೀಡಾ ಸ್ಫೂರ್ತಿಗೆ ಮಸಿ ಬಳಿಯಂತಹ ಘಟನೆಯೊಂದು ನಡೆದಿದೆ. ಏಪ್ರಿಲ್ 1 ರಂದು ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಿನ ಪಂದ್ಯದ ವೇಳೆ ಅಭಿಮಾನಿಗಳು ಪರಸ್ಪರ ಹೊಡೆದಾಡಿದರು.

ಪಂದ್ಯ ನಡೆಯುತ್ತಿದ್ದಾಗ ಸ್ಟೇಡಿಯನ್ನ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದೆ. ಇದು ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಒಬ್ಬರಿಗೊಬ್ಬರು ಗುದ್ದಾಟ ಮತ್ತು ಒಡೆಯಾಟ ಶುರುವಾಗಿದೆ. ಈ ಮಾರಮಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು “WWE ಕುಸ್ತಿ” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಗಲಾಟೆ ಜೋರಾಗದ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗಲಾಟೆ ಮಾಡಿದವರನ್ನು ಸ್ಟೇಡಿಯಂನಿಂದ ಹೊರಹಾಕಲಾಯಿತು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಈ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 18.4 141 ರನ್ ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17.1 ಚೇಸ್ ಮಾಡಿ 6 ವಿಕೆಟ್ಗಳನ್ನು ಜಯ ಸಾಧಿಸಿದೆ.

 



Source link

Leave a Reply

Your email address will not be published. Required fields are marked *